More

    ಮೊಟ್ಟೆಯೊಂದಿಗೆ ಈ ಆಹಾರ ಪದಾರ್ಥಗಳನ್ನು ತಿನ್ನಬೇಡಿ…ಇದು ದೇಹದ ಕೆಲವು ಭಾಗಗಳಿಗೆ ಹಾನಿ ಮಾಡುತ್ತದೆ!

    ಬೆಂಗಳೂರು: ಮೊಟ್ಟೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು, ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಪ್ರೋಟೀನ್ ಸಮೃದ್ಧವಾಗಿರುವ ಮೊಟ್ಟೆ ಸ್ನಾಯುಗಳಿಗೆ ತುಂಬಾ ಒಳ್ಳೆಯದು. ಮೊಟ್ಟೆ ತಿನ್ನುವುದರಿಂದ ಹೃದಯವೂ ಆರೋಗ್ಯವಾಗಿರುತ್ತದೆ. ಪೌಷ್ಠಿಕಾಂಶದ ಪವರ್‌ಹೌಸ್‌ ಮೊಟ್ಟೆಯು ಬೆಳಗಿನ ಉಪಾಹಾರಕ್ಕೆ ಸೇವಿಸಲು ಉತ್ತಮವಾಗಿದೆ. ನೀವು ಮೊಟ್ಟೆಗಳನ್ನು ಯಾವುದೇ ರೀತಿಯಲ್ಲಿ ತಿನ್ನಬಹುದು, ಅದು ಬೇಯಿಸಿದ್ದಿರಬಹುದು, ಆಮ್ಲೆಟ್ ಅಥವಾ ಇನ್ನಾವುದೇ ರೀತಿಯಲ್ಲಿ.

    ಆದರೆ ಮೊಟ್ಟೆಯಲ್ಲಿ ದೇಹಕ್ಕೆ ತುಂಬಾ ಹಾನಿಕಾರಕವಾದ ಕೆಲವು ಅಂಶಗಳಿವೆ. ಹಾಗಾಗಿ ಇಂದು ಈ ಲೇಖನದಲ್ಲಿ ಮೊಟ್ಟೆಯೊಂದಿಗೆ ಯಾವ ಪದಾರ್ಥಗಳನ್ನು ತಿನ್ನಬಾರದು ಎಂದು ತಿಳಿಸುತ್ತಿದ್ದೇವೆ. 

    ಫ್ರೈ ಆದ ಮಾಂಸದೊಂದಿಗೆ ತಿನ್ನಬಾರದು
    ಜನರು ಫ್ರೈ ಆದ ಚಿಕನ್ ಮತ್ತು ಮಟನ್‌ನೊಂದಿಗೆ ಮೊಟ್ಟೆಗಳನ್ನು ತಿನ್ನುವುದನ್ನು ನೀವು ಗಮನಿಸಿರಬೇಕು. ಆದರೆ ಹೀಗೆ ಮಾಡಬಾರದು. ಈ ಕಾಂಬಿನೇಶನ್ ನಿಮ್ಮ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ. ಎರಡರಲ್ಲೂ ಸಾಕಷ್ಟು ಕೊಬ್ಬು ಮತ್ತು ಪ್ರೋಟೀನ್ ಇರುತ್ತದೆ. ಹಾಗಾಗಿ ಇದು ನಿಮ್ಮ ದೇಹದಲ್ಲಿ ಸೋಮಾರಿತನವನ್ನು ಉಂಟುಮಾಡಬಹುದು. ಇದು ನಿಮ್ಮನ್ನು ಸೋಮಾರಿಯನ್ನಾಗಿಯೂ ಮಾಡಬಹುದು.

    ಸಕ್ಕರೆಯೊಂದಿಗೆ ತಿನ್ನಬಾರದು
    ಮೊಟ್ಟೆಯೊಂದಿಗೆ ಸಕ್ಕರೆಯನ್ನು ಎಂದಿಗೂ ಸೇವಿಸಬೇಡಿ. ಏಕೆಂದರೆ ಇದು ಅನೇಕ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಇವೆರಡನ್ನು ಒಟ್ಟಿಗೆ ಬೇಯಿಸಿದರೆ ಅಮೈನೋ ಆಮ್ಲಗಳು ಬಿಡುಗಡೆಯಾಗುತ್ತವೆ, ಅದು ದೇಹಕ್ಕೆ ವಿಷದಂತಾಗುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯನ್ನು ಉಂಟುಮಾಡಬಹುದು.

    ಸೋಯಾ ಹಾಲು ಮತ್ತು ಮೊಟ್ಟೆ
    ಭಾರಿ ವ್ಯಾಯಾಮ ಮಾಡುವ ಜನರು ಹೆಚ್ಚಾಗಿ ಮೊಟ್ಟೆಯೊಂದಿಗೆ ಸೋಯಾ ಹಾಲನ್ನು ಕುಡಿಯುತ್ತಾರೆ. ಸೋಯಾ ಹಾಲಿನೊಂದಿಗೆ ಮೊಟ್ಟೆಯನ್ನು ತಿನ್ನುವುದರಿಂದ ಪ್ರೋಟೀನ್ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.

    ಚಹಾ ಮತ್ತು ಮೊಟ್ಟೆ
    ಚಹಾದೊಂದಿಗೆ ಮೊಟ್ಟೆ ತಿನ್ನುವುದು ಮಲಬದ್ಧತೆಗೆ ಕಾರಣವಾಗಬಹುದು. ಇದು ನಿಮ್ಮ ಆರೋಗ್ಯಕ್ಕೆ ದೊಡ್ಡ ಹಾನಿ ಉಂಟುಮಾಡಬಹುದು.

    ಹಾಲಿನ ಉತ್ಪನ್ನಗಳೊಂದಿಗೆ ತಿನ್ನುವುದು ಸರಿಯಲ್ಲ 
    ಹಾಲಿನ ಉತ್ಪನ್ನಗಳೊಂದಿಗೆ ಮೊಟ್ಟೆಗಳನ್ನು ತಿನ್ನಬಾರದು. ಬೀನ್ಸ್, ಚೀಸ್ ಅಥವಾ ಹಾಲಿನ ಉತ್ಪನ್ನಗಳೊಂದಿಗೆ ಮೊಟ್ಟೆಗಳನ್ನು ತಿನ್ನಬಾರದು.

    ಪ್ರತಿದಿನ ಸೈಕ್ಲಿಂಗ್ ಮಾಡುವುದು ಹೃದಯಕ್ಕೆ ಪ್ರಯೋಜನಕಾರಿ, ಇನ್ನು ಏನೇನೆಲ್ಲಾ ಉಪಯೋಗಗಳಿವೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts