More

    ಇಂದಿನಿಂದ ಮೆಸ್ಕಾಂ ವ್ಯಾಪ್ತಿ ವಿದ್ಯುತ್ ವ್ಯತ್ಯಯ

    ಮಂಗಳೂರು: ಕರ್ನಾಟಕ ಪವರ್ ಕಾರ್ಪೊರೇಷನ್, ಯುಪಿಸಿಎಲ್, ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದರಿಂದ ಮೆಸ್ಕಾಂ ವ್ಯಾಪ್ತಿಯ ದ.ಕ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

    ತಾಂತ್ರಿಕ ದೋಷದಿಂದಾಗಿ ಬೇಡಿಕೆಯಷ್ಟು ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಕೆಪಿಸಿಯಿಂದ 2864 ಮೆಗಾವ್ಯಾಟ್, ಯುಪಿಸಿಎಲ್‌ನಿಂದ 1010 ಮೆಗಾವ್ಯಾಟ್, ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ 407 ಮೆಗಾ ವ್ಯಾಟ್ ಹೀಗೆ ರಾಜ್ಯದ ವಿದ್ಯುತ್ ಜಾಲವು ಒಟ್ಟು 4281 ಮೆಗಾವ್ಯಾಟ್‌ನಷ್ಟು ಪ್ರಮಾಣದ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ. ಇದರಿಂದಾಗಿ ಮೆಸ್ಕಾಂಗೆ ಹಂಚಿಕೆಯಾಗುವ ಪ್ರಮಾಣದಲ್ಲಿ 200 ಮೆಗಾವ್ಯಾಟ್‌ನಷ್ಟು ಕೊರತೆಯಾಗುವ ಸಂಭವವಿದೆ.
    ರಾಜ್ಯ ಲೋಡ್ ಡಿಸ್ಪಾಚಿಂಗ್ ಸೆಂಟರ್ ಸೂಚನೆಯಂತೆ ಮೇಲೆ ಹೇಳಲಾದ ಜಿಲ್ಲೆಗಳ ವ್ಯಾಪ್ತಿಯಲ್ಲಿ ವಿದ್ಯುತ್ ಜಾಲದ ಸುರಕ್ಷತೆ ದೃಷ್ಟಿಯಿಂದ ಅನಿಯಮಿತವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಇರಲಿದೆ.

    ನೀರಾವರಿ ಪಂಪ್‌ಸೆಟ್‌ಗಳಿಗೆ ಬೆಳಗ್ಗೆ 9ರಿಂದ ಸಂಜೆ 4 ಹಾಗೂ ಮಧ್ಯರಾತ್ರಿಯಿಂದ ಬೆಳಗ್ಗೆ 4ರ ವರೆಗೆ ಮಾತ್ರ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ. ಮುಂದಿನ ವಾರದ ವೇಳೆಗೆ ವಿದ್ಯುತ್ ಉತ್ಪಾದನೆಯಲ್ಲಿ ಸುಧಾರಣೆ ನಿರೀಕ್ಷಿಸಲಾಗಿದ್ದು ಅಲ್ಲಿವರೆಗೆ ಗ್ರಾಹಕರು ಸಹಕರಿಸುವಂತೆ ಪ್ರಕಟಣೆ ಕೋರಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts