More

    ಜಿರಳೆ, ಇಂಡಿಗೋ ವಿಮಾನದಲ್ಲೂ ನಿನ್ನ ನೆರಳೆ?

    ನವದೆಹಲಿ: ಮುಂಬೈನಿಂದ ಭುವನೇಶ್ವರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಶುಕ್ರವಾರ ಪ್ರಯಾಣಿಕರ ಟ್ರೇ ಟೇಬಲ್‌ನಲ್ಲಿ ಜಿರಳೆ ಕಂಡುಬಂದಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಪ್ರಯಾಣಿಕರು ತಿಂಡಿ ತಿನ್ನುವಾಗ ಜಿರಳೆ ಮೇಜಿನ ಸುತ್ತಲೂ ತಿರುಗುತ್ತಿರುವುದನ್ನು ಕಾಣಬಹುದು.

    ವಿಮಾನಯಾನ ಸಂಸ್ಥೆ ನೀಡಿದ ಸೇವೆಯ ಬಗ್ಗೆ ಪ್ರಯಾಣಿಕರು ನಿರಾಶೆ ವ್ಯಕ್ತಪಡಿಸಿದ್ದು ಇದು “ಇದು ನೈರ್ಮಲ್ಯದ ಬಗ್ಗೆ ಕಾಳಜಿ ಇಲ್ಲದೇ ಇರುವುದನ್ನು ತೊರಿಸುತ್ತಿದ್ದು ಇದು ಸ್ವೀಕಾರಾರ್ಹವಲ್ಲ” ಎಂದು ಹೇಳಿದರು.

    ಇದನ್ನೂ ಓದಿ: ರೈಲಲ್ಲಿ ನೀಡಿದ್ದ ಆಮ್ಲೆಟ್​ನಲ್ಲಿ ಜಿರಳೆ; ತಿಂಡಿಗೆ ಆಮ್ಲೆಟ್​ ತಿಂದಿದ್ದ ಇನ್ನೊಬ್ಬ ಪ್ರಯಾಣಿಕನಿಗೂ ಪಶ್ಚಾತ್ತಾಪ!

    ಜಿರಳೆ ಕಥೆ ಇದೇ ಮೊದಲಲ್ಲ!

    ಇಂಡಿಗೋ ವಿಮಾನಗಳಲ್ಲಿ ಜಿರಳೆಗಳು ಕಂಡುಬರುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಂಗೀತ ಸಂಯೋಜಕ ರಿಕಿ ಕೇಜ್ ಪಾಟನಾದಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದಾಗ ಇಂಡಿಗೋ ವಿಮಾನದಲ್ಲಿ ಜಿರಳೆ ಕಂಡುಬಂದಿದೆ ಎಂದು ಟ್ವೀಟ್ ಮಾಡಿದ್ದರು.

    ಇದನ್ನೂ ಓದಿ: ಹೊಸ ಜಾತಿಯ ಜಿರಳೆಗಳು ಪತ್ತೆ; ಹೆಸರೇನು ಗೊತ್ತೇ?

    “ಅಕ್ಟೋಬರ್ 13 ರಂದು ಪಾಟನಾದಿಂದ ದೆಹಲಿಗೆ ಇಂಡಿಗೋ 6E2064 ವಿಮಾನದಲ್ಲಿ ಜಿರಳೆ ನಮ್ಮೊಂದಿಗೆ ಪ್ರಯಾಣಿಸುತ್ತಿದೆ. ಅದಕ್ಕೆ ಕಾಂಪ್ಲಿಮೆಂಟರಿ ಊಟ ಸಿಕ್ಕಿದೆ ಎಂದು ನನಗೆ ಪಕ್ಕಾ ಗೊತ್ತಿದೆ” ಎಂದು ತಮ್ಮ ಹ್ಯಾಂಡಲ್‌ನಲ್ಲಿ ಬರೆದುಕೊಂಡಿದ್ದರು.

    ವಿಶ್ವಸಂಸ್ಥೆ ಅಧಿಕಾರಿಗೂ ಎದುರಾಗಿತ್ತು ಜಿರಳೆರಾಯನ ಸಮಸ್ಯೆ…

    ಇಂಡಿಗೋ ಕೇವಲ ವಿಮಾನವಲ್ಲ, ಇತ್ತೀಚಿನ ದಿನಗಳಲ್ಲಿ, ಪ್ರಯಾಣಿಕರು ಕಷ್ಟದ ಅನುಭವವನ್ನು ಹೊಂದಿದ್ದರು. ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಮಾರ್ಚ್‌ನಲ್ಲಿ ಏರ್ ಇಂಡಿಯಾವನ್ನು ತಮ್ಮ ಕಳಪೆ ಸೇವೆ ಮತ್ತು ಕ್ಷಮೆಯ ನಿರ್ವಹಣೆಗಾಗಿ ಟೀಕಿಸಿದ್ದರು . ಜಿರಳೆಗಳು ಮತ್ತು ವಿಮಾನದಲ್ಲಿ “ಮನರಂಜನೆ/ಕಾಲ್ ಬಟನ್‌ಗಳು/ರೀಡಿಂಗ್ ಲೈಟ್‌ಗಳು” ಇಲ್ಲದಿರುವ ಬಗ್ಗೆ ಅಧಿಕಾರಿ ಟ್ವಿಟರ್‌ನಲ್ಲಿ ಬರೆದಿದ್ದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts