More

    ಕನ್ನಡಿಗರ ಕ್ಷಮೆ ಯಾಚಿಸಿದ ಗೂಗಲ್​; ಸರ್ಚ್​ನಲ್ಲಿ ಕಾಣಸಿದ್ದೆಲ್ಲ ಯಾವಾಗಲೂ ಪರ್​ಫೆಕ್ಟ್​ ಅಲ್ಲ…

    ಬೆಂಗಳೂರು: ಕನ್ನಡದ ಕುರಿತು ಅವಹೇಳನಕಾರಿ ಅಂಶವನ್ನು ಪ್ರಕಟಿಸಿದ್ದಕ್ಕೆ ಗೂಗಲ್ ವಿರುದ್ಧ ಇಂದು ಬೆಳಗಿನಿಂದ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿ ದನಿ ಎತ್ತಿದ್ದು, ಕೊನೆಗೂ ಮಣಿದ ಗೂಗಲ್​ ಕನ್ನಡಿಗರ ಕ್ಷಮೆಯನ್ನು ಯಾಚಿಸಿದೆ.

    ‘ಅಗ್ಲಿಯೆಸ್ಟ್ ಲ್ಯಾಂಗ್ವೇಜ್ ಇನ್​ ಇಂಡಿಯಾ’ ಎಂದು ಸರ್ಚ್ ಮಾಡಿದಾಗ ಕನ್ನಡ ಎಂದು ಉತ್ತರ ಬರುವಂತೆ ಇದ್ದಿದ್ದನ್ನು ಗಮನಿಸಿದ ಕನ್ನಡಿಗರು ಬೆಳಗಿನಿಂದ ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕನ್ನಡದ ಮಾಧ್ಯಮಗಳು ಬೆಳಕು ಚೆಲ್ಲಿದ್ದಲ್ಲದೆ, ಸೆಲೆಬ್ರಿಟಿಗಳು ಸೇರಿ ಅಸಂಖ್ಯಾತ ಕನ್ನಡಿಗರೂ ಸೋಷಿಯಲ್ ಮೀಡಿಯಾಗಳ ಮೂಲಕ ದನಿ ಎತ್ತಿದ್ದರು. ಒಟ್ಟಾರೆಯಾಗಿ ಕನ್ನಡಿಗರ ಒತ್ತಾಯಕ್ಕೆ ಮಣಿದ ಗೂಗಲ್ ಕ್ಷಮೆ ಕೋರಿದೆ.

    ಗೂಗಲ್ ಸರ್ಚ್​ನಲ್ಲಿ ಬರುವಂಥದ್ದು ಯಾವಾಗಲೂ ಪರಿಪೂರ್ಣವಲ್ಲ. ಕೆಲವೊಮ್ಮೆ ಬರಹಗಳನ್ನು ಯಾವ ರೀತಿ ಬರೆಯಲಾಗಿರುತ್ತದೆ ಎಂದರೆ ಕೆಲವೊಂದು ಪ್ರಶ್ನೆಗಳಿಗೆ ವಿಚಿತ್ರವಾದ ಉತ್ತರಗಳು ಬಂದು ಬಿಟ್ಟಿರುತ್ತವೆ ಎಂದ ಸಮಜಾಯಿಷಿ ನೀಡಿರುವ ಸಂಸ್ಥೆ, ಇದು ಗೂಗಲ್ ಅಭಿಪ್ರಾಯವಲ್ಲ ಎಂದು ಹೇಳಿದೆ. ಅದಾಗ್ಯೂ ಇನ್ನೊಬ್ಬರ ಭಾವನೆಗಳಿಗೆ ನೋವಾಗಿದ್ದಕ್ಕೆ ಕ್ಷಮೆ ಯಾಚಿಸುತ್ತೇವೆ ಎಂದು ಗೂಗಲ್ ತಿಳಿಸಿದೆ.

    ಕನ್ನಡಿಗರ ಕ್ಷಮೆ ಯಾಚಿಸಿದ ಗೂಗಲ್​; ಸರ್ಚ್​ನಲ್ಲಿ ಕಾಣಸಿದ್ದೆಲ್ಲ ಯಾವಾಗಲೂ ಪರ್​ಫೆಕ್ಟ್​ ಅಲ್ಲ...

    ಭಾರತದ ಅತ್ಯಂತ ಕೆಟ್ಟ ಭಾಷೆ ವಿವಾದ: ಕನ್ನಡಿಗರ ಆಕ್ರೋಶಕ್ಕೆ ಮಣಿದ ಗೂಗಲ್​​

    ಭಾರತದ ಅತ್ಯಂತ ಕೆಟ್ಟ ಭಾಷೆ ಕನ್ನಡವಂತೆ! ಕನ್ನಡಿಗರ ಸ್ವಾಭಿಮಾನ ಕೆಣಕಿದವರ ವಿರುದ್ಧ ಧ್ವನಿ ಎತ್ತಲೇಬೇಕಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts