More

    ಮದುವೆ ವಂಚನೆ ತಡೆಯಲು ಸ್ಥಳದಲ್ಲೇ ವಿವಾಹ ನೋಂದಣಿ; ಉತ್ತರಪ್ರದೇಶ ಸರ್ಕಾರದ ಕ್ರಮ

    ಲಖನೌ: ಉತ್ತರಪ್ರದೇಶ ಸರ್ಕಾರದ ಸಾಮೂಹಿಕ ವಿವಾಹ ಯೋಜನೆಯಲ್ಲಿ ವಂಚನೆ ನಡೆದಿರುವುದು ಇತ್ತೀಚೆಗೆ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತಡೆಗೆ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ. ವಂಚನೆ ತಡೆಯುವ ನಿಟ್ಟಿನಲ್ಲಿ ಸ್ಥಳದಲ್ಲೇ ವಿವಾಹ ನೋಂದಣಿ, ಫೋಟೋಗ್ರಫಿ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಅಸೀಮ್​ ಅರುಣ್​ ತಿಳಿಸಿದ್ದಾರೆ.

    ಸ್ಥಳದಲ್ಲೇ ವಿವಾಹ ನೋಂದಣಿ ಮಾಡಿಸಿ ಪ್ರಮಾಣಪತ್ರ ವಿತರಿಸಲಾಗುತ್ತದೆ. ನವವಿವಾಹಿತರ ಮಾಹಿತಿ ಡೈರೆಕ್ಟ್​ ಬೆನಿಫಿಟ್​ ಟ್ರಾನ್ಸ್​ರ್​ ಮತ್ತು ಆಧಾರ್​ ಜತೆ ಲಿಂಕ್​ ಮಾಡಲಾಗುತ್ತದೆ. ಎಲ್ಲ ವಿಧಿ&ವಿಧಾನಗಳನ್ನು ವಿಡಿಯೋ ಮಾಡಿ ಸಂಗ್ರಹಿಸಿಟ್ಟುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ “ವಧು&ವರರು ಈಗಾಗಲೇ ಮದುವೆ ಆಗಿದ್ದರೇ?’ ಎಂಬುದನ್ನು ಸ್ಥಳಿಯ ಪಂಚಾಯತ್​ ಕಾರ್ಯದರ್ಶಿಯಿಂದ ಪರಿಶೀಲಿಸುವ ಜತೆಗೆ ವಿವಿಧ ಹಂತದಲ್ಲಿ ದೃಢೀಕರಿಸಲಾಗುತ್ತದೆ ಎಂದೂ ತಿಳಿಸಿದ್ದಾರೆ.

    ಸದ್ಯ ಸಾಮೂಹಿಕ ವಿವಾಹದಲ್ಲಿ ಒಮ್ಮೆಗೆ 100ಕ್ಕಿಂತ ಹೆಚ್ಚು ಮದುವೆ ಆಯೋಜಿಸುವಂತಿಲ್ಲ. ಒಂದು ವೇಳೆ ಸಾಮೂಹಿಕ ವಿವಾಹದಲ್ಲಿ ಸಿಎಂ&ಸಚಿವರು ಅತಿಥಿ ಆಗಿ ಆಗಮಿಸುವುದಿದ್ದರೆ ಈ ಮಿತಿಯಲ್ಲಿ ಸ್ವಲ್ಪ ವಿನಾಯಿತಿ ಇರುತ್ತದೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts