More

    ಹೊಳೆ, ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಳ

    ಆನಂದಪುರ: ಇಲ್ಲಿಗೆ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ನಾಲ್ಕೆÊದು ದಿನಗಳಿಂದ ಸತತ ಮಳೆಯಾಗುತ್ತಿದೆ. ಸರಾಸರಿ ಆರ್ಧ ಗಂಟೆ ಧಾರಾಕಾರ ಮಳೆ ಸುರಿದು ಒಂದು ಗಂಟೆಗೂ ಅಽಕ ಕಾಲ ನಡುವೆ ಬಿಡುವು ನೀಡುತ್ತಿದೆ. ಅಽಕ ಮಳೆ ಬೀಳುತ್ತಿದ್ದರೂ ಮಧ್ಯೆ ಈ ರೀತಿ ಬಿಡುವು ನೀಡುತ್ತಿರುವ ಕಾರಣ ಪ್ರವಾಹ ಇತ್ಯಾದಿ ಹಾನಿ ಉಂಟಾಗಿಲ್ಲ. ಜು.12ವರೆಗೂ ಸಾಕಷ್ಟು ಮಳೆ ಇಲ್ಲದ ಕಾರಣ ಎಲ್ಲ ಹೊಳೆ-ಹಳ್ಳಗಳು ನೀರಿನ ಹರಿವು ಕಂಡಿರಲಿಲ್ಲ. ಈಗ ಹೊಳೆಯಲ್ಲಿ ನೀರಿನ ಹರಿವು ಆರಂಭವಾಗಿದ್ದು ರೈತರು ಸಮಾಧಾನ ಪಡುವಂತಾಗಿದೆ. ಇನ್ನೂ ಕೆರೆ ಮತ್ತು ಚಿಕ್ಕಪುಟ್ಟ ಅಣೆಕಟ್ಟುಗಳು ಭರ್ತಿಯಾಗಿಲ್ಲ. ಇನ್ನಷ್ಟು ಮಳೆಯಾದರೆ ಮಾತ್ರ ಕೆರೆ, ಬಾವಿ ಇತ್ಯಾದಿ ನೀರಿನ ಮೂಲಗಳು ಜಲ ಭರಿತವಾಗಲಿದೆ.
    ಯಡೇಹಳ್ಳಿ ಗ್ರಾಪಂ ವ್ಯಾಪ್ತಿಯ ಸರಗುಂದ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಗೌರಮ್ಮ ಕೋಂ ಗುತ್ಯಪ್ಪ ಎಂಬುವರ ದನದ ಕೊಟ್ಟಿಗೆ ಗೋಡೆ ಬಿದ್ದು ಮೇಲ್ಛಾವಣಿ ಕುಸಿದಿದೆ. ಕೊಟ್ಟಿಗೆಯಲ್ಲಿ ದನ ಕರುಗಳಿಗೆ ಅಲ್ಪ ಸ್ವಲ್ಪ ಪೆಟ್ಟಾಗಿದ್ದು ಒಂದು ಗರ್ಭ ಧರಿಸಿದ ಹಸು ಹೆಚ್ಚು ಗಾಯಗೊಂಡಿದೆ. ಗಂಟಿಕೊಪ್ಪ ಗ್ರಾಮದ ಎಚ್.ಜಿ.ಮಂಜುನಾಥ್ ಅವರ ಅಡಕೆ ತೋಟದ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದು ತೋಟಕ್ಕೆ ಹಾನಿಯಾಗಿದೆ. 25ಕ್ಕೂ ಅಽಕ ಅಡಕೆ ಮರ ಮುರಿದು ಬಿದ್ದು ನಷ್ಟ ಉಂಟಾಗಿದೆ. ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಪಂ ಅಧ್ಯಕ್ಷರು, ಸದಸ್ಯರು ಭೇಟಿ ನೀಡಿ ಹಾನಿ ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts