More

    ಭಾರತದಲ್ಲಿ 2 ಸಾವಿರಕ್ಕೂ ಹೆಚ್ಚು ಬಳಕೆಯಲ್ಲಿಲ್ಲದ ಕಾನೂನು ರದ್ದು: ಸಚಿವ ಜಿತೇಂದರ್ ಸಿಂಗ್

    ಮುಂಬೈ: ಜನರಿಗೆ ಕ್ಷುಲ್ಲಕ ಕಾರಣಕ್ಕೆ ಅನಾನುಕೂಲ ಮಾಡುವ 2,000 ಬಳಕೆಯಲ್ಲಿಲ್ಲದ ಕಾನೂನು ಗಳನ್ನು ತಮ್ಮ ಸರ್ಕಾರ ರದ್ದುಗೊಳಿಸಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವ್ಯಾಪಾರ ಮಾಡುವ ಸುಲಭ ಪಟ್ಟಿಯಲ್ಲಿ ಭಾರತವು ಗಣನೀಯವಾಗಿ ಸುಧಾರಿಸಿದೆ. ಈ ಬಗ್ಗೆ ಸಚಿವ ಜಿತೇಂದರ್​ ಸಿಂಗ್ ಮಾಹಿತಿ ನೀಡಿದರು.

    ಎಲ್ಲಿ ಹೇಳಿಕೆ ನೀಡಿದ್ದು?

    ಮುಂಬೈನಲ್ಲಿ ಯಶ್‌ರಾಜ್ ಸಂಶೋಧನಾ ಫೌಂಡೇಷನ್ ಆಯೋಜಿಸಿದ್ದ ‘ಕೃತಜ್ಞತಾ ಸಮಾರಂಭ’ದಲ್ಲಿ ‘ಯಶ್‌ರಾಜ್ ಭಾರತಿ ಸಮ್ಮಾನ್’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಚಿವ ಜಿತೇಂದರ್ ಸಿಂಗ್​, ‘ಈ ಹಿಂದಿನ ಸರ್ಕಾರಗಳ ಯಥಾಸ್ಥಿತಿಯ ವಿಧಾನಗಳಿಗಿಂತ ಭಿನ್ನವಾಗಿ ಪ್ರಧಾನಿ ಮೋದಿ ನಡೆದುಕೊಂಡಿದ್ದು ಬ್ರಿಟಿಷರ ಕಾಲದಿಂದಲೂ ಉಳಿದುಕೊಂಡು ಬಂದಿದ್ದ ಹಾಗೂ ನಾಗರಿಕರಿಗೆ ಅನನುಕೂಲತೆಯನ್ನುಂಟು ಮಾಡುವ ಕೆಲವು ಕಾನೂನು ಮತ್ತು ನೀತಿಗಳನ್ನು ತೆಗೆದುಹಾಕಿದ್ದಾರೆ’ ಎಂದು ತಿಳಿಸಿದರು.

    ಇದನ್ನೂ ಓದಿ: ಕೇಂದ್ರ ಕಾನೂನು ಸಚಿವರ ಕಾರಿಗೆ ಗುದ್ದಿದ ಟ್ರಕ್​; ಪ್ರಾಣಾಪಾಯದಿಂದ ಪಾರು

    ‘ನಾಗರಿಕರ ಜೀವನವನ್ನು ಸುಲಭಗೊಳಿಸುವುದೇ ಉತ್ತಮ ಆಡಳಿತದ ಗುರಿಯಾಗಿದೆ’ ಎಂದೂ ಅವರು ಹೇಳಿದ್ದಾರೆ. ಯಶ್ರರಾಜ್ ಭಾರತಿ ಸಮ್ಮಾನ್ ಪ್ರಶಸ್ತಿ ಸ್ಥಾಪಿಸಿ, ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸುವ ಕಾರ್ಯ ಮಾಡುತ್ತಿರುವ ಯಶ್ರರಾಜ್ ಸಂಶೋಧನಾ ಫೌಂಡೇಷನ್‌ನ ಕಾರ್ಯವನ್ನು ಸಚಿವರು ಶ್ಲಾಘಿಸಿದರು.

    ‘ಆರೋಗ್ಯ ಕ್ಷೇತ್ರದಲ್ಲಿನ ನಾವೀನ್ಯತೆ, ಜನರ ಜೀವನ ಪರಿವರ್ತನೆ ಮತ್ತು ನೈತಿಕ ಆಡಳಿತ ಎಂಬ ಮೂರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts