More

    ಬೆಂಗಳೂರಿನಲ್ಲಿ ಕರೊನಾ ಕಟ್ಟಿಹಾಕಲು ಸರ್ಕಾರದ ಆ್ಯಕ್ಷನ್‌ಪ್ಲ್ಯಾನ್ ರೆಡಿ

    ಬೆಂಗಳೂರು: ರಾಜ್ಯರಾಜಧಾನಿಯಲ್ಲಿ ಹೆಚ್ಚುತ್ತಿರುವ ಕರೊನಾ ಕೇಸ್‌ಗಳನ್ನು ನಿಯಂತ್ರಿಸುವುದಕ್ಕಾಗಿ ರಾಜ್ಯ ಸರ್ಕಾರ ಆ್ಯಕ್ಷನ್‌ಪ್ಲ್ಯಾನ್ ರೂಪಿಸಿದೆ. ಇದರ ಅನ್ವಯ, ಬೆಂಗಳೂರನ್ನು 8 ವಲಯಗಳನ್ನಾಗಿ ವಿಂಗಡಿಸಿ, ಎಂಟು ಸಚಿವರಿಗೆ ಅವುಗಳ ಉಸ್ತುವಾರಿಯನ್ನು ವಹಿಸಲು ನಿರ್ಧರಿಸಲಾಗಿದೆ.

    ಸಚಿವರಾದ ವಿ. ಸೋಮಣ್ಣ, ಗೋಪಾಲಯ್ಯ, ಆರ್. ಅಶೋಕ್, ಸೋಮಶೇಖರ್, ಡಿಸಿಎಂ ಅಶ್ವತ್ಥನಾರಾಯಣ, ಸಿಎಂ ರಾಜಕೀಯ ಕಾರ‌್ಯದರ್ಶಿ ಎಸ್.ಆರ್. ವಿಶ್ವನಾಥ್ ಮುಂತಾದವರು ಈ ವಲಯಗಳಿಗೆ ಮುಖ್ಯಸ್ಥರಾಗಲಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಇವರೆಲ್ಲರಿಗೆ ಸಾಥ್ ನೀಡಲಿದ್ದಾರೆ. ಆಯಾ ವಲಯದಲ್ಲಿ ಈ ಸಚಿವರಿಗೆ ಅಲ್ಲಿನ ಕಾರ್ಪೊರೇಟರ್‌ಗಳು ನೆರವು ನೀಡಲಿದ್ದಾರೆ. ಪ್ರತಿಯೊಬ್ಬ ಕೌನ್ಸಿಲರ್ ಕೂಡ ತಮ್ಮ ವಾರ್ಡ್‌ನ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಇಂದು ಸಂಜೆಯೊಳಗೆ ಈ ಜವಾಬ್ದಾರಿ ಹಂಚಿಕೆಯಾಗುವ ನಿರೀಕ್ಷೆ ಇದೆ. ಇದನ್ನೂ ಓದಿ: ಕರೊನಾ ಗುಟ್ಟು ಬಚ್ಚಿಡಲು ಚೀನಾದಿಂದ ಅಬ್ಬಾ ಇದೆಂಥ ಕೃತ್ಯ… ಇಲ್ಲಿದೆ ಸ್ಫೋಟಕ ಮಾಹಿತಿ

    ಇದಲ್ಲದೆ, ಇದನ್ನು ಸಾದ್ಯಂತವಾಗಿ ಚರ್ಚಿಸಲೆಂದೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಅರಮನೆ ಆವರಣದಲ್ಲಿ ರಾಜಧಾನಿಯ ಶಾಸಕರು, ಸಂಸದರು, ಸಚಿವರು ಮತ್ತು ಕೌನ್ಸಿಲರ್‌ಗಳ ಸಭೆ ನಡೆಯಲಿದೆ. ಆಹ್ವಾನಿತರು ಮಾತ್ರ ಈ ಸಭೆಗೆ ಬರಬೇಕು, ಕಡ್ಡಾಯವಾಗಿ ಬೆಂಬಲಿಗರನ್ನು ಅಥವಾ ಬೇರೆ ಯಾರನ್ನೂ ಕರೆತರಬಾರದು, ಮಾಸ್ಕ್ ಧರಿಸಿರಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

    2021ರ ಕರೊನಾದ ಭಯಾನಕ ಭವಿಷ್ಯ ನುಡಿದ ಅಮೆರಿಕದ ಸಂಶೋಧಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts