More

    ಗೋಕರ್ಣದ ಬೀಚ್ ಕ್ರಿಕೆಟ್‌ಗೆ ಮನಸೋತ ಐಸಿಸಿ!

    ಬೆಂಗಳೂರು: ಉತ್ತರ ಕನ್ನಡದ ಸುಂದರ ಕರಾವಳಿ ತೀರ ಗೋಕರ್ಣ. ಶಿವನ ದೇವಾಲಯ ಹೊಂದಿರುವ ಈ ಸ್ಥಳ ಧಾರ್ಮಿಕ ಕೇಂದ್ರವೂ ಆಗಿದ್ದು, ಕಡಲ ತೀರದ ಸೌಂದರ್ಯದಿಂದಾಗಿ ಸಾಕಷ್ಟು ವಿದೇಶಿ ಪ್ರವಾಸಿಗರನ್ನೂ ಆಕರ್ಷಿಸಿದೆ. ಇದೀಗ ಇಲ್ಲಿನ ಬೀಚ್ ಕ್ರಿಕೆಟ್ ಆಟದ ವಿಹಂಗಮ ನೋಟಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯೂ (ಐಸಿಸಿ) ಮನಸೋತಿದೆ!

    ಇದನ್ನೂ ಓದಿ:ಸುಶಾಂತ್ ಬ್ಯಾಟಿಂಗ್​ ಶೈಲಿಗೆ ಫಿದಾ ಆಗಿದ್ದ ಸಚಿನ್..!

    ಗೋಕರ್ಣ ಕಡಲತೀರದಲ್ಲಿ ಯುವಕರು ಕ್ರಿಕೆಟ್ ಆಡುತ್ತಿರುವ ಚಿತ್ರವನ್ನು ಐಸಿಸಿ ಸೋಮವಾರ ಟ್ವೀಟ್ ಮಾಡಿದೆ. ಈ ಸೊಗಸಾದ ದೃಶ್ಯಕ್ಕೆ ಸಾವಿರಾರು ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದಾರೆ. ಈ ಸುಂದರ ಸ್ಥಳ ಎಲ್ಲಿದೆ ಎಂದು ಪ್ರಶ್ನಿಸಿರುವ ದೇಶ-ವಿದೇಶದ ಕ್ರಿಕೆಟ್ ಪ್ರೇಮಿಗಳಿಗೆ, ಕನ್ನಡಿಗರು ಇದು ನಮ್ಮ ಕರ್ನಾಟಕದ ಕರಾವಳಿ ಎಂದು ಹೆಮ್ಮೆಯ ಉತ್ತರವನ್ನೂ ನೀಡಿದ್ದಾರೆ.

    ಇದನ್ನೂ ಓದಿ: ಕೆಎಲ್ ರಾಹುಲ್ ಸ್ಥಿರ ಬ್ಯಾಟಿಂಗ್ ಹಿಂದಿದೆ ಆ ನೋವು..!

    ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳು ಕೂಡ ಈ ಸ್ಥಳ ನಿಜಕ್ಕೂ ಸುಂದರವಾಗಿದೆ ಎಂದು ಕಮೆಂಟ್‌ಗಳನ್ನು ಹಾಕಿದ್ದಾರೆ. ‘ಬಾಲ್ ದೂರ ಹೋದರೂ ತೊಂದರೆ ಇಲ್ಲ, ಅಲೆಗಳೇ ಬಾಲ್‌ಬಾಯ್’ ಎಂದು ಕನ್ನಡದಲ್ಲೂ ಕಮೆಂಟ್‌ಗಳು ಬಂದಿವೆ. ಕಳೆದ 3 ತಿಂಗಳಿನಿಂದ ಕ್ರಿಕೆಟ್ ಚಟುವಟಿಕೆಗಳೆಲ್ಲ ಸ್ಥಗಿತಗೊಂಡಿರುವ ನಡುವೆ ಐಸಿಸಿ, ವಿಶ್ವದ ಸುಂದರ ಕ್ರಿಕೆಟ್ ತಾಣಗಳ ಚಿತ್ರಗಳನ್ನು ಟ್ವೀಟಿಸಿ, ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯುತ್ತಾ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts