More

    ದುಬೈಯಿಂದ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕರ ಒಳ ಉಡುಪಿನಲ್ಲಿ 2.28 ಕೆಜಿ ಚಿನ್ನ ಪತ್ತೆ!

    ಬೆಂಗಳೂರು: ದುಬೈಯಿಂದ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಬಂದಿಳಿದ ಮೂವರು ಪ್ರಯಾಣಿಕರ ಒಳಉಡುಪಿನಲ್ಲಿ 2.28 ಕೆಜಿ ಚಿನ್ನ ಪತ್ತೆಯಾಗಿದೆ.

    ಮಲೇಷಿಯನ್ ಪ್ರಜೆಗಳು, ಚಿನ್ನ ಕಳ್ಳ ಸಾಗಾಣೆ ಮಾಡುವ ಉದ್ದೇಶಕ್ಕೆ ಒಳ ಉಡುಪನ್ನು ತಯಾರಿಸಿ ಅದರಲ್ಲಿ ಬಚ್ಚಿಟ್ಟುಕೊಂಡಿದ್ದರು. ಒಬ್ಬಾತ 3 ಚಿನ್ನದ ಬಿಸ್ಕೆತ್ ಮತ್ತು ಇಬ್ಬರು ಚಿನ್ನದ ಪೇಸ್ಟ್‌ನ್ನು ಬಚ್ಚಿಟ್ಟುಕೊಂಡು ದುಬೈಯಿಂದ ವಿಮಾನದಲ್ಲಿ ಕೆಐಎಗೆ ಏಪ್ರಿಲ್ 9ರಂದು ಬಂದಿಳಿದ್ದರು.

    ಸ್ಕ್ಯಾನಿಂಗ್ ಮಿಷನ್‌ನಲ್ಲಿ ತಪಾಸಣೆ ನಡೆಸಿದಾಗ ಮೂವರು ಪ್ರಯಾಣಿಕರ ಮೇಲೆ ಅನುಮಾನ ಬಂದಿದ್ದು, ಒಳ ಉಡುಪಿನಲ್ಲಿ ಲೋಹ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ. ಒಳ ಉಡುಪು ತೆಗೆಸಿ ಅದರಲ್ಲಿನ ಚಿನ್ನದ ಬಿಸ್ಕೆತ್ ಮತ್ತು ಪೇಸ್ಟ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ 1.33 ಕೋಟಿ ರೂ. ಮೌಲ್ಯದ 2.28 ಕೆಜಿ ಚಿನ್ನ ಪತ್ತೆಯಾಗಿದೆ. ಆರೋಪಿಗಳನ್ನು ಬಂಧಿಸಿ ಇದರ ಹಿಂದೆ ಇರುವ ವ್ಯಕ್ತಿಗಳ ಪತ್ತೆಗೆ ಬಲೆಬೀಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಚಿನ್ನ ಆಯ್ತು, ಜತೆಗೆ ವಿದೇಶಿ ಕರೆನ್ಸಿಯೂ ಪತ್ತೆ :

    ಏಪ್ರಿಲ್ 3ರಂದು ಬ್ಯಾಂಕಾಂಕ್‌ಗೆ ಪ್ರಮಾಣಿಸಲು ಬಂದಿದ್ದ ಮೂವರು ವಿದೇಶಿ ಪ್ರಜೆಗಳನ್ನು ಸಿಐಎಸ್‌ಎ್ ಅಧಿಕಾರಿಗಳು ತಪಾಸಣೆ ನಡೆಸಿದಾಗ 1.41 ಕೋಟಿ ರೂ. ಮೌಲ್ಯದ ಯುಎಸ್ ಡಾಲರ್, ಯೂರೋ, ಸ್ವೀಝ್ ಪತ್ತೆಯಾಗಿದೆ. ಸೂಕ್ತ ದಾಖಲೆ ಒದಗಿಸದ ಕಾರಣ ಹಣವನ್ನು ಜಪ್ತಿ ಮಾಡಿ ಕಾನೂನು ಕ್ರಮ ತೆಗೆದುಕೊಂಡಿರುವುದಾಗಿ ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts