More

    ಆರೋಗ್ಯಸೇತು ಆ್ಯಪ್​: ದೋಷ ಕಂಡುಹಿಡಿಯಿರಿ, ಸಲಹೆ ನೀಡಿ- ಲಕ್ಷ ಬಹುಮಾನ ಗೆಲ್ಲಿ!

    ನವದೆಹಲಿ: ಕರೊನಾ ವೈರಸ್​ ಅನ್ನು ಶೀಘ್ರವಾಗಿ ಪತ್ತೆ ಹಚ್ಚುವ ಸಂಬಂಧ ಕೇಂದ್ರ ಸರ್ಕಾರ ಆರೋಗ್ಯಸೇತು ಆ್ಯಪ್​ ಅನ್ನು ಶುರು ಮಾಡಿ ಅನೇಕ ವಾರಗಳೇ ಕಳೆದಿವೆ. ಹಲವು ಕಡೆಗಳಲ್ಲಿ ಈ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳುವುದನ್ನು ಕಡ್ಡಾಯ ಕೂಡ ಮಾಡಲಾಗಿದೆ.

    ಇಂಥದ್ದೊಂದು ಹೊಸ ಪ್ರಯತ್ನಕ್ಕೆ ಕೈಹಾಕುವ ಮೂಲಕ ಸರ್ಕಾರ, ಜನರಿಗೆ ತಮ್ಮ ಸುತ್ತಮುತ್ತಲೂ ಇರುವ ಕರೊನಾ ಸೋಂಕಿತರನ್ನು ಸುಲಭದಲ್ಲಿ ಪತ್ತೆ ಹಚ್ಚಲು ಅನುಕೂಲ ಕಲ್ಪಿಸಿದೆ. ಜಗತ್ತಿನ ಬೇರೆ ಯಾರ ದೇಶಗಳಲ್ಲಿಯೂ ಇಂಥದ್ದೊಂದು ಆ್ಯಪ್​ ಕಂಡುಹಿಡಿದಿಲ್ಲ ಎನ್ನುವ ಹೆಗ್ಗಳಿಕೆ ಭಾರತದ್ದು.

    ಇದೀಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಕೇಂದ್ರ ಸರ್ಕಾರ, ಆರೋಗ್ಯಸೇತು ಅ್ಯಪ್​ನಲ್ಲಿ ಏನಾದರೂ ಭದ್ರತಾ ನ್ಯೂನತೆಗಳು ಇದ್ದರೆ ಅದನ್ನು ಕಂಡುಹಿಡಿದು ತಿಳಿಸಿದವರಿಗೆ ಹಾಗೂ ಆ್ಯಪ್​ ಅನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಏನಾದರೂ ಸಲಹೆಗಳನ್ನು ನೀಡಿದವರಿಗೆ ಪ್ರಶಸ್ತಿ ಪ್ರಕಟಿಸಿದೆ.

    ಇದನ್ನೂ ಓದಿ: ತಿರುಪತಿ ಭಕ್ತರ ಆಕ್ರೋಶಕ್ಕೆ ಮಣಿದ ಆಂಧ್ರ ಸರ್ಕಾರ: ಆಸ್ತಿ ಹರಾಜಿಗೆ ತಡೆ

    ಆ್ಯಪ್​ನಲ್ಲಿರುವ ಸುರಕ್ಷತೆಯಲ್ಲಿ ಕುಂದನ್ನು ಕಂಡುಹಿಡಿದವರಿಗೆ ಒಂದು ಲಕ್ಷ ರೂಪಾಯಿವರೆಗೂ ಪ್ರಶಸ್ತಿ ಇರುವುದಾಗಿ ಕೇಂದ್ರ ಹೇಳಿದೆ. ಮೂರು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು. ಇದರ ಮೊತ್ತ ಒಂದು ಲಕ್ಷ ರೂಪಾಯಿವರೆಗೂ ಇದೆ, ಆ್ಯಪ್​ನ ಕೋಡ್​ ಅಭಿವೃದ್ಧಿಪಡಿಸುವ ಬಗ್ಗೆ ಸಲಹೆ ನೀಡಿದರೂ ಬಹುಮಾನ ಪಡೆಯಬಹುದು ಎಂದು ರಾಷ್ಟ್ರೀಯ ಮಾಹಿತಿ ಕೇಂದ್ರದ ಮಹಾ ನಿರ್ದೇಶಕರಾದ ನೀತಾ ವರ್ಮಾ ತಿಳಿಸಿದ್ದಾರೆ. ಆ್ಯಪ್​ನಲ್ಲಿ ಸದ್ಯ ನಮಗೆ ಯಾವುದೇ ರೀತಿಯ ದೋಷ ಕಂಡುಬಂದಿಲ್ಲ. ಆದರೆ ಈ ಆ್ಯಪ್​ ಕೂಡ ಮಾನವ ನಿರ್ಮಿತವೇ ಆಗಿರುವ ಕಾರಣ, ದೋಷ ಕಂಡರೆ ತಿಳಿಸಬಹುದು ಎಂದಿದ್ದಾರೆ.

    ಈ ಆ್ಯಪ್​ ಬಗ್ಗೆ ಇದಾಗಲೇ ವಿರೋಧ ಪಕ್ಷಗಳು ಸೇರಿದಂತೆ ಕೆಲವರು ತಮ್ಮದೇ ಆದ ರೀತಿಯಲ್ಲಿ ಟೀಕೆ ಟಿಪ್ಪಣೆ ಮಾಡುತ್ತಲೇ ಬಂದಿದ್ದಾರೆ. ಅಂಥವರು ಆ್ಯಪ್​ನಲ್ಲಿ ದೋಷ ಇರುವುದನ್ನು  ವೈಜ್ಞಾನಿಕವಾಗಿ ಕಂಡುಹಿಡಿದು ಈಗ ಬಹುಮಾನ ಪಡೆಯಬಹುದಾಗಿದೆ.

    ಈ ಆ್ಯಪ್​ನಿಂದ ಖಾಸಗಿ ಮಾಹಿತಿಯ ಸೋರಿಕೆಯಾಗುತ್ತಿದೆ. ಇದರ ನಿಖರತೆ, ಪಾರದರ್ಶಕತೆಯ ಬಗ್ಗೆ ಅನುಮಾನವಿದೆ ಎಂದು ಕಾಂಗ್ರೆಸ್​ ಸೇರಿದಂತೆ ಕೆಲವರು ಕಿಡಿ ಕಾರುತ್ತಲೇ ಬಂದಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾಗಿರುವ ಮಾತು. ಈ ಆ್ಯಪ್​ ಕೇವಲ ಕರೊನಾ ಸಂಪರ್ಕವನ್ನು ಪತ್ತೆಹಚ್ಚುತ್ತದೆಯೇ ವಿನಾ ಯಾವುದೇ ವೈಯಕ್ತಿಕ ಮಾಹಿತಿಗಳನ್ನು ಕದಿಯುವುದಿಲ್ಲ ಅಥವಾ ವ್ಯಕ್ತಿಗಳ ಇನ್ನಾವುದೇ ಹಕ್ಕಿಗೆ ಇದು ಚ್ಯುತಿ ತರುವುದಿಲ್ಲ.

    ಇದನ್ನೂ ಓದಿ: FACT CHECK: ಹಾದಿ ತಪ್ಪಿರುವ ಸೂರತ್ ಶ್ರಮಿಕ್​ ರೈಲು, ಸಾವು: ಈ ವರದಿಯಲ್ಲಿ ಸತ್ಯಾಂಶ ಇದೆಯೆ?

    ಈ ಆ್ಯಪ್​ನಿಂದಾಗಿ ಜನರು ತಮ್ಮ ಸುತ್ತಮುತ್ತ ಇರುವ ಅಥವಾ ತಮ್ಮ ಸಂಪರ್ಕಕ್ಕೆ ಈ ಹಿಂದೆ ಬಂದಿರುವ ವ್ಯಕ್ತಿಗಳಲ್ಲಿ ಕರೊನಾ ಸೋಂಕು ಇದ್ದರೆ ಅದನ್ನು ಸುಲಭದಲ್ಲಿ ಗುರುತಿಸಲು ಸಾಧ್ಯವಾಗಿದೆ, ಅಷ್ಟೇ ಅಲ್ಲದೇ, ಒಂದು ವೇಳೆ ಹಿಂದೆ ಸಂಪರ್ಕಕ್ಕೆ ಬಂದಿರುವ ಯಾವುದೋ ವ್ಯಕ್ತಿಗೆ ಹೊಸದಾಗಿ ಸೋಂಕು ತಗುಲಿದರೂ ಈ ಆ್ಯಪ್​ ಅಲರ್ಟ್​ ಮಾಡುವ ಮೂಲಕ ಜನರನ್ನು ಎಚ್ಚರಿಸುತ್ತದೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್​ ಕಾಂತ್​ ಸ್ಪಷ್ಟಪಡಿಸಿದ್ದಾರೆ.

    ಆರೋಗ್ಯಸೇತು ಆ್ಯಪ್​ ಅನ್ನು ಏಪ್ರಿಲ್ 2ರಂದು ಆರಂಭಿಸಲಾಗಿದೆ. ಈ ಆ್ಯಪ್​ ಅನ್ನು ಸದ್ಯ 11.5 ಕೋಟಿ ಜನರು ಡೌನ್​ಲೋಡ್​ ಮಾಡಿಕೊಂಡಿದ್ದಾರೆ. ಈ ಆ್ಯಪ್​ನ ಮೂಲ ಕೋಡ್ ಗಿಥಬ್ ನಲ್ಲಿ ಮಧ್ಯರಾತ್ರಿ 12 ಗಂಟೆ ನಂತರ ಸಿಗುತ್ತದೆ.

    ಸಿರಿವಂತ ವಿದೇಶಿ ಹುಡುಗನೆಂದು ನಂಬಿ ಐದೂವರೆ ಲಕ್ಷ ಕಳಕೊಂಡ ಬೆಂಗಳೂರು ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts