More

    ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ರಾಜ್ಯ ಸರ್ಕಾರದ ಅನುಮತಿ

    ಬೆಂಗಳೂರು: ಬಕ್ರೀದ್​ ಹಬ್ಬದ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ, ಕೋವಿಡ್​-19 ಪಿಡುಗು ಹಬ್ಬಿರುವ ಹಿನ್ನೆಲೆಯಲ್ಲಿ ನಿರ್ದಿಷ್ಟ ಕ್ರಮಗಳ ಅನುಸರಣೆಯನ್ನು ಕಡ್ಡಾಯಗೊಳಿಸಿ ಆದೇಶಿಸಿದೆ.

    ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಮಾಸ್ಕ್​ಗಳನ್ನು ಧರಿಸುವುದು ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಹಿರಿಯ ನಾಗರಿಕರು ಯಾರಿಗೂ ಮಸೀದಿಗೆ ಬರಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

    ಇದನ್ನೂ ಓದಿ: ತಮಿಳಿನ ಖ್ಯಾತ ನಟ ಮತ್ತವರ ತಂದೆಗೂ ಕರೊನಾ ಪಾಸಿಟಿವ್​!

    ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳ ಪ್ರಕಾರ ಮಸೀದಿಯಲ್ಲಿ ಒಮ್ಮೆಗೆ 50 ಜನರಿಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಇವರೆಲ್ಲರೂ ಕಡ್ಡಾಯವಾಗಿ ಮಾಸ್ಕ್​ ಧರಿಸಿರಬೇಕು. ಪ್ರಾರ್ಥನೆ ಸಲ್ಲಿಸುವಾಗ ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಅಲ್ಲದೆ, ಪ್ರಾರ್ಥನೆ ಸಲ್ಲಿಸಲು ಜನರು ತಮ್ಮದೇ ಆದ ಚಾಪೆಗಳನ್ನು ತರಬೇಕು ಎಂದು ಹೇಳಲಾಗಿದೆ.

    ಆ.1ರಂದು ಬ್ರಕ್ರೀದ್​: ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಂ ಸೈಯದ್​ ಅಹ್ಮದ್​ ಬುಖಾರಿ ಅವರು ಆಗಸ್ಟ್​ 1ರಂದು ಈದ್​ ಅಲ್​ ಅಧಾವನ್ನು ಆಚರಿಸಲಾಗುವುದು. ಚಂದ್ರ ಮಂಗಳವಾರ ರಾತ್ರಿ ಕಾಣಿಸಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

    ಸಂಡೇ ಲಾಕ್​ಡೌನ್​ ವೇಳೆ ಸದ್ದು ಮಾಡಿದ ಪೊಲೀಸ್ ರಿವಾಲ್ವರ್… ಇಬ್ಬರ ಕಾಲಿಗೆ ಗುಂಡೇಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts