More

    ಸರ್ಕಾರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

    ಅಳವಂಡಿ:ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಬೆಳವಣಿಗೆಗೆ ಸಂಜೀವಿನಿ ಸಂಘಗಳು ಸಹಕಾರಿಯಾಗಿವೆ ಎಂದು ತಾಪಂ ಸಂಜೀವಿನಿ ಯೋಜನೆ ಕಾರ್ಯಕ್ರಮ ವ್ಯವಸ್ಥಾಪಕ ಎಚ್.ಕೆ. ಸುನೀಲ್ ತಿಳಿಸಿದರು.


    ಸಮೀಪದ ಹಟ್ಟಿ ಗ್ರಾಮದಲ್ಲಿ ಕನಕಜ್ಯೋತಿ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು.


    ಗ್ರಾಮೀಣರು ಕೃಷಿ ನಂಬಿ ಜೀವನ ನಡೆಸುತ್ತಿದ್ದಾರೆ. ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ಕೃಷಿ, ಕೌಶಲ, ಕಂಪ್ಯೂಟರ್, ಹೈನುಗಾರಿಕೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ತರಬೇತಿ ನೀಡಲಾಗುತ್ತಿದೆ. ಸರ್ಕಾರ ಸಂಜೀವಿನಿ ಒಕ್ಕೂಟಕ್ಕೆ ಅನುದಾನ ನೀಡಿದ್ದು, ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ಯೋಜನೆ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.


    ಕಾರ್ಯಕ್ರಮದಲ್ಲಿ ಸಂಘದ ಸಾಧಕರನ್ನು ಸನ್ಮಾನಿಸಲಾಯಿತು. ಅಧ್ಯಕ್ಷೆ ದುರುಗವ್ವ ಕಣಗೇರಿ, ಕಾರ್ಯದರ್ಶಿ ಹುಸೇನಬೀ, ಖಜಾಂಚಿ ಗಂಗವ್ವ, ಗ್ರಾಪಂ ಕಾರ್ಯದರ್ಶಿ ಮಂಜುನಾಥಯ್ಯ, ಸಹಾಯಕ ಕೃಷಿ ನಿರ್ದೆಶಕ ಚಂದ್ರಕಾಂತ ನಾಡಗೌಡ, ಜಿಲ್ಲಾ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಸುಧಾಕರ, ಆರ್ಥಿಕ ಸಾಕ್ಷರತಾ ಸಲಹೆಗಾರ ರೇವಣಾರಾಧ್ಯ, ವಲಯ ಮೇಲ್ವಿಚಾರಕ ವೆಂಕಟೇಶ, ತಾಲೂಕು ವ್ಯವಸ್ಥಾಪಕಿ ಕಾವ್ಯಶ್ರೀ, ಪ್ರಮುಖರಾದ ತೋಟಪ್ಪ ಶಿಂಟ್ರ, ಶರಣಪ್ಪ, ನೀಲಪ್ಪ ಹಕ್ಕಂಡಿ, ಭಾರತಿ, ವಿಜಯಲಕ್ಷ್ಮೀ, ಸಂಘದ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts