More

    ಕಾಮಾಕ್ಷಿ ಆಸ್ಪತ್ರೆಯ ಸುವರ್ಣ ಮಹೋತ್ಸವ

    ಮೈಸೂರು: ಕಾಮಾಕ್ಷಿ ಆಸ್ಪತ್ರೆ ಜನರಿಗೆ ಇನ್ನೂ ಹೆಚ್ಚಿನ ವೈದ್ಯಕೀಯ ಸೇವೆ ನೀಡುವ ನಿಟ್ಟಿನಲ್ಲಿ ಅಭಿವೃದ್ಧಿಯಾಗಲಿ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಆಶಿಸಿದರು.

    ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ‘ಆಸ್ಪತ್ರೆಯ 50ನೇ ವಾರ್ಷಿಕೋತ್ಸವ(ಸುವರ್ಣ ಮಹೋತ್ಸವ)’ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮೈಸೂರು ಸೇರಿದಂತೆ ಸುತ್ತ-ಮುತ್ತಲಿನ ಜಿಲ್ಲೆಗಳ ಎಲ್ಲ ಜನರಿಗೂ ಕಾಮಾಕ್ಷಿ ಆಸ್ಪತ್ರೆ 50 ವರ್ಷಗಳಿಂದ ಉತ್ತಮ ಆರೋಗ್ಯ ಸೇವೆ ನೀಡುತ್ತಿದೆ. ಬಡವರು, ಶ್ರೀಮಂತರು, ದಲಿತರು, ಹಿಂದುಳಿದವರು ಹೀಗೆ ಎಲ್ಲ ವರ್ಗದ ಜನರಿಗೂ ಯಾವುದೇ ಬೇಧ ಭಾವ ಮಾಡದೆ ಸೇವೆ ಸಲ್ಲಿಸುತ್ತಿದೆ. ಇಲ್ಲಿ ಕಡಿಮೆ ಬೆಲೆಗೆ ಗುಣಮಟ್ಟದ ಚಿಕಿತ್ಸೆ ಸಿಗುತ್ತಿದೆ ಎಂದು ತಿಳಿಸಿದರು.

    ಯಾವುದೇ ಸಂಸ್ಥೆ ಸುದೀರ್ಘ ಕಾಲ ಶ್ರೇಷ್ಠ ಸೇವೆ ನೀಡುವುದು ಕಷ್ಟ. ಜತಗೆ ಅಷ್ಟು ವರ್ಷಗಳ ಕಾಲ ಇಂತಹ ಸಂಸ್ಥೆಯನ್ನು ನಿರ್ವಹಿಸುವುದು ಸುಲಭದ ಮಾತಲ್ಲ. ಡಾ.ಕಾಮತ್ ಅವರು ಶಿಸ್ತು ಮೈಗೂಡಿಸಿಕೊಂಡು ಸಂಸ್ಥೆ ಕಟ್ಟಿದ್ದಾರೆ ಎಂದರು.

    ಆಡಳಿತ ಮಂಡಳಿ ಇಲ್ಲಿನ ಸಿಬ್ಬಂದಿಗಳನ್ನು ಮನೆ ಮಕ್ಕಳ ರೀತಿ ನೋಡಿಕೊಳ್ಳುತ್ತಿದೆ. ಅದೇ ರೀತಿ ಸಿಬ್ಬಂದಿ ವರ್ಗದವರೂ ಕೂಡ ಕಷ್ಟಪಟ್ಟು ದುಡಿಯುತ್ತಿದ್ದಾರೆ. ಹಾಗಾಗಿ, ಕಾಮಾಕ್ಷಿ ಆಸ್ಪತ್ರೆಯಿಂದ ಮೈಸೂರು ಭಾಗದ ಶ್ರೇಷ್ಠ ಸಂಸ್ಥೆಗಳಲ್ಲಿ ಒಂದಾಗಿದೆ ಎಂದರು.

    ವೇದಿಕೆಯಲ್ಲಿ ಸುತ್ತೂರು ಶ್ರೀ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಆಸ್ಪತ್ರೆಯ ಡಾ.ಕೆ.ಆರ್.ಕಾಮತ್, ಮಹೇಶ್ ಶೆಣೈ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts