More

    ಏಳು ಕೋಳಿಗಳು ಇಟ್ಟ ಮೊಟ್ಟೆಗಳ ಒಳಗೆ ಹಸಿರು ಲೋಳೆ; ಮಾಲೀಕನಿಗೆ ಅಚ್ಚರಿ…ಭಯ!

    ಮಲಪ್ಪುರಂ: ಕೋಳಿಮೊಟ್ಟೆಯೊಳಗೆ ಇರುವ ಲೋಳೆ ಹಳದಿ ಬಣ್ಣದಲ್ಲಿರುತ್ತದೆ ಎಂಬುದು ನಮಗೆಲ್ಲ ಗೊತ್ತಿರುವಂಥದ್ದೇ. ಆದರೆ ಕೇರಳದಲ್ಲಿ ಒಂದು ವಿಚಿತ್ರ ನಡೆದಿದೆ. ಮಲಪ್ಪುರಂನಲ್ಲಿರುವ ಒಂದು ಕೋಳಿ ಸಾಕಣೆ ಕೇಂದ್ರದಲ್ಲಿ ಏಳು ಕೋಳಿಗಳು ಇಟ್ಟ ಮೊಟ್ಟೆಯೊಳಗೆ ಹಳದಿ ಬಣ್ಣದ ಲೋಳೆ ಇರಲಿಲ್ಲ…ಬದಲಿಗೆ ಕಡು ಹಸಿರು ಬಣ್ಣದ ಲೋಳೆ ಇತ್ತು..!

    ಇದೊಂದು ತುಂಬ ಅಚ್ಚರಿ ಮೂಡಿಸಿದ, ಸದ್ಯ ಟ್ರೆಂಡ್​ನಲ್ಲಿರುವ ವಿಚಾರ. ಮೊಟ್ಟೆ ಹಳದಿ ಹೋಗಿ, ಮೊಟ್ಟೆ ಹಸಿರು ಹೇಗಾಯ್ತು ಎಂದು ಅನೇಕರು ತಲೆಕೆಡಿಸಿಕೊಂಡಿದ್ದಾರೆ. ಆ ಹಸಿರು ಲೋಳೆಯನ್ನು ಬೇಯಿಸಿದ ನಂತರವೂ ಕೂಡ ಅದರ ಬಣ್ಣ ಬದಲಾಗಲಿಲ್ಲ. ಹಾಗೇ ಹಸಿರಾಗಿಯೇ ಇತ್ತು ಎಂಬುದು ಇನ್ನೂ ಆಶ್ಚರ್ಯ ಮೂಡಿಸಿದ ಸಂಗತಿಯಾಗಿದೆ.

    ಮಲಪ್ಪುರಂನಲ್ಲಿರುವ ಶಿಯಾಬುದ್ದೀನ್​ ಎಂಬುವರ ಪೌಲ್ಟಿಯಲ್ಲಿ ನಡೆದ ಘಟನೆ ಇದು. ಶಿಯಾಬುದ್ದೀನ್​ ಅವರು ತಮ್ಮ ಕೋಳಿ ಸಾಕಣೆ ಕೇಂದ್ರದಲ್ಲಿ ವಿವಿಧ ತಳಿಗಳ ಕೋಳಿಗಳನ್ನು ಸಾಕಿದ್ದಾರೆ. ಮೊದಲ ಬಾರಿಗೆ ಕೋಳಿಯೊಂದು ಇಟ್ಟ ಮೊಟ್ಟೆಯೊಳಗೆ ಹಸಿರು ಬಣ್ಣ ಕಾಣಿಸಿದ್ದು 9 ತಿಂಗಳ ಹಿಂದೆ. ಹೀಗೆ ಹಸಿರು ಲೋಳೆಗಳನ್ನು ಹೊಂದಿರುವ ಮೊಟ್ಟೆಗಳು ಮೇಲಿನಿಂದ ಬಿಳಿಬಣ್ಣದಿಂದಲೇ ಇದ್ದು, ಸಹಜವಾಗಿಯೇ ಇರುತ್ತವೆ. ಆದರೆ ಅದನ್ನು ಒಡೆದರೆ ಒಳಗೆ ಬಣ್ಣವೇ ಬೇರೆಯಾಗಿರುತ್ತದೆ. ಹಳದಿ ಲೋಳೆಯುಳ್ಳ ಮೊಟ್ಟೆಗಳು ಬೇಯುವಂತೆಯೇ ಚೆನ್ನಾಗಿ ಬೇಯುತ್ತವೆ ಎಂದು ಶಿಯಾಬುದ್ದೀನ್​ ತಿಳಿಸಿದ್ದಾರೆ.

    ಇದನ್ನೂ ಓದಿ: ಅತ್ತು ಕರೆದು ಪಡೆದ ಕರೊನಾ ಹಣ ಸೇನೆಗೆ ಬಳಸುತ್ತಿರುವ ಪಾಕಿಸ್ತಾನ

    ಹೀಗೆ ಹಸಿರು ಲೋಳೆಯುಳ್ಳ ಮೊಟ್ಟೆಯಿಟ್ಟ ಕೋಳಿಗಳ ಗಾತ್ತ ತೀರ ಚಿಕ್ಕದು. ಮೊದಲು ಕೋಳಿಗಳಿಗೆ ತಿನ್ನಲು ಕೊಡುತ್ತಿರುವ ಆಹಾರದಲ್ಲಿ ಏನಾದರೂ ಎಡವಟ್ಟು ಆಗಿರಬೇಕು ಎಂದು ಭಾವಿಸಿದೆ. ಆದರೆ ಏಳು ಕೋಳಿಗಳು ಮಾತ್ರ ಹೀಗೆ ಅಸಹಜ ಬಣ್ಣದ ಮೊಟ್ಟೆ ಇಟ್ಟಿವೆ. ಉಳಿದೆಲ್ಲವೂ ಸರಿಯಾಗಿಯೇ ಇದೆ. ಒಮ್ಮೆ ಆಹಾರದಲ್ಲಿ ಸಮಸ್ಯೆಯಿದ್ದರೆ ಪೌಲ್ಟ್ರಿಯಲ್ಲಿರುವ ಎಲ್ಲ ಕೋಳಿಗಳ ಮೊಟ್ಟೆಗಳಲ್ಲೂ ಬಣ್ಣ ಬದಲಾಗಬೇಕಿತ್ತು. ನನಗೆ ಸ್ವಲ್ಪ ಹೆದರಿಕೆಯೂ ಆಯಿತು ಎಂದಿದ್ದಾರೆ.

    ಇದಾದ ಬಳಿಕ ಹಲವು ತಜ್ಞ ಪಶುವೈದ್ಯರಿಗೆ ಮೊಟ್ಟೆಯ ಹಸಿರು ಲೋಳೆಯನ್ನು ತೋರಿಸಿದೆ. ಅದರಲ್ಲಿ ಕೆಲವರು, ಮಿಶ್ರತಳಿಯ ಕೋಳಿಗಳು ಆನುವಂಶಿಕ ಬದಲಾವಣೆಯಿಂದ ಹೀಗೆ ಮೊಟ್ಟೆ ಇಟ್ಟಿವೆ ಎಂದರು. ಮತ್ತೂ ಕೆಲವರು., ಬಣ್ಣ ಬದಲಾಗಿರುವ ಮೊಟ್ಟೆಗಳನ್ನು ವೈಜ್ಞಾನಿಕವಾಗಿ ಪರೀಕ್ಷೆ ಮಾಡಬೇಕು ಎಂದು ಹೇಳಿದ್ದಾರೆ. ನೋಡಬೇಕು, ಮುಂದೆ ಎಷ್ಟು ಕೋಳಿಗಳು ಇಟ್ಟ ಮೊಟ್ಟೆಗಳ ಲೋಳೆಗಳ ಬಣ್ಣ ಬದಲಾಗುತ್ತದೆ ಎಂಬುದನ್ನು ಎಂದು ಶಿಯಾಬುದ್ದೀನ್​ ಹೇಳಿದ್ದಾರೆ.

    ಇದನ್ನೂ ಓದಿ: 20 ವರ್ಷದ ಹಿಂದಿನ ಫೋಟೋದಲ್ಲಿ ಆಮೀರ್​- ದೀಪಿಕಾ ಹೇಗಿದ್ರು?

    ಆದರೆ ಈ ಮೊಟ್ಟೆ ಹಸಿರು ಸಿಕ್ಕಾಪಟೆ ಸುದ್ದಿಯಾಗಿ, ರಾತ್ರೋರಾತ್ರಿ ಶಿಯಾಬುದ್ದೀನ್​ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts