More

    ಕಮಲ್​ ಹಾಸನ್​ ಪುತ್ರಿಯ ಚೆನ್ನೈ ಸ್ಟೋರಿ ; ಹಾಲಿವುಡ್​ನಲ್ಲಿ ಮಿಂಚಲು ರೆಡಿಯಾದ ಶ್ರುತಿ ಹಾಸನ್​

    ಕಳೆದ ವರ್ಷ “ವೀರಸಿಂಹ ರೆಡ್ಡಿ’, “ವಾಲ್ಟೇರ್​ ವೀರಯ್ಯ’, “ಸಲಾರ್​’ ಚಿತ್ರಗಳಲ್ಲಿ ನಟಿಸಿ ಹ್ಯಾಟ್ರಿಕ್​ ಸಕ್ಸಸ್​ ನೋಡಿದ ನಟಿ ಶ್ರುತಿ ಹಾಸನ್​, “ದ ಐ’ ಮೂಲಕ ಹಾಲಿವುಡ್​ಗೂ ಎಂಟ್ರಿ ಕೊಟ್ಟರು. ಇದೀಗ ಈ ವರ್ಷ “ಇನಿಮೆಲ್​’ ಎಂಬ ಮೊದಲ ಮ್ಯೂಸಿಕ್​ ವಿಡಿಯೋ ಆಲ್ಬಂ ಹಾಡಿನಲ್ಲಿ ಮಿಂಚಿದ ಅವರು, ಮತ್ತೆ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಹೆಸರು “ಚೆನ್ನೈ ಸ್ಟೋರಿ’. ಇದು 2004ರಲ್ಲಿ ತಿಮೇರಿ ಆರ್​. ಮುರಾರಿ ಬರೆದಿದ್ದ “ದ ಅರೇಂಜ್ಮೆಂಟ್ಸ್​ ಆ್​ ಲವ್​’ ಕಾದಂಬರಿ ಆಧಾರಿತ ಚಿತ್ರವಾಗಿದ್ದು, ಫಿಲಿಪ್​ ಜಾನ್​ ನಿರ್ದೇಶಿಸಲಿದ್ದಾರೆ.

    ಕಮಲ್​ ಹಾಸನ್​ ಪುತ್ರಿಯ ಚೆನ್ನೈ ಸ್ಟೋರಿ ; ಹಾಲಿವುಡ್​ನಲ್ಲಿ ಮಿಂಚಲು ರೆಡಿಯಾದ ಶ್ರುತಿ ಹಾಸನ್​

    ಇಂಗ್ಲೀಷ್​ ಮತ್ತು ತಮಿಳು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಇತ್ತೀಚೆಗಷ್ಟೆ ಮುಹೂರ್ತ ನೆರವೇರಿದೆ. ಈ ಹಿಂದೆ “ಚೆನ್ನೈ ಸ್ಟೋರಿ’ಗೆ ಸಮಂತಾ ರುತ್​ ಪ್ರಭು ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ, ಆರೋಗ್ಯ ಸಮಸ್ಯೆಯಿಂದಾಗಿ ಅವರು ಚಿತ್ರತಂಡದಿಂದ ಹೊರನಡೆದ ಕಾರಣ, ಅವರ ಜಾಗಕ್ಕೆ ಶ್ರುತಿ ಹಾಸನ್​ ಎಂಟ್ರಿಯಾಗಿದ್ದಾರೆ.

    ಕಮಲ್​ ಹಾಸನ್​ ಪುತ್ರಿಯ ಚೆನ್ನೈ ಸ್ಟೋರಿ ; ಹಾಲಿವುಡ್​ನಲ್ಲಿ ಮಿಂಚಲು ರೆಡಿಯಾದ ಶ್ರುತಿ ಹಾಸನ್​

    “ವೊಯೇಜಸ್​ರ್’, “ಲಿಫ್ಟ್​’ ಖ್ಯಾತಿಯ ಭಾರತ ಮೂಲದ ಹಾಲಿವುಡ್​ ನಟ ವಿವೇಕ್​ ಕಾಲ್ರಾ ಈ ಚಿತ್ರಕ್ಕೆ ನಾಯಕನಾಗಿದ್ದು, ಅವರಿಗೆ ಶ್ರುತಿ ಜೋಡಿಯಾಗಲಿದ್ದಾರೆ. “ಚೆನ್ನೈ ಸ್ಟೋರಿ’ ಜತೆಗೆ “ಡಕಾಯತ್​’, “ಸಲಾರ್​ 2: ಶೌರ್ಯಂಗಪರ್ವಂ’ ಚಿತ್ರಗಳಲ್ಲು ಶ್ರುತಿ ನಟಿಸುತ್ತಿದ್ದಾರೆ. &ಏಜೆನ್ಸೀಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts