ಉಪ ಮುಖ್ಯಮಂತ್ರಿಯಿಂದ ಸ್ಥಾನಮಾನ ಬದಲಾಗುವುದಿಲ್ಲ; ಸುಪ್ರೀಂಕೋರ್ಟ್​ ಅಭಿಪ್ರಾಯ

ನವದೆಹಲಿ: ಉಪ ಮುಖ್ಯಮಂತ್ರಿ ಪದನಾಮದಿಂದ ಯಾವುದೇ ಸ್ಥಾನಮಾನ ಬದಲಾಗುವುದಿಲ್ಲ ಎಂಬುದಾಗಿ ಸವೋರ್ಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ರಾಜ್ಯಗಳಿಗೆ ಡಿಸಿಎಂ ನೇಮಕ ಮಾಡುವ ಅಭ್ಯಾಸವನ್ನು ಪ್ರಶ್ನಿಸಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಿರಾಕರಿಸಿದ ಸುಪ್ರೀಂ ಕೋರ್ಟ್​ ಈ ಅಭಿಪ್ರಾಯ ವ್ಯಕ್ತಪಡಿಸಿದೆ. “ಅದು ಬರೀ ಒಂದು ಲೇಬಲ್​. ನೀವು ಯಾರನ್ನಾದರೂ ಉಪ ಮುಖ್ಯಮಂತ್ರಿ ಎಂದು ಕರೆದರೆ ಅದರಿಂದ ಸ್ಥಾನಮಾನ ಬದಲಾಗುವುದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​, ನ್ಯಾಯಮೂರ್ತಿ ಮನೋಜ್​ ಮಿಶ್ರಾ, ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ. ಈ ವಿಷಯವಾಗಿ … Continue reading ಉಪ ಮುಖ್ಯಮಂತ್ರಿಯಿಂದ ಸ್ಥಾನಮಾನ ಬದಲಾಗುವುದಿಲ್ಲ; ಸುಪ್ರೀಂಕೋರ್ಟ್​ ಅಭಿಪ್ರಾಯ