More

    ತಮಿಳು ಚಿತ್ರರಂಗದ​ ಹಿರಿಯ ಹಾಸ್ಯ ಕಲಾವಿದ ವಿವೇಕ್​ ವಿಧಿವಶ

    ಚೆನ್ನೈ: ನಿನ್ನೆ (ಏಪ್ರಿಲ್​ 16) ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಮಿಳು ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ವಿವೇಕ್ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ (ಏಪ್ರಿಲ್​ 17) ವಿಧಿವಶರಾಗಿದ್ದಾರೆ.​

    ಎಡ ಮುಂಭಾಗದ ಅಪಧಮನಿ ನಾಳವು ಶೇ 100 ರಷ್ಟು ಬ್ಲಾಕ್​ ಆಗಿದ್ದು, ತೀವ್ರತರವಾದ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಿವೇಕ್ ಅವರ ಹೃದಯಾಘಾತಕ್ಕೆ ಗುರುವಾರ ತೆಗೆದುಕೊಂಡ ಕೋವಿಡ್​ ಲಸಿಕೆ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ತಮಿಳುನಾಡು ಸರ್ಕಾರದ ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ಹೃದಯಾಘಾತಕ್ಕೆ ಲಸಿಕೆ ಕಾರಣವಲ್ಲ ಎಂದಿದ್ದರು.

    ಸೂಪರ್​ಸ್ಟಾರ್​ ರಜಿನಿಕಾಂತ್​ರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ ಹಿರಿಯ ನಿರ್ದೇಶಕ ಕೆ. ಬಾಲಚಂದರ್​ ಅವರೇ ವಿವೇಕ್​ರನ್ನು ಸಹ ಪರಿಚಯಿಸಿದರು. ವಿವೇಕ್​ ಸಾಕಷ್ಟು ಚಿತ್ರಗಳಲ್ಲಿ ಹಾಸ್ಯ ಕಲಾವಿದರಾಗಿ ನಟಿಸಿದ್ದಾರೆ. ಖುಷಿ, ಮಿನ್ನಾಲೆ, ಮುಗವರೀ, ದಮ್​ ದಮ್​ ದಮ್​, ಶಿವಾಜಿ ಸೇರಿದಂತೆ ಹಲವಾರು ಪ್ರಮುಖ ಚಿತ್ರಗಳಲ್ಲಿ ವಿವೇಕ್​ ಹಾಸ್ಯದ ಹೊಳೆಯನ್ನೇ ಹರಿಸಿದ್ದಾರೆ.

    ಇದನ್ನೂ ಓದಿರಿ: ಹಿಜಬ್ ಧರಿಸದೇ ಫೋಟೋಶೂಟ್ ಮಾಡಿದ್ದಕ್ಕೆ 20ರ ಚೆಲುವೆಯನ್ನು ಅಪಹರಿಸಿದ ಉಗ್ರರು

    ರಜಿನಿಕಾಂತ್​, ಕಮಲ್​ಹಾಸ್​, ಮಾಧವನ್​, ವಿಜಯ್​, ಅಜಿತ್​ ಮತ್ತು ಸೂರ್ಯರಂತಹ ಘಟಾನುಘಟಿ ನಾಯಕರು ಜತೆ ವಿವೇಕ್​ ತೆರೆಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ನಟ ಪ್ರೇಮ್​ ಅಭಿನಯದ ಚಂದ್ರ ಚಿತ್ರದಲ್ಲಿ ನಟಿಸುವ ಮೂಲಕ ವಿವೇಕ್​ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

    ತಮಿಳುನಾಡು ಫಿಲ್ಮ್​ಫೇರ್ ಅವಾರ್ಡ್​, ತಮಿಳುನಾಡು ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ವಿವೇಕ್​ ತಮ್ಮದಾಗಿಸಿಕೊಂಡಿದ್ದರು. ಅದರಲ್ಲೂ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿಗೆ ವಿವೇಕ್​ 2009ರಲ್ಲಿ ಭಾಜನರಾಗಿದ್ದರು.

    ವಿಜಯವಾಣಿ ರಾಜ್ ಉತ್ಸವ: ಡಾ ರಾಜ್ ನಿರ್ಮಾಪಕರಾದಾಗ…

    ಹಾರರ್ ಚಿತ್ರದೊಂದಿಗೆ ಕಾಜಲ್ ಅಗರವಾಲ್ ಕಂಬ್ಯಾಕ್

    ಕೃಷ್ಣಾ ಟಾಕೀಸ್ ಚಿತ್ರ ವಿಮರ್ಶೆ: ಊಹೆಗೆ ನಿಲುಕುವ ಹಾರರ್ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts