More

    ಎಲ್ಲಾ ಆಯ್ತು, ಈಗ ಮಾಸ್ಕ್‌ನಲ್ಲಿ ಚಿನ್ನ ಕಳ್ಳಸಾಗಣೆ!

    ಭಟ್ಕಳ: ಚಿನ್ನ ಕಳ್ಳಸಾಗಣೆ ಮಾಡಲು ಕೆಲವರು ಚಿತ್ರವಿಚಿತ್ರ ಮಾರ್ಗಗಳನ್ನು ಅನುಸರಿಸುವುದು ಆಗಾಗ ವರದಿಯಾಗುತ್ತಲೇ ಇರುತ್ತದೆ. ಇದು ಕರೊನಾ ಯುಗ. ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯವಲ್ಲವೇ? ಇಲ್ಲೊಬ್ಬ ವ್ಯಕ್ತಿ ಆ ನಿಯಮವನ್ನೇ ವರವಾಗಿಸಿಕೊಂಡು, ಫೇಸ್ ಮಾಸ್ಕ್‌ನಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಿ ಸುದ್ದಿಯಾಗಿದ್ದಾನೆ.

    ಆತನನ್ನು ವಿಮಾನ ನಿಲ್ದಾಣ ಅಧಿಕಾರಿಗಳು ಬಂಧಿಸಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಕೇರಳದ ಕರೀಂಪುರ ವಿಮಾನ ನಿಲ್ದಾಣಕ್ಕೆ ಮರಳಿದ ಭಟ್ಕಳದ ಅಮರ್ ಎಂಬಾತ ಮಾಸ್ಕ್‌ನಲ್ಲಿ 2 ಲಕ್ಷ ರೂ. ಮೌಲ್ಯದ 40 ಗ್ರಾಂ ಚಿನ್ನವನ್ನಿಟ್ಟು ಸಾಗಿಸಲು ಯತ್ನಿಸಿರುವುದು ಪತ್ತೆಯಾಗಿದೆ. ಎನ್ 95 ಮಾಸ್ಕ್‌ನಲ್ಲಿರುವ ಉಸಿರು ಹೊರಹಾಕುವ ವಾಲ್ವ್‌ನ ಹಿಂಭಾಗದಲ್ಲಿ ಈತ ಚಿನ್ನವನ್ನು ಬಚ್ಚಿಟ್ಟಿದ್ದು ಗೊತ್ತಾಗಿದೆ. ಇದನ್ನೂ ಓದಿ: ಮಾಸ್ಕ್‌ ಧರಿಸದೇ ಇದ್ದರೆ 1000 ರೂ. ದಂಡ; ಗ್ರಾಮೀಣ ಭಾಗದಲ್ಲಿ 500 ರೂ. ಫೈನ್!

    ಕೋಯಿಕೋಡ್ ಏರ್ ಇಂಟೆಲಿಜೆನ್ಸಿ, ಕ್ಯಾಲಿಕಟ್ ಯುನಿಟ್, ಕೊಚ್ಚಿನ್ ಕಸ್ಟಮ್ಸ್ ಪ್ರಿವೆಂಟಿವ್ ಅಧಿಕಾರಿಗಳು ಈತನ ಅತಿ ಜಾಣತನವನ್ನು ಪತ್ತೆ ಹಚ್ಚಿ, ಕಾನೂನು ಕ್ರಮ ಜರುಗಿಸಿದ್ದಾರೆ. ಚಿನ್ನ ಅಕ್ರಮ ಸಾಗಣೆಯಲ್ಲಿ ಭಟ್ಕಳದ ಕೆಲ ವ್ಯಕ್ತಿಗಳು ಗೋವಾ ಹಾಗೂ ಕೇರಳ ವಿಮಾನ ನಿಲ್ದಾಣದಲ್ಲಿ ಈ ಹಿಂದೆಯೂ ಬಂಧಿತರಾಗಿದ್ದರು.

    ನಾಳೆಯಿಂದ ದೇಶದಲ್ಲಿ ಅನ್​ಲಾಕ್​-5: ಹೀಗಿದೆ ನೋಡಿ ಕೇಂದ್ರದ ಹೊಸ ಮಾರ್ಗಸೂಚಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts