More

    ದೇಶ ಸಂಕಟದಲ್ಲಿದೆ.. 102 ಟ್ರೋಫಿಗಳಿದ್ವು. ಅವನ್ನೆಲ್ಲ ಕೊಟ್ಟು ಸಿಕ್ಕ 4.3 ಲಕ್ಷ ರೂಪಾಯಿ ಪರಿಹಾರ ನಿಧಿಗೆ ನೀಡಿದ್ದೇನೆ…

    ನವದೆಹಲಿ: ದೇಶವೇ ಸಂಕಷ್ಟಕ್ಕೆ ಸಿಲುಕಿದಾಗ ಸ್ಪಂದಿಸುವ ಗುಣ ಇದೆಯಲ್ಲ ಅದು ಎಂಥವರನ್ನೂ ಪ್ರೇರೇಪಿಸುವಂಥದ್ದು. ತಮ್ಮಿಂದಾದ ಸಹಾಯ ಮಾಡೋಣ ಎಂದು ಕೈಯಲ್ಲಿ ಏನೂ ಇಲ್ಲದವರು ಕೂಡ ಹೊರಟಾಗ ಎಂಥವರ ಕಣ್ಣಂಚು ಕೂಡ ತೇವಗೊಳ್ಳುತ್ತದೆ. ಇಂಥ ಅನೇಕ ಪ್ರಸಂಗಗಳನ್ನು ನಾವು ಈಗಿನ ಸನ್ನಿವೇಶದಲ್ಲಿ ಕಾಣಬಹುದು. ಕೆಲವರು ಸ್ವಲ್ಪ ಮಾಡಿ ಸಿಕ್ಕಾಪಟ್ಟೆ ಪ್ರಚಾರ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ಆತ್ಮತೃಪ್ತಿಗಾಗಿ ಮಾಡಿ ಸುಮ್ಮನಾಗುತ್ತಾರೆ. ಇನ್ನು ಕೆಲವರು ಊರಿಗೇನಾದ್ರೇನು ನನ್ನ ಹೊಟ್ಟೆಪಾಡು ನಂದು ಎಂದು ಹೇಳುವವರೂ ಇದ್ದಾರೆ. ಇವೆಲ್ಲದಕ್ಕಿಂತ ಭಿನ್ನವಾದ ಸ್ಟೋರಿ ಇದು.

    ಈತ ಯುವ ಗಾಲ್ಫರ್. ಹೆಸರು ಅರ್ಜುನ್ ಭಾಟಿ. ಕ್ರೀಡಾ ಕ್ಷೇತ್ರದ ದಿಗ್ಗಜರೆಲ್ಲ ಕರೊನಾ ಸೋಂಕು ತಡೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿರುವುದನ್ನು ನೋಡಿದ ಅರ್ಜುನ್ ಮಾಡಿದ್ದೇನು ಗೊತ್ತ? ತನಗೆ ಇದುವರೆಗೆ ಸಿಕ್ಕ 102 ಟ್ರೋಫಿಗಳನ್ನು 102 ಜನರಿಗೆ ನೀಡಿದ್ದು. ಆಗ ಸಿಕ್ಕ 4.30 ಲಕ್ಷ ರೂಪಾಯಿಯನ್ನು ಪ್ರಧಾನಮಂತ್ರಿಗಳ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ದೇಣಿಗೆಯಾಗಿ ಸಲ್ಲಿಸಿದ್ದು. ಬಳಿಕ ಇದನ್ನು ಅರ್ಜುನ್ ಪ್ರಧಾನಮಂತ್ರಿಯವರಿಗೆ ಟ್ವೀಟ್ ಮೂಲಕ ತಿಳಿಸಿದ್ದಾರೆ ಕೂಡ.

    ಅದೇ ಟ್ವೀಟ್​ನಲ್ಲಿ ಅವರು ತಮ್ಮ ಅಜ್ಜಿ ಕಣ್ಣೀರು ಸುರಿಸಿ ಹೇಳಿದ ಮಾತುಗಳನ್ನು ಕೂಡ ಉಲ್ಲೇಖಿಸಿದ್ದು- ನೀನು ನಿಜಕ್ಕೂ ಅರ್ಜುನ್​. ದೇಶದ ಜನರನ್ನು ರಕ್ಷಿಸಬೇಕಾಗಿದೆ. ಟ್ರೋಫಿ ಹೇಗಿದ್ರೂ ನಂತರ ಬಂದೇ ಬರುತ್ತದೆ ಎಂದು ಹರಸಿದ್ದಾಗಿ ಹೇಳಿಕೊಂಡಿದ್ದಾರೆ.

    ಅವರ ಈ ಟ್ವೀಟ್​ಗೆ ಸ್ಪಂದಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ದೇಶವಾಸಿಗಳ ಈ ಭಾವನೆಯೇ ಕರೊನಾ ಸೋಂಕು ತಡೆಗೆ ಹೋರಾಡುವ ಈ ಸಂದರ್ಭದಲ್ಲಿ ಬಹುದೊಡ್ಡ ಬೆಂಬಲ ಎಂದು ಹೇಳಿಕೊಂಡಿದ್ದಾರೆ.

    76 ದಿನಗಳ ಲಾಕ್​ಡೌನ್ ಮುಕ್ತಾಯ- ಕರೊನಾ ವೈರಸ್​ ಉಗಮ ಸ್ಥಾನ ವುಹಾನ್​ನಲ್ಲೇನು ನಡೆಯುತ್ತಿದೆ?

    ಸೂಪರ್ ಲವ್ ಸ್ಟೋರಿ!: ಸಿನಿಮಾವನ್ನೂ ಮೀರಿದ ಕಥೆ ಈಕೆಯದ್ದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts