More

    ಕ್ಷಿಪಣಿ ದಾಳಿಯಿಂದ ಎರಡು ದೇಶಗಳ ನಾಯಕರು ಸ್ವಲ್ಪದರಲ್ಲೇ ಪಾರು..!

    ಕೀವ್‌: ಉಕ್ರೇನ್-ರಷ್ಯಾ ನಡುವೆ ಯುದ್ಧ ಪ್ರಾರಂಭವಾಗಿ ತಿಂಗಳುಗಳೇ ಕಳೆದಿವೆ. ಆದರೆ, ಹಲವು ದೇಶಗಳ ನಾಯಕರು ಪ್ರಯತ್ನಪಟ್ಟರೂ ಈ ದೇಶಗಳ ನಡುವೆ ಶಾಂತಿ ನೆಲೆಸಿಲ್ಲ. ಯುದ್ಧ ಇನ್ನೂ ನಡೆಯುತ್ತಿದೆ. ಇದೇ ನಿಟ್ಟಿನಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್​ಸ್ಕಿ ಮತ್ತು ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ಅವರನ್ನು ಭೇಟಿ ಮಾಡಲು ಹೋದಾಗ ಮತ್ತೊಂದು ದಾಳಿ ನಡೆದಿದೆ. ಆದರೆ, ಅವರ ಬೆಂಗಾವಲು ಪಡೆಯ ಸಮೀಪವೇ ರಷ್ಯಾದ ಕ್ಷಿಪಣಿ ದಾಳಿ ನಡೆದಿದ್ದು, ಉಭಯ ದೇಶಗಳ ನಾಯಕರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.

    ಇದನ್ನೂ ಓದಿ: ಕೇಜ್ರಿವಾಲ್‌ಗೆ ಮತ್ತೊಂದು ಸಮನ್ಸ್‌: ಕೋರ್ಟ್‌ ಹೇಳಿದ್ದೇನು?

    ಉಕ್ರೇನ್ ಅಧ್ಯಕ್ಷ ಝೆಲೆನ್​ಸ್ಕಿ ಗ್ರೀಕ್ ರಾಯಭಾರ ಕಚೇರಿಯನ್ನು ತಲುಪಿದಾಗ 100 ಮೀಟರ್ ದೂರದಲ್ಲಿ ರಷ್ಯಾದ ಕ್ಷಿಪಣಿ ದಾಳಿ ನಡೆದಿದೆ. ಆಗ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಹೇಳಲಾಗುತ್ತದೆ. ರಷ್ಯಾ-ಉಕ್ರೇನ್ ಯುದ್ಧದ ಆರಂಭದ ನಂತರ ಝೆಲೆನ್​ಸ್ಕಿ ಅವರ ಹತ್ತಿರ ಬಿದ್ದ ಮೊದಲ ಕ್ಷಿಪಣಿ ದಾಳಿ ಇದಾಗಿದೆ.

    ಘಟನೆಯ ನಂತರ ಝೆಲೆನ್​ಸ್ಕಿ ಮಾತನಾಡಿ, ಯುದ್ಧ ಬಹಳಷ್ಟು ಹಾನಿಯನ್ನುಂಟುಮಾಡಿದೆ. ಅನೇಕ ಜನರು ಸಾವನ್ನಪ್ಪಿದ್ದಾರೆ ಮೊದಲು ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಇದಕ್ಕೆ ಸದೃಢವಾದ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದುವುದು ಉತ್ತಮ ಮಾರ್ಗವಾಗಿದೆ ಎಂದು ಅವರು ಹೇಳಿದರು.

    ಚಂದ್ರನ ಮೇಲೆ ‘ಪರಮಾಣು ವಿದ್ಯುತ್ ಸ್ಥಾವರ’ಕ್ಕೆ ರಷ್ಯಾ-ಚೀನಾ ಯೋಜನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts