More

    ಲೋಕಸಭೆ ಚುನಾವಣೆ 2024: ಆಗ ಬಿಜೆಪಿಯ ರಾಮನಾಯಕ್ ಅವರನ್ನು ಸೋಲಿಸಿದ್ದ ನಟ ಗೋವಿಂದ ಈಗ ಯಾರಿಗೆ ಸವಾಲು ಹಾಕಲಿದ್ದಾರೆ?    

    ಮುಂಬೈ: ಬಾಲಿವುಡ್‌ನಲ್ಲಿ ಹೀರೋ ನಂಬರ್ ಒನ್‌ನಿಂದ ಕೂಲಿ ನಂಬರ್ ಒನ್‌ನಂತಹ ಪಾತ್ರಗಳನ್ನು ನಿರ್ವಹಿಸಿದ ನಟ ಗೋವಿಂದ ರಾಜಕೀಯದಲ್ಲಿ ಎರಡನೇ ಇನ್ನಿಂಗ್ಸ್ ಆಡಬಹುದು. 2024ರ ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಬಾಲಿವುಡ್ ನಟ ಹಾಗೂ ಮಾಜಿ ಸಂಸದ ಗೋವಿಂದ ಏಕನಾಥ್ ಶಿಂಧೆ ನೇತೃತ್ವದ ಬಣ ಸೇರುವ ಸಾಧ್ಯತೆ ಇದೆ. ಗೋವಿಂದ ಅವರು 2004 ರಲ್ಲಿ ಮುಂಬೈ ಉತ್ತರ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು ಮತ್ತು ಬಿಜೆಪಿ ನಾಯಕ ರಾಮ್ ನಾಯಕ್ ಅವರನ್ನು ಸೋಲಿಸಿದ್ದರು. ಆ ಚುನಾವಣೆಯಲ್ಲಿ ಗೋವಿಂದ 48,271 ಮತಗಳಿಂದ ಗೆದ್ದಿದ್ದರು.

    ಕೀರ್ತಿಕರ್ ವಿರುದ್ಧ ಗೋವಿಂದ ಸೆಣಸಾಟ!
    ಶಿಂಧೆ ಪಾಳಯದ ಹಾಲಿ ಸಂಸದ ಗಜಾನನ್ ಕೀರ್ತಿಕರ್ ಅವರ ಪುತ್ರ, ಶಿವಸೇನೆ (ಯುಬಿಟಿ)ಯ ಅಮೋಲ್ ಕೀರ್ತಿಕರ್ ವಿರುದ್ಧ ಬಾಲಿವುಡ್ ನಟ ಮುಂಬೈ ವಾಯುವ್ಯ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಿಂಧೆ ಸಮ್ಮುಖದಲ್ಲಿ ಶೀಘ್ರದಲ್ಲೇ ಗೋವಿಂದರ ಪ್ರವೇಶ ನಿರೀಕ್ಷಿಸಲಾಗಿದೆ. ಅವರನ್ನು ಸಂಪರ್ಕಿಸಿದಾಗ ಶಿಂಧೆ ಬಣದ ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದರು. ಮೂಲಗಳ ಪ್ರಕಾರ ಹಾಲಿ ಸಂಸದ ಗಜಾನನ ಕೀರ್ತಿಕರ್ ಅವರ ವಯಸ್ಸನ್ನು ಪರಿಗಣಿಸಿ ಶಿಂಧೆ ಬಣ ಗೋವಿಂದ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬಹುದು. ಶಿವಸೇನೆ (ಯುಬಿಟಿ) ಅಮೋಲ್ ಕೀರ್ತಿಕರ್ ಹೆಸರನ್ನು ಘೋಷಿಸಿದೆ.

    ಸಿಎಂ ಶಿಂಧೆ ಭೇಟಿ
    ಐದು ದಿನಗಳ ಹಿಂದೆಯಷ್ಟೇ ಏಕನಾಥ್ ಶಿಂಧೆ ಹಾಗೂ ಗೋವಿಂದ ಭೇಟಿಯಾಗಿದ್ದರು ಎಂಬ ಮಾಹಿತಿ ಮೂಲಗಳಿಂದ ಸಿಗುತ್ತಿದೆ. ಇವರಿಬ್ಬರ ಭೇಟಿಯೂ ಗೋವಿಂದ ಶಿಂಧೆ ಗುಂಪಿಗೆ ಸೇರಲಿದ್ದಾರೆ ಎಂಬ ಚರ್ಚೆಗೆ ಗ್ರಾಸವಾಗಿದೆ. ವಾಯವ್ಯ ಲೋಕಸಭಾ ಕ್ಷೇತ್ರದ ರೇಸ್‌ನಲ್ಲಿ ನಟ ಗೋವಿಂದ ಅಹುಜಾ ಹೆಸರು ಚರ್ಚೆಯಲ್ಲಿದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಮ್ಮುಖದಲ್ಲಿ ಗೋವಿಂದ ಶಿವಸೇನೆ ಸೇರಲಿದ್ದಾರೆ. ಹಾಗಾಗಿ ನಟ ಗೋವಿಂದ ಅವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಮೂಲಗಳು ತಿಳಿಸಿದ್ದವು. ಈ ಸ್ಥಾನದಿಂದ ರಾಜ್ ಬಬ್ಬರ್ ಮತ್ತು ಸ್ವರಾ ಭಾಸ್ಕರ್ ಹೆಸರು ಕಾಂಗ್ರೆಸ್  ಕಡೆಯಿಂದ ಚರ್ಚೆಯಾಗುತ್ತಿದೆ. ಈಗ ಯಾವ ಪಕ್ಷ ಯಾವ ಸೀಟಿನಲ್ಲಿ ಸ್ಟಾರ್ ಪವರ್ ತೋರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

    ರಷ್ಯಾ: ಮಾಸ್ಕೋದ ಕನ್ಸರ್ಟ್ ಹಾಲ್‌ನಲ್ಲಿ ಬುಲೆಟ್‌ ಹಾರಿಸಿ ಬಾಂಬ್‌ಗಳನ್ನು ಎಸೆದ ಐಸಿಸ್ ಭಯೋತ್ಪಾದಕರು; 60 ಮಂದಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts