More

    ನೌಕರರ ಜೇಬಿನ ಮೇಲೆ ಸರ್ಕಾರದ ಕಣ್ಣು: ಕಚೇರಿಗೆ ತಂದ ನಗದು ಘೋಷಣೆ ಕಡ್ಡಾಯ..

    ಬೆಂಗಳೂರು: ಅನೇಕ ಸರ್ಕಾರಿ ನೌಕರರು ಕಚೇರಿಯಿಂದ ಮನೆಗೆ ಹೋಗುವಾಗ ಜೇಬು ತುಂಬಿಸಿಕೊಂಡು ಹೋಗುತ್ತಾರೆ ಎಂಬ ಆರೋಪ ಸರ್ವೇಸಾಮಾನ್ಯವಾಗಿದೆ. ಇಂತಹ ಸಾರ್ವಜನಿಕ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರ ನೌಕರರ ಜೇಬಿನ ಮೇಲೆ ನಿಗಾ ಇಡಲು ಮುಂದಾಗಿದೆ.

    ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿ ನೌಕರನ ವೈಯಕ್ತಿಕ ನಗದನ್ನು ಗಮನಿಸಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ಕಚೇರಿ ಆಡಳಿತದಲ್ಲಿ ಪಾರದರ್ಶಕತೆ ತರಲು ನಗದು ವಹಿ ನಿರ್ವಹಣೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಕ್ರಮ ಕೈಗೊಂಡಿದೆ.

    ನೌಕರರು ತಾವು ಕಚೇರಿಗೆ ತಂದ ಹಣವನ್ನು ವಹಿಯಲ್ಲಿ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ವಹಿಯಲ್ಲಿ ತೋರಿಸಿದ್ದಕ್ಕಿಂತ ಹೆಚ್ಚು ನಗದು ಇದ್ದರೆ ಅಕ್ರಮ ಎಂದು ಪರಿಗಣಿಸಲಾಗುತ್ತದೆ. ಕಚೇರಿ ಮುಖ್ಯಸ್ಥರು ಈ ನಗದು ವಹಿ ನಿರ್ವಹಿಸಲಿದ್ದಾರೆ. ರಾಜ್ಯದ ಎಲ್ಲ ಸರ್ಕಾರಿ ಕಚೇರಿ/ನಿಗಮ/ಮಂಡಳಿ ಇತ್ಯಾದಿ ಕಚೇರಿಗಳಲ್ಲಿ ಪಾದರರ್ಶಕತೆ ತರುವ ದೃಷ್ಟಿಯಿಂದ ಈ ಉಪ ಕ್ರಮ ತೆಗೆದುಕೊಳ್ಳಲಾಗಿದೆ.

    ಇದನ್ನೂ ಓದಿ: ಹೆಂಡತಿಯೊಂದಿಗೆ ಜಗಳವಾಡಿದ ಡಾಕ್ಟರ್​ ಸಾವು; ಬೆಡ್​ರೂಮ್​ನಲ್ಲಿ ಹೊತ್ತಿ ಉರಿದ ಬೆಂಕಿ..!

    ಕಚೇರಿಗಳಲ್ಲಿ ನಗದು ವಹಿ: ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ನೌಕರನ ವೈಯಕ್ತಿಕ ನಗದನ್ನು ಗಮನಿಸಲು ಪ್ರತಿ ಕೆಲಸದ ದಿನದ ಪ್ರಾರಂಭದಲ್ಲಿ ನಗದು ಘೋಷಣೆ ವಹಿ ತೆರೆಯುವಂತೆ ಸೂಚಿಸಲಾಗಿದೆ.
    ನೌಕರರು ಅಧಿಕೃತ ಸಹಿ ಹಾಜರಾತಿ ವಹಿ/ಎಎಂಎಸ್‌ನಲ್ಲಿ ಕೆಲಸದ ದಿನದಂದು ಕರ್ತವ್ಯಕ್ಕೆ ವರದಿ ಮಾಡಿದ ತಕ್ಷಣ ಅವನು/ಅವಳು ಕಚೇರಿಗೆ ತಂದ ನಗದು ಮೊತ್ತವನ್ನು ರಿಜಿಸ್ಟರ್‌ನಲ್ಲಿ ತನ್ನ ಸಹಿಯೊಂದಿಗೆ ಘೋಷಿಸತಕ್ಕದ್ದು.

    ಮುಖ್ಯಸ್ಥರಿಗೆ ಪರಿಶೀಲನೆ ಅಧಿಕಾರ: ನಗದು ಘೋಷಣೆ ವಹಿಯು ಸಂಬಂಧಪಟ್ಟ ವಿಭಾಗ/ಶಾಖೆಯ ಗ್ರೂಪ್-ಬಿ ಅಧಿಕಾರಿಯ ವಶದಲ್ಲಿರತಕ್ಕದ್ದು. ಆ ಅಧಿಕಾರಿಗೆ ನೌಕರರು ಮಾಡಿದ ನಮೂದುಗಳ ಸತ್ಯಾಸತ್ಯತೆ ಪರಿಶೀಲಿಸುವ ಅಧಿಕಾರ ನೀಡಲಾಗಿದೆ.

    ಇದನ್ನೂ ಓದಿ: 25 ಸಾವಿರಕ್ಕೂ ಅಧಿಕ ಮಾತ್ರೆ ತಿಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಗುಂಡು ಹೊಡೆದುಕೊಂಡು ಬಿಇಒ ಆತ್ಮಹತ್ಯೆ!

    ಹೆಚ್ಚು ಹಣ ಇದ್ದರೆ ಅಕ್ರಮ: ಯಾವುದೇ ನೌಕರರು ನಗದು ಘೋಷಣೆ ವಹಿಯಲ್ಲಿ ಘೋಷಿಸಿದ್ದಕ್ಕಿಂತ ಹೆಚ್ಚಿನ ಹಣ ಹೊಂದಿರುವುದು ಕಂಡು ಬಂದರೆ ಅಂತಹ ಹೆಚ್ಚುವರಿ ಹಣವನ್ನು ಅಕ್ರಮ ಸಂಪಾದನೆ ಎಂದು ಅರ್ಥೈಸಲಾಗುತ್ತದೆ. ಆ ಹಣವನ್ನು ಸಕ್ರಮ ಹಣ ಎಂದು ಸಾಬೀತುಪಡಿಸುವುದು ನೌಕರರ ಹೊಣೆಯಾಗಿದೆ.

    ಇದನ್ನೂ ಓದಿ: ಗಂಡನನ್ನು ಕೊಲ್ಲಿಸಿ ಅಪಘಾತ ಎಂದು ಬಿಂಬಿಸಿದ್ದ ಪತ್ನಿ; ಕೊಲೆಗೈದ ಪ್ರಿಯಕರನ ಸಹಿತ ಸಿಕ್ಕಿಬಿದ್ದಳು; ಒಟ್ಟು ಮೂವರ ಬಂಧನ…

    ನಗದು ಘೋಷಣೆ ವಹಿಯನ್ನು ಕಚೇರಿ ವೇಳೆಯ ಎಲ್ಲ ಸಮಯದಲ್ಲಿ ಯಾವುದೇ ಉನ್ನತ/ಸಕ್ಷಮ ಪ್ರಾಧಿಕಾರ/ ಘಟಕದ ಮುಖ್ಯಸ್ಥರು/ವಿಭಾಗದ ಮುಖ್ಯಸ್ಥರ ತಪಾಸಣೆಗೆ ತೆರೆದಿಡತಕ್ಕದ್ದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

    ಹಿಜಾಬ್​ ವಿವಾದ: ಕುಂದಾಪುರ ಶಾಸಕರ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿಯರಿಂದ ಹೈಕೋರ್ಟ್​ಗೆ ಅರ್ಜಿ

    ಕೇಸರಿ-ಹಿಜಾಬ್ ಸಂಘರ್ಷ: ಕುಂದಾಪುರಕ್ಕೆ ಹೈದರಾಬಾದ್ ಮುಸ್ಲಿಮರ ಆಗಮನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts