More

    ಬೆಲೆ ಏರಿಕೆಯ ನಡುವೆ ಶುಭ ಸುದ್ದಿ: ಇಪಿಎಫ್​ ಬಡ್ಡಿ ದರ ಹೆಚ್ಚಳಕ್ಕೆ ಕೇಂದ್ರದಿಂದ ಅನುಮೋದನೆ

    ದೆಹಲಿ: ಕೇಂದ್ರ ಸರ್ಕಾರವು ಶುಭ ಸುದ್ದಿಯೊಂದನ್ನು ನೀಡಿದ್ದು, ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌ಒ) ಯೋಜನೆಯಡಿ ಠೇವಣಿಗಳ ಮೇಲೆ ಶೇ.8.15 ಬಡ್ಡಿ ದರವನ್ನು ನೀಡಲು ಅನುಮೋದಿಸಿದೆ.

    ಇದನ್ನೂ ಓದಿ: ಹೈಕೋರ್ಟ್ ನ್ಯಾಯಮೂರ್ತಿಗಳ ಕೊಲೆ ಬೆದರಿಕೆ: ಪಾಕಿಸ್ತಾನದ ಮೂಲದ ಅಕೌಂಟ್ ನಂಬರ್ ನೀಡಿ ಹಣಕ್ಕೆ ಬೇಡಿಕೆ

    2022-23ರ ಹಣಕಾಸು ವರ್ಷಕ್ಕೆ ತನ್ನ 6 ಕೋಟಿ ಚಂದಾದಾರರಿಗೆ ಇದರ ಲಾಭವಾಗಲಿದ್ದು, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಇಪಿಎಫ್‌ಒನ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಮಾರ್ಚ್ 28ರಂದು FY23ಕ್ಕೆ 8.15% ಬಡ್ಡಿದರವನ್ನು ಶಿಫಾರಸು ಮಾಡಿತ್ತು. ಈ ಬಡ್ಡಿ ದರಕ್ಕೆ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದ ನಂತರ ಈ ಆದೇಶ ಬಂದಿದೆ.

    ಇಂದು ಹೊರಡಿಸಿದ ಸುತ್ತೋಲೆಯಲ್ಲಿ, ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು, 1952 ರ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಯ ಪ್ಯಾರಾ 60 (1) ರ ಅಡಿಯಲ್ಲಿ 2022-23ರ ಇಪಿಎಫ್ ಯೋಜನೆಯ ಪ್ರತಿಯೊಬ್ಬ ಸದಸ್ಯರ ಖಾತೆಗೆ ಶೇ 8.15 ಬಡ್ಡಿಯನ್ನು ಜಮಾ ಮಾಡಲು ಕೇಂದ್ರ ಸರ್ಕಾರದ ಅನುಮೋದನೆಯನ್ನು ರವಾನಿಸಿದೆ ಎಂದು ನೌಕರರ ಸಂಘಟನೆಯ(ಇಪಿಎಫ್‌ಒ) ಹೇಳಿದೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts