More

    ಕೆಲಸದಿಂದ ತೆಗೆಯುವುದಾಗಿ ಬೆದರಿಸಿ ಲೈಂಗಿಕ ಕಿರುಕುಳ; ಸರ್ಕಾರಿ ಅಧಿಕಾರಿ ಜೈಲಿಗೆ

    ಲಖನೌ: ಅಂಡರ್​ ಸೆಕ್ರೆಟರಿ ಹಂತದ ಸರ್ಕಾರಿ ಅಧಿಕಾರಿಯೊಬ್ಬ ಕಾಂಟ್ರಾಕ್ಟ್​​ ನೌಕರಿ ಹೊಂದಿದ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಈ ಪ್ರಭಾವೀ ಅಧಿಕಾರಿಯನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.

    ಉತ್ತರಪ್ರದೇಶದ ರಾಜಧಾನಿ ಲಖನೌನ ಬಾಪು ಭವನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಭಾಗ ಮುಖ್ಯಸ್ಥನ ಹುದ್ದೆ ಹೊಂದಿರುವ ಇಚ್ಛಾರಾಮ್​ ಯಾದವ್​ ಬಂಧಿತ ಅಧಿಕಾರಿ. ಈತ 2018 ರಿಂದ ತನ್ನ ಕಛೇರಿಯ ಕಾಂಟ್ರಾಕ್ಟ್​ ನೌಕರಳಿಗೆ ಕೆಲಸದ ವೇಳೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ದೂರು ನೀಡಿದರೆ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಒಡ್ಡಿದ್ದ ಎಂದು ಆರೋಪಿಸಲಾಗಿದೆ.

    ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಮೂಲಕ ಹಣ ವರ್ಗಾವಣೆ ಇಬ್ಬರು ಟಿಬೆಟಿಯನ್ ಪ್ರಜೆಗಳ ಬಂಧನ

    ಇತ್ತೀಚೆಗೆ ಸಂತ್ರಸ್ತೆಯು ಧೈರ್ಯ ಮಾಡಿ ಆತನ ಅಸಭ್ಯ ವರ್ತನೆಯ ಹಲವು ವಿಡಿಯೋಗಳನ್ನು ಮಾಡಿದಳು. ಈ ವಿಡಿಯೋಗಳನ್ನು ಲಗತ್ತಿಸಿ ಅ.29 ರಂದು ಹುಸೈನ್​ಗಂಜ್​ ಪೊಲೀಸ್​ ಠಾಣೆಗೆ ದೂರು ನೀಡಿದಳು. ಆರಂಭಿಕವಾಗಿ ಪ್ರಭಾವೀ ಆರೋಪಿಯನ್ನು ಬಂಧಿಸಲು ಪೊಲೀಸರು ಹಿಂಜರಿದ ಹಿನ್ನೆಲೆಯಲ್ಲಿ ಒಂದು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಮಾಡಿದಳು ಎನ್ನಲಾಗಿದೆ.

    ವೈರಲ್​ ಆದ ಈ ವಿಡಿಯೋದಲ್ಲಿ ಸಂತ್ರಸ್ತೆಯು ವಿರೋಧಿಸುತ್ತಿದ್ದರೂ, ಆತನನ್ನು ದೂರಕ್ಕೆ ತಳ್ಳುತ್ತಿದ್ದರೂ, ಆತ ಅವಳನ್ನು ಹಿಂಸಿಸುತ್ತಿರುವುದು ದಾಖಲಾಗಿದೆ. ಸಂತ್ರಸ್ತ ಮಹಿಳೆಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಎರಡೂ ಪಕ್ಷಗಳ ಹೇಳಿಕೆಗಳನ್ನು ದಾಖಲಿಸಿ, ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸೆಂಟ್ರಲ್​ ಎಡಿಸಿಪಿ ಖ್ಯಾತಿ ಗರ್ಗ್​ ಹೇಳಿದ್ದಾರೆ. (ಏಜೆನ್ಸೀಸ್)

    ಇದರಲ್ಲಿ ಕರ್ನಾಟಕ ಮಾದರಿಯಾಗಲಿ ಎಂದರಂತೆ ಮೋದಿ! ಪ್ರಧಾನಿ ಜತೆಗಿನ ಮಾತುಕತೆ ವಿವರ ಬಿಚ್ಚಿಟ್ಟ ಸಿಎಂ

    ವಿರಾಟ್​​ ಕೊಹ್ಲಿ ಪುತ್ರಿಗೆ ರೇಪ್​ ಬೆದರಿಕೆ ಹಾಕಿದ್ದವ ಪೊಲೀಸ್​ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts