More

    ‘ಗ್ರಾಮ ಒನ್’ಗೆ ಸಿಎಂ ಚಾಲನೆ, ಇನ್ಮುಂದೆ ವಿವಿಧ ಇಲಾಖೆಯ ಈ ಸೇವೆಗಳು ಹಳ್ಳಿಯಲ್ಲೇ ಲಭ್ಯ

    ಬೆಂಗಳೂರು: ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಕಲ್ಪಿಸುವ “ಗ್ರಾಮ ಒನ್” ಕೇಂದ್ರದ ಪ್ರಾಯೋಗಿಕ ಅನುಷ್ಠಾನಕ್ಕೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಗುರುವಾರ ಚಾಲನೆ ನೀಡಿದರು.

    ದಾವಣಗೆರೆ ಜಿಲ್ಲೆಯ 100 ಗ್ರಾಮಗಳಲ್ಲಿ ಸರ್ಕಾರದ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ತರುವ ಪ್ರಾಯೋಗಿಕ ಯೋಜನೆ ಇದಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಗ್ರಾಮ ಒನ್​ ಕೇಂದ್ರವು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಮೈಕ್ರೋ-ಬ್ಯಾಂಕಿಂಗ್​ ವ್ಯವಸ್ಥೆಯೊಂದಿಗೆ ಮತ್ತಷ್ಟು ಸೇವೆಗಳನ್ನು ಗ್ರಾಮ ಒನ್​ ಕೇಂದ್ರಗಳಲ್ಲಿ ನೀಡಲು ಉದ್ದೇಶಿಸಿದೆ ಎಂದು ಸಿಎಂ ತಿಳಿಸಿದರು.

    ​ಗ್ರಾಮ ಒನ್​ನಲ್ಲಿ ಲಭ್ಯವಿರುವ ಸೇವೆಗಳು

    • ಆದಾಯ ಮತ್ತು ಜಾತಿ ಪ್ರಮಾಣ ಪತ್ರ
    • ವೃದ್ಧಾಪ್ಯ ವೇತನ&ವಿಧವಾ ವೇತನ
    • ಅಂಗವಿಕಲ ವೇತನ
    • ಸಂಧ್ಯಾ ಸುರಾ ಯೋಜನೆ
    • ಹಿರಿಯ ನಾಗರಿಕರ ಗುರುತಿನ ಚೀಟಿ
    • ಆಯುಷ್ಮಾನ್​ ಭಾರತ್​ ಆರೋಗ್ಯ ಕರ್ನಾಟಕ ಕಾರ್ಡ್​
    • ಕಾರ್ಮಿಕ ಇಲಾಖೆ ಸೇವೆಗಳು
    • ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆ ಸೇವೆಗಳು
    • ಕೃಷಿ, ರೇಷ್ಮೆ,ಪಶು ಸಂಗೋಪನೆ ಇಲಾಖೆ ಸೇವೆಗಳು
    • ಮಾಹಿತಿ ಹಕ್ಕು ಕಾಯ್ದೆ ಸೇವೆಗಳು
    • ಮುಖ್ಯಮಂತ್ರಿಗಳ ಪರಿಹಾರ ನಿಧಿ ಸೇವೆಗಳು ಹಾಗೂ 750ಕ್ಕೂ ಹೆಚ್ಚು ನಾಗರಿಕ ಸೇವೆಗಳು

    ಇನ್ನಷ್ಟು ಸೇವೆ: ಸೇವಾಸಿಂಧು ಅಡಿಲಭ್ಯವಿರುವ ಸೇವೆಗಳು, ಸಕಾಲ ಸೇವೆಗಳು, ಸಕಾಲ ಮೇಲ್ಮನವಿ, ರಾಜ್ಯದ ವಿವಿಧ ಕೃಷಿ ಮಾರುಕಟ್ಟೆ / ಮಂಡಿ ದರಗಳ ಮಾಹಿತಿ, ಮೈಕ್ರೋ ಬ್ಯಾಂಕಿಂಗ್​, ಮಾಹಿತಿ ಹಕ್ಕು ಅಧಿನಿಯಮದಡಿ ಆನ್​ಲೈನ್​ ಅರ್ಜಿ ಹಾಗೂ ಸರ್ಕಾರವು ಕಾಲಕಾಲಕ್ಕೆ ನಿರ್ಧರಿಸುವ ಇತರೆ ಸೇವೆಗಳನ್ನೂ ಪಡೆಯಬಹುದು.

    ಸಹಾಯವಾಣಿ: 080-44554455

    ಸರ್ಕಾರಿ ಸೇವೆಗಳು ಸಕಾಲಕ್ಕೆ ನಾಗರಿಕರಿಗೆ ತಲುಪಬೇಕೆನ್ನುವ ಸದಾಶಯದೊಂದಿಗೆ ಸಕಾಲ ಯೋಜನೆ ಅನುಷ್ಠಾನಕ್ಕೆ ಬಂದಿದೆ. ಸಮಯಬದ್ಧ ಸೇವೆಗಳನ್ನು ತಂತ್ರಾಜ್ಞಾನ ಬಳಕೆಯಿಂದ ನೀಡಲು ಸಾಧ್ಯವಿದೆ. ಹಾಗಾಗಿ ಗ್ರಾಮ ಒನ್​ ಕೇಂದ್ರಗಳು ಜನಸ್ನೇಹಿ ಕೇಂದ್ರ ಆಗುವುದರಲ್ಲಿ ಸಂಶಯವಿಲ್ಲ ಎಂದು ವಿಶ್ವಾಸ ಯಡಿಯೂರಪ್ಪ ವ್ಯಕ್ತಪಡಿಸಿದರು. ವಿವಿಧ ಇಲಾಖೆಗಳ ಸೇವೆಗಳನ್ನು ಗ್ರಾಮ ಒನ್​ ಕೇಂದ್ರದಲ್ಲೇ ಪಡೆಯಬಹುದು. ಆ ಮೂಲಕ ಸಾರ್ವಜನಿಕರ ಸಮಯ ಮತ್ತು ಹಣ ಉಳಿಯಲಿದೆ. ಈ ಕೇಂದ್ರಗಳ ಸ್ಥಾಪನೆಯಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ ಎಂದು ಸಿಎಂ ಬಿಎಸ್​ವೈ ತಿಳಿಸಿದರು.

    ದಾವಣಗೆರೆ ಜಿಲ್ಲೆಯ ಮಾಯಗೊಂಡನಹಳ್ಳಿಯಲ್ಲಿ ಗ್ರಾಮ ಒನ್​ಗೆ ಸಚಿವ ಎಸ್​. ಸುರೇಶ್​ ಕುಮಾರ್​ ಚಾಲನೆ ನೀಡಿದರು.

    ಹೆಜ್ಜೆ ಇಟ್ಟಲ್ಲಿ ನೀಲಿ ಬೆಳಕು! ಕರ್ನಾಟಕದ ಈ ಸ್ಥಳಕ್ಕೆ ಕಾಲಿಟ್ಟರೆ ಮಿಂಚಲಿದೆ ನೀಲಿ ಬಣ್ಣದ ಹೆಜ್ಜೆ ಗುರುತು

    ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ರದ್ದು! ಇದು ಹೈಕೋರ್ಟ್​ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts