More

    ಶರಣಬಸವೇಶ್ವರ ಆಶೀರ್ವಾದದಿಂದ ಸಂಕಷ್ಟಕ್ಕೆ ಮುಕ್ತಿ

    ಗೊರೇಬಾಳ: ಪುರಾಣ ಕೇಳುವುದರಿಂದ ಶರಣಬಸವೇಶ್ವರನ ಆಶೀರ್ವಾದ ಸಿಗಲಿದೆ ಎಂದು ಪ್ರವಚನಕಾರ ಮುದಗಲ್ ಕಲ್ಯಾಣ ಆಶ್ರಮ ಮಹಾಂತೇಶ್ವರಮಠದ ಮಹಾಂತ ಸ್ವಾಮೀಜಿ ಹೇಳಿದರು.

    ಪುರಾಣದಿಂದ ಶರಣಬಸವೇಶ್ವರ ಕೀರ್ತಿ ಜನರಿಗೆ ತಿಳಿಯಲು ಸಾಧ್ಯ

    ಗ್ರಾಮದಲ್ಲಿ ಸೋಮವಾರ ಮಹಾದಾಸೋಹಿ ಶರಣಬಸವೇಶ್ವರರ 45ನೇ ಜಾತ್ರಾ ಮಹೋತ್ಸವ ಮತ್ತು ನೂತನ ಮಹಾರಥೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಬಸವ ಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಕ್ತರ ಸಂಕಟವನ್ನು ಶರಣಬಸವೇಶ್ವರ ನಿವಾರಣೆ ಮಾಡಲಿದ್ದಾನೆ. ಪುರಾಣದಿಂದ ಶರಣಬಸವೇಶ್ವರ ಕೀರ್ತಿ ಜನರಿಗೆ ತಿಳಿಯಲಿದೆ ಎಂದರು.

    ಗ್ರಾಮದಲ್ಲಿ 1988ರಲ್ಲಿ ಎರಡನೇಯ ಬಸವಪುರಾಣ ಅದ್ದೂರಿಯಾಗಿ ಜರುಗಿತ್ತು. ಅಂದು ಮಂಗಲೋತ್ಸವದಲ್ಲಿ 63 ಮಂಟಪಗಳ ಪೂಜೆಯೊಂದಿಗೆ 1111 ಕುಂಭಗಳ ಮೆರವಣಿಗೆ ಸಹಿತ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಮಾಡಲಾಗಿತ್ತು ಎಂದು ಭಕ್ತರಿಗೆ ನೆನಪಿಸಿದರು.

    ಇದನ್ನೂ ಓದಿ: ಮದುವೆ ವಂಚನೆ ತಡೆಯಲು ಸ್ಥಳದಲ್ಲೇ ವಿವಾಹ ನೋಂದಣಿ; ಉತ್ತರಪ್ರದೇಶ ಸರ್ಕಾರದ ಕ್ರಮ

    ಹೊಸಪೇಟೆ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಮಾತನಾಡಿ, ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಸಂಕಲ್ಪದಂತೆ ಲಿಂಗಾನುಷ್ಠಾನ ಪ್ರಭಾವದಿಂದ ಗೊರೇಬಾಳ ಶರಣ ಬಸವೇಶ್ವರರ ಭಕ್ತಿಯ ಪರಾಕಾಷ್ಠೆ ಕಲ್ಯಾಣ ಕರ್ನಾಟಕದಲ್ಲಿ ಪಸರಿಸಿದೆ. ಇದೇ ಸಂದರ್ಭದಲ್ಲಿ ರಾಜ್ಯ ಸರಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಗುರುತಿಸಿದ್ದು ಭಕ್ತರ ಮನಗೆದ್ದಿದೆ. ಶರಣರ ಪುರಾಣ ಕೇಳಿಸಿಕೊಳ್ಳುವುದರಿಂದ ಜೀವನದಲ್ಲಿ ಕಹಿಘಟನೆಗಳು ಮಾಯವಾಗಲಿವೆ ಎಂದರು.

    ನಂದವಾಡ್ಗಿಯ ಮಹಾಂತಲಿಂಗ ಶಿವಾಚಾರ್ಯರು ಉದ್ಘಾಟಿಸಿದರು. ಘನಮಠೇಶ್ವರ ಸಂತೆಕೆಲೂರಿನ ಗುರುಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾನ ಹಿರೇಮಠ ರವಡಕುಂದದ ಶಿವಯೋಗಿ ಶಿವಾಚಾರ್ಯರು, ಆರ್‌ಡಿಸಿಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಎಪಿಎಂಸಿ ಸಿಂಧನೂರಿನ ಮಾಜಿ ಉಪಾಧ್ಯಕ್ಷ ಆರ್.ತಿಮ್ಮಯ್ಯ ನಾಯಕ, ಸಿಂಧನೂರಿನ ಕಾಂಗ್ರೆಸ್ ನಗರ ಘಟಕದ ಮಾಜಿ ಅಧ್ಯಕ್ಷ ಜಾಫರ್ ಜಾಗಿರದಾರ, ಪ್ರಮುಖರಾದ ಸೋಮನಗೌಡ ಬಾದರ್ಲಿ, ತಿಡಿಗಾಳದ ಅಯ್ಯನಗೌಡ ಸಾಹುಕಾರ ಇತರರಿದ್ದರು. ಚನ್ನಬಸವ ತುಂಬಳ ನಿರೂಪಿಸಿದರು.
    ಸಂಗೀತ ಗಾಯನ ಶಿವಲಿಂಗಯ್ಯ ಗವಾಯಿಗಳು ಹಿರೇಮಠ, ವಯೋಲಿನ್ ವಿಧ್ವಾನ್ ರವಿಕುಮಾರ್ ಮೈಸೂರು, ತಬಲಾ ವಾದನ ಸಿದ್ದೇಶ್ ಕುಮಾರ ಲಿಂಗನಬಂಡಿ ನಡೆಸಿಕೊಟ್ಟರು. ಟಿ.ಎಂ.ಪಾಟೀಲ್ ದಂಪತಿ ಅವರಿಂದ ಪ್ರಸಾದ ಸಂತರ್ಪಣೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts