More

    ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತೆ ಬಾಕ್ಸರ್ ಲವ್ಲಿನಾ ಹಳ್ಳಿಗೆ ಈಗ ಹೊಸ ರಸ್ತೆ ನಿರ್ಮಾಣ

    ಟೋಕಿಯೊ: ಒಲಿಂಪಿಕ್ಸ್‌ನ ಮಹಿಳಾ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಪದಕ ಖಚಿತಪಡಿಸಿರುವ ಅಸ್ಸಾಂನ ಯುವ ಬಾಕ್ಸರ್ ಲವ್ಲಿನಾ ಬೋರ್ಗೋಹೈನ್ ಅವರ ಅಮೋಘ ಸಾಧನೆಯ ಬೆನ್ನಲ್ಲೇ ಅವರ ಹುಟ್ಟೂರಿಗೂ ಅದೃಷ್ಟ ಖುಲಾಯಿಸಿದೆ.

    ಅಸ್ಸಾಂನ ಗೋಲ್‌ಘಟ್ ಜಿಲ್ಲೆಯ ಬರೋಮುಥಿಯಾ ಹಳ್ಳಿಗೆ ಮಣ್ಣಿನ ರಸ್ತೆಯಷ್ಟೇ ಇತ್ತು. ಇದರಿಂದ ಲವ್ಲಿನಾ ಅವರ ಮನೆಗೆ ಹೋಗುವ ಕೆಸರು, ಕಲ್ಲುಗಳಿಂದ ಕೂಡಿದ 3.5 ಕಿಮೀ ಉದ್ದದ ರಸ್ತೆಯ ಪ್ರಯಾಣ ಪ್ರಯಾಸಕರವಾಗಿತ್ತು. ಆದರೆ ಇದೀಗ ಅಸ್ಸಾಂ ಲೋಕೋಪಯೋಗಿ ಇಲಾಖೆಯಿಂದ ಈ ರಸ್ತೆಗೆ ಡಾಮರೀಕರಣದ ಮೊದಲ ಹಂತದ ಕಾಮಗಾರಿ ನಡೆಯುತ್ತಿದೆ.

    ಇದನ್ನೂ ಓದಿ: ಅಭ್ಯಾಸದ ವೇಳೆ ತಲೆಗೆ ಚೆಂಡೇಟು, ಮೊದಲ ಟೆಸ್ಟ್‌ನಿಂದ ಮಯಾಂಕ್ ಅಗರ್ವಾಲ್ ಔಟ್

    ಸ್ಥಳೀಯ ಶಾಸಕ ಬಿಸ್ವಜಿತ್ ುಕನ್ ಇದರ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದಾರೆ. ‘ಇದು ಲವ್ಲಿನಾಗೆ ನಾವು ನೀಡುತ್ತಿರುವ ಉಡುಗೊರೆ. ಅವಳು ಚಿನ್ನದ ಪದಕದೊಂದಿಗೆ ತವರಿಗೆ ಮರಳಲಿ ಎಂದು ಅಸ್ಸಾಂ ಮತ್ತು ದೇಶದ ಜನತೆ ಈಗ ಪ್ರಾರ್ಥಿಸುತ್ತಿದ್ದಾರೆ’ ಎಂದು ಬಿಸ್ವಜಿತ್ ಹೇಳಿದ್ದಾರೆ. ಲವ್ಲಿನಾಗೆ ಶುಭಹಾರೈಸುವ ಸಲುವಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಸೈಕ್ಲಿಂಗ್ ರ‌್ಯಾಲಿಯನ್ನೂ ಆಯೋಜಿಸಿದ್ದಾರೆ.

    ಮೊದಲಿಗೆ ಮುಯಿತೈ ಪಟುವಾಗಿದ್ದ 23 ವರ್ಷದ ಲವ್ಲಿನಾ ಇದೀಗ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೂರನೇ ಬಾಕ್ಸರ್ ಎನಿಸಿದ್ದಾರೆ. ವಿಜೇಂದರ್ ಸಿಂಗ್ (2008) ಮತ್ತು ಮೇರಿ ಕೋಮ್ (2012) ಮೊದಲಿಬ್ಬರು. ಲವ್ಲಿನಾ ಬುಧವಾರ ಉಪಾಂತ್ಯದ ಹೋರಾಟ ನಡೆಸಲಿದ್ದು, ಗೆದ್ದರೆ ಕನಿಷ್ಠ ಬೆಳ್ಳಿ ಖಚಿತವಾಗಲಿದೆ. ಈ ಮೂಲಕ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆಲುವಿನ ಸನಿಹಕ್ಕೇರಿದ ಮೊದಲ ಭಾರತೀಯರೆನಿಸಲಿದ್ದಾರೆ. ಸೋತರೆ ಕಂಚಿನ ಪದಕಕ್ಕೆ ತೃಪ್ತಿಪಡಲಿದ್ದಾರೆ.

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಮರಳಿದ ಬಿಲ್ಗಾರ ಜಾಧವ್‌ಗೆ ಬೆದರಿಕೆ ಕರೆಗಳ ಸ್ವಾಗತ!

    VIDEO | ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಿದ್ದು ಎದ್ದು ಓಡಿ ಗೆದ್ದ ಡಚ್​ ಓಟಗಾರ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts