More

    ಕಮಲ್​ ಹಾಸನ್​ ಅಭಿಮಾನಿಗಳಿಗೆ ಶುಭ ಸುದ್ದಿ; ಬಿಗ್​ ಬಾಸ್​​ಗೆ ಯಾವಾಗ ವಾಪಸ್​?

    ಚೆನ್ನೈ: ಹಿರಿಯ ನಟ ಕಮಲ್​ ಹಾಸನ್​ ಆರೋಗ್ಯದ ಬಗ್ಗೆ ಚಿಂತೆಗೀಡಾಗಿದ್ದ ಅಭಿಮಾನಿಗಳಿಗೆ ಇದೀಗ ಶುಭ ಸುದ್ದಿ ಬಂದಿದೆ. ಕಮಲ್​ ಕೋವಿಡ್​ ಸೋಂಕಿನಿಂದ ಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಅವರು ಚಿಕಿತ್ಸೆ ಪಡೆಯುತ್ತಿದ್ದ ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಹಾಸ್ಪಿಟಲ್​ ವೈದ್ಯರು ತಿಳಿಸಿದ್ದಾರೆ. ಡಿಸೆಂಬರ್​ 4 ರಿಂದ ಮತ್ತೆ ತಮ್ಮ ಕೆಲಸವನ್ನು ಆರಂಭಿಸಬಹುದು ಎಂದೂ ಹೇಳಿದ್ದಾರೆ.

    ಅಮೆರಿಕಾಕ್ಕೆ ಹೋಗಿಬಂದ ನಂತರ ಕರೊನಾದ ಲಕ್ಷಣಗಳು ತೋರಿಬಂದಿದ್ದ ಅವರಿಗೆ ನ.22 ರಂದು ಸೋಂಕು ದೃಢಪಟ್ಟಿತ್ತು. ಅಲ್ಪಪ್ರಮಾಣದ ಲಕ್ಷಣಗಳಿದ್ದ ಕಮಲ್​ಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಡಿ.3 ರವರೆಗೆ ಪ್ರತ್ಯೇಕವಾಗಿರಬೇಕು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸುಹಾಸ್ ಪ್ರಭಾಕರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಮಂಡ್ಯ ಸಂಸದೆ ಸುಮಲತಾ ಸಹೋದರಿಗೆ ವಂಚನೆ! ಖಾಲಿ ಪತ್ರಕ್ಕೆ ಸಹಿ ಹಾಕುವಂತೆ ಧಮ್ಕಿ

    ಕೆಲಸದ ವಿಷಯಕ್ಕೆ ಬಂದರೆ, ಸದ್ಯಕ್ಕೆ ಲೋಕೇಶ್​ ಕನಕರಾಜ್​ ನಿರ್ದೇಶನದ ತಮ್ಮ ಹೊಸ ಚಿತ್ರ ‘ವಿಕ್ರಮ್​’ನಲ್ಲಿ ಕಮಲ್​ ಪಾತ್ರ ನಿರ್ವಹಿಸುತ್ತಿದ್ದಾರೆ. ಜೊತೆಗೆ, ವಿಜಯ್​ ಟೆಲಿವಿಷನ್​ನಲ್ಲಿ ಪ್ರಸಾರವಾಗುತ್ತಿರುವ ಬಿಗ್​ ಬಾಸ್ ತಮಿಳ್​ ಸೀಸನ್ 5 ರ ಹೋಸ್ಟ್​ ಆಗಿದ್ದಾರೆ. ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ನಟಿ ರಮ್ಯ ಕೃಷ್ಣನ್​ ಬಿಗ್​ ಬಾಸ್​ ನಡೆಸಿಕೊಡುತ್ತಿದ್ದು, ಕಮಲ್​ರ ಚೇತರಿಕೆಯ ನಂತರ ಶೋಗೆ ವಾಪಸಾಗುವ ನಿರೀಕ್ಷೆ ಇದೆ. (ಏಜೆನ್ಸೀಸ್)

    ಕಂಗನಾ ಪೋಸ್ಟ್​ಗಳ್ನ ಸೆನ್ಸರ್​ ಮಾಡಿ ಎಂದು ಅರ್ಜಿ! ನಟಿಯ ಪ್ರತಿಕ್ರಿಯೆ ಹೀಗಿತ್ತು

    ದೇಶಕ್ಕೆಲ್ಲಾ ಒಂದೇ ನೀತಿ! ಕೇಂದ್ರದ ಪ್ರಯಾಣ ನಿರ್ಬಂಧಗಳನ್ನು ತಕ್ಷಣ ಜಾರಿಗೊಳಿಸಲು ಮಹಾ ಸರ್ಕಾರಕ್ಕೆ ಸೂಚನೆ

    ಮಹಾರಾಷ್ಟ್ರ ಕಡೆಗೆ ದೀದಿ ಸವಾರಿ! ‘ಈಗ ಯುಪಿಎ ಇಲ್ಲ’ ಎಂದ ಟಿಎಂಸಿ ನಾಯಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts