More

    ಏಷ್ಯನ್ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಸಂಜೀತ್, ಇತಿಹಾಸ ಬರೆದ ಭಾರತ

    ದುಬೈ: ಸಂಜೀತ್ 91 ಕೆಜಿ ವಿಭಾಗದಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಭಾರತ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ಗೆ ಭರ್ಜರಿ ವಿದಾಯ ಹೇಳಿದೆ. ಹಾಲಿ ಚಾಂಪಿಯನ್ ಅಮಿತ್ ಪಾಂಗಲ್ ಮತ್ತು ಶಿವ ಥಾಪಾ ಬೆಳ್ಳಿಗೆ ತೃಪ್ತಿಪಟ್ಟರು. ಭಾರತ ಕೂಟದಲ್ಲಿ 2 ಚಿನ್ನ, 5 ಬೆಳ್ಳಿ ಮತ್ತು 8 ಕಂಚಿನ ಸಹಿತ ಒಟ್ಟು 15 ಪದಕ ಜಯಿಸಿ ಹೊಸ ಇತಿಹಾಸ ಬರೆಯಿತು.

    ಸಂಜೀತ್ ಸೋಮವಾರ ನಡೆದ ಫೈನಲ್‌ನಲ್ಲಿ ಕಜಾಕಿಸ್ತಾನದ ವಸಿಲಿ ಲೆವಿಟ್‌ಗೆ 4-1ರಿಂದ ಸೋಲುಣಿಸಿದರು. 52 ಕೆಜಿ ವಿಭಾಗದ ಫೈನಲ್‌ನಲ್ಲಿ ಅಮಿತ್ ಪಾಂಗಲ್ ವಿವಾದಾತ್ಮಕ ತೀರ್ಪಿನಿಂದಾಗಿ ಉಜ್ಬೇಕಿಸ್ತಾನದ ಜೊಯಿರೊವ್ ವಿರುದ್ಧ 2-3ರಿಂದ ಸೋತರು. ಭಾರತ ಮೇಲ್ಮನವಿ ಸಲ್ಲಿಸಿದರೂ ತೀರ್ಪು ಬದಲಾಗಲಿಲ್ಲ. 64 ಕೆಜಿ ವಿಭಾಗದ ಫೈನಲ್‌ನಲ್ಲಿ ಶಿವ ಥಾಪಾ 2-3ರಿಂದ ಮಂಗೋಲಿಯಾದ ಬಾತರ್ಸುಖ್ ಚಿಂಗೋರಿಗ್ ವಿರುದ್ಧ ಸೋತರು.

    ಇದನ್ನೂ ಓದಿ: ಐಪಿಎಲ್ ಭಾಗ-2ಕ್ಕೆ ಪ್ರೇಕ್ಷಕರಿಗೆ ಪ್ರವೇಶ, ಆದರೆ ಷರತ್ತುಗಳು ಅನ್ವಯ!

    ಇದಕ್ಕೂ ಮುನ್ನ ಮಹಿಳಾ ವಿಭಾಗದಲ್ಲಿ ಪೂಜಾ ರಾಣಿ ಚಿನ್ನ ಜಯಿಸಿದ್ದರು. ಮೇರಿ ಕೋಮ್ ಸಹಿತ ಭಾರತದ ಇತರ ಮೂವರು ಮಹಿಳಾ ಬಾಕ್ಸರ್‌ಗಳು ರಜತ ಪದಕಕ್ಕೆ ತೃಪ್ತಿಪಟ್ಟಿದ್ದರು. 2019ರ ಆವೃತ್ತಿಯಲ್ಲಿ 13 ಪದಕ ಜಯಿಸಿದ್ದು ಕೂಟದಲ್ಲಿ ಭಾರತದ ಈ ಹಿಂದಿನ ಅತ್ಯುತ್ತಮ ನಿರ್ವಹಣೆಯಾಗಿತ್ತು.

    ಮೊಟ್ಟೆ ತಿಂದರೂ ವಿರಾಟ್ ಕೊಹ್ಲಿ ಸಸ್ಯಾಹಾರಿ! ನೆಟ್ಟಿಗರ ಅಚ್ಚರಿ

    2015ರ ಏಕದಿನ ವಿಶ್ವಕಪ್ ವಿಜೇತ ಆಸೀಸ್ ಕ್ರಿಕೆಟಿಗ ಈಗ ಕಾರ್ಪೆಂಟರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts