More

    ಕರೊನಾ ಲಸಿಕೆ ಪಡೆಯಿರಿ, ಉಚಿತ ಸವಾರಿ ಆನಂದಿಸಿರಿ: ಗೋ ಸೇಫ್​ ಯೋಜನೆ ಆರಂಭಿಸಿದ ವೋಗೋ

    ನವದೆಹಲಿ: ಕರೊನಾ ಲಸಿಕೆ ಬಗೆಗಿನ ಹಿಂಜರಿಕೆ ತಪ್ಪಿಸಲು ಹಾಗೂ ಲಸಿಕೆ ಪಡೆಯಲು ಉತ್ತೇಜಿಸುವ ಸಲುವಾಗಿ ಭಾರತದ ಅತಿ ದೊಡ್ಡ ದ್ವಿಚಕ್ರ ವಾಹನ ಬಾಡಿಗೆ ನೀಡುವ ಕಂಪನಿ ವೋಗೋ ‘ಗೋ ಸೇಫ್’ ಯೋಜನೆ ಆರಂಭಿಸಿದೆ.

    ಈ ಯೋಜನೆಯ ಪ್ರಕಾರ ಕರೊನಾ ಲಸಿಕೆ ಪಡೆದವರಿಗೆ ವೋಗೋ 300 ರೂಪಾಯಿ ಮೌಲ್ಯದ ಉಚಿತ ಸವಾರಿಯನ್ನು ನೀಡಲಿದೆ. ಈ ಸುವರ್ಣಾವಕಾಶವನ್ನು ಪಡೆಯಲು ಲಸಿಕೆ ಹಾಕಿಸಿಕೊಂಡವರು ತಮ್ಮ ಲಸಿಕೆ ಪ್ರಮಾಣಪತ್ರದ ಪೂರ್ಣ ಅಥವಾ ಪಾರ್ಶ್ವ ಭಾಗವನ್ನು ವೋಗೋ ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡಬೇಕು. ವೋಗೋ ಆ್ಯಪ್ ಮೂಲಕ ಸರ್ಕಾರದ ‘ಕೋವಿನ್’ ಆ್ಯಪ್‍ಗೆ ಲಾಗಿನ್​ ಆಗಿ ಲಸಿಕೆ ಪಡೆಯುವ ಸಮಯವನ್ನು ಕಾಯ್ದಿರಿಸಲು ವೋಗೋ ಕಂಪನಿ ಬಳಕೆದಾರಿಗೆ ಅನುವು ಮಾಡಿಕೊಟ್ಟಿದೆ.

    ದೇಶಾದ್ಯಂತ ನಿಷ್ಕ್ರಿಯ ಆಸ್ಪತ್ರೆಗಳನ್ನು ಗುರುತಿಸಿ ಅವುಗಳಿಗೆ ಪ್ರಣಿತಾ ಸುಭಾಷ್ ಫೌಂಡೇಷನ್ ಹಾಗೂ ಗುಡ್ ಸ್ಕೌಟ್, ಅನೇಕ ಉದ್ಯಮಿಗಳು, ಸಮಾಜ ಕಲ್ಯಾಣ ಸಮೂಹಗಳು ಹಾಗೂ ವಿವಿಧ ಉದಾತ್ತ ದಾನಿಗಳಿಂದ, ಅಗತ್ಯ ವೈದ್ಯಕೀಯ ಮೂಲ ಸೌಕರ್ಯ ಒದಗಿಸುವ ಮೂಲಕ ಕೋವಿಡ್‍ಗೆ ಉಚಿತ ಚಿಕಿತ್ಸೆ ಕೊಡಲು ಆರಂಭವಾದ ’50 ಆಸ್ಪತ್ರೆಗಳ ಚಾಲನೆ ನಿಧಿ’ ಯೋಜನೆಗೆ ಲಸಿಕಾ ಪ್ರಮಾಣಪತ್ರ ಅಪ್‍ಲೋಡ್ ಮಾಡಿದ ಪ್ರತಿಯೊಬ್ಬ ಬಳಕೆದಾರರ ಪರವಾಗಿ ತಲಾ 100 ರೂಪಾಯಿ ದೇಣಿಗೆ ನೀಡುತ್ತದೆ. ಈಗಾಗಲೇ ಈ ನಿಧಿಗೆ ತನ್ನ ಕಡೆಯಿಂದ 8 ಲಕ್ಷ ರೂಪಾಯಿ ನೀಡಲು ವೋಗೋ ಕಂಪನಿ ಬದ್ಧವಾಗಿದೆ.

    ಲಸಿಕೆ ಪಡೆಯಲು ಅದರಲ್ಲೂ ವಿಶೇಷವಾಗಿ ಕೋವಿಡ್ ಲಸಿಕೆ ಪಡೆಯಲು ವಿಶ್ವಾದ್ಯಂತ ಸಾಕಷ್ಟು ಹಿಂಜರಿಕೆ ಕಂಡುಬರುತ್ತಿದ್ದು, ಇದೊಂದು ದೊಡ್ಡ ಸವಾಲಾಗಿದೆ. ಲೋಕಲ್ ಸರ್ಕಲ್ಸ್​ನ ಸಮೀಕ್ಷೆಯೊಂದರ ಪ್ರಕಾರ ಜನವರಿಯಲ್ಲಿ ಲಸಿಕಾ ಅಭಿಯಾನ ಆರಂಭವಾದಾಗ ಭಾರತದಲ್ಲಿ ಸುಮಾರು ಶೇಕಡಾ 62 ರಷ್ಟು ಜನ ಲಸಿಕೆ ಪಡೆಯುವುದನ್ನು ನಿರಾಕರಿಸಿದ್ದರು. ಕೋವಿಡ್ 19ನ ವಿನಾಶಕಾರಿ ಎರಡನೇ ಅಲೆಯ ನಂತರ ಈ ಸಂಖ್ಯೆಯಲ್ಲಿ ಸಾಕಷ್ಟು ಇಳಿಕೆ ಕಂಡಿದೆಯಾದರೂ ಈಗಲೂ ಶೇ. 23ರಷ್ಟು ಜನ ಲಸಿಕೆ ಪಡೆಯಲು ಸಿದ್ಧರಿಲ್ಲ.

    ಈ ಬಗ್ಗೆ ಮಾತನಾಡಿರುವ ವೋಗೋದ ಸಹ ಸಂಸ್ಥಾಪಕ ಹಾಗೂ ಸಿಇಒ, ಆನಂದ್ ಅಯ್ಯಾದುರೈ, ಎಲ್ಲರೂ ಲಸಿಕೆ ಪಡೆಯುವುದು ಅಗತ್ಯವಾಗಿದ್ದರೂ, ದೊಡ್ಡ ಪ್ರಮಾಣದ ಜನ ಲಸಿಕೆ ಪಡೆಯುವ ಬಗ್ಗೆ ಈಗಲೂ ಅನಿಶ್ಚಿತತೆಯಲ್ಲಿದ್ದಾರೆ. ಜನರಿಗೆ ಲಸಿಕೆ ಪಡೆಯಲು ಉತ್ತೇಜಿಸುವ ಹಾಗೂ ಪ್ರೋತ್ಸಾಹ ಧನ ನೀಡುವ ಮೂಲಕ ಕೋವಿಡ್-19 ಸೋಲಿಸುವ ನಿಟ್ಟಿನಲ್ಲಿ ‘ಗೋ ಸೇಫ್’ ನಮ್ಮ ಕಡೆಯಿಂದ ಒಂದು ಪುಟ್ಟ ಪ್ರಯತ್ನ ಎಂದಿದ್ದಾರೆ.

    ವೋಗೋ ಕಂಪನಿ ಬಗ್ಗೆ
    ವೋಗೋ, ನಿತ್ಯ ಓಡಾಟ ನಡೆಸುವವರಿಗೆ ಸುರಕ್ಷಿತ, ಕೈಗೆಟುಕುವ ಹಾಗೂ ನಂಬಿಕೆಯ ದ್ವಿಚಕ್ರ ವಾಹನಗಳ ಸವಾರಿ ಒದಗಿಸುವ ಭಾರತದ ಅತಿ ದೊಡ್ಡ ವೈಯಕ್ತಿಕ ಸಂಚಾರ ಪರಿಹಾರ ಒದಗಿಸುವ ಕಂಪನಿ. ಆನಂದ್ ಅಯ್ಯಾದುರೈ ಪದ್ಮನಾಭನ್ ಬಾಲಕ್ರಿಷ್ಣನ್ ಹಾಗೂ ಸಂಚಿತ್ ಮಿತ್ತಲ್ ಅವರಿಂದ 2016ರಲ್ಲಿ ಆರಂಭವಾದ ವೋಗೋ, ತನ್ನ ಸವಾರರಿಗೆ ಜಾಗತಿಕ ಗುಣಮಟ್ಟದ ವೇದಿಕೆ ಒದಗಿಸಿ ಅವರಿಗೆ ಯಾವಾಗಲಾದರೂ, ಎಲ್ಲಿಯಾದರೂ ಮಾನವ ಹಸ್ತಕ್ಷೇಪವಿಲ್ಲದೇ ದ್ವಿಚಕ್ರ ವಾಹನ ಬುಕ್ ಮಾಡಿ ತಮ್ಮ ಸ್ಥಳೀಯ ಪ್ರಯಾಣದ ಅಗತ್ಯಗಳನ್ನು ಪೂರೈಸಿಕೊಳ್ಳಲು ಅನುವಾಗುವುದಕ್ಕಾಗಿ ಶ್ರಮಿಸುತ್ತಿದೆ. ವೋಗೋ ಪ್ರಸ್ತುತ ಬೆಂಗಳೂರು, ಹೈದರಾಬಾದ್ ಹಾಗೂ ಮೈಸೂರು ನಗರಗಳಲ್ಲಿ ಲಭ್ಯವಿದ್ದು, ಸುಮಾರು 20,000 + ಬೈಕ್‍ಗಳು ಹಾಗೂ 500 + ಡಾಕಿಂಗ್ ಕೇಂದ್ರಗಳನ್ನು ಹೊಂದಿದೆ. ಕಂಪನಿ ಈಗಾಗಲೇ 3 ದಶಲಕ್ಷಕ್ಕೂ ಅಧಿಕ ಬಳಕೆದಾರರಿಗೆ ತನ್ನ ಸೇವೆ ವಿಸ್ತರಿಸಿದೆ.

    ನಟಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಪ್ರತಿಷ್ಠಿತ ಉದ್ಯಮಿ ಸೇರಿದಂತೆ ಐವರ ಬಂಧನ!

    ಇದು ಯಾವುದೋ ಪ್ರತಿಮೆಯಲ್ಲ; ಮಣ್ಣು ಮೆತ್ತುಕೊಂಡಿರುವ ಈ ನಟಿ ಯಾರೆಂದು ಗುರುತಿಸಿ..

    VIDEO: ಅಬ್ಬಬ್ಬಾ ವಧುವಿಗೆ ಇದೆಂಥ ಸಿಟ್ಟು ನೋಡಿ… ವರನ ಬಾಯಲ್ಲಿ ಸ್ವೀಟ್‌ ಇಟ್ಟು ಎಸೆದೇ ಬಿಟ್ಟಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts