ಗೊರೇಬಾಳ: ಸಮೀಪದ ಮಾವಿನಮಡಗು ಗ್ರಾಮದಲ್ಲಿ ಯುಗಾದಿ ದಿನ ಮಂಗಳವಾರ ಈರಣ್ಣ ದೇವರ ಗುಡಿ ನಿರ್ಮಾಣಕ್ಕೆ ರವುಡಕುಂದಾ ಸಂಸ್ಥಾನ ಹರೇಮಠ ಶಿವಯೋಗಿ ಶಿವಾಚಾರ್ಯ ಗುದ್ದಲಿ ಪೂಜೆ ನೆರವೇರಿಸಿದರು.
ಚಿಕ್ಕ ದೇವಸ್ಥಾನದಿಂದ ತೊಂದರೆಯಾಗುತ್ತಿತ್ತು. ಗ್ರಾಮದ ಸದ್ಬಕ್ತ ಮಂಡಳಿ ಹೊಸ ಗುಡಿ ನಿರ್ಮಾಣ ವಿಚಾರ ಶಿವಯೋಗಿ ಶಿವಾಚಾರ್ಯ ಸಮ್ಮುಖದಲ್ಲಿ ಪ್ರಸ್ತಾಪಿಸಿದಾಗ ಸಂಕಲ್ಪ ಈಡೇರುತ್ತದೆ ಎಂದು ಆಶೀರ್ವಾದ ಮಾಡಿದರು. ಹೀಗಾಗಿ ದೇವಸ್ಥಾನ ನಿರ್ಮಾಣ ಮಾಡಲು ತೀರ್ಮಾನಿಸಿದ್ದೇವೆ ಎಂದು ಮುಖಂಡ ಸೋಮನಗೌಡ ತುಂಬಳ ತಿಳಿಸಿದರು.