More

    ಜೆಎನ್​.1 ಪ್ರಕರಣಗಳ ಸಂಖ್ಯೆಯಲ್ಲಿ ಗೋವಾ ಈಗ ನಂಬರ್​ 1: ಕೇರಳದಲ್ಲಿ ಮೂವರ ಬಲಿ, ಭಾರತದಲ್ಲಿ ಕೋವಿಡ್​ ಹೊಸ ರೂಪಾಂತರದ ಭೀತಿ

    ನವದೆಹಲಿ: ಕರೊನಾ ವೈರಸ್​ನ ರೂಪಾಂತರ JN.1 ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾದ ನಂತರ ದೇಶಾದ್ಯಂತ ಮತ್ತೆ ಆತಂಕ ಶುರುವಾಗಿದೆ. ಅಲ್ಲದೆ, ಕೇರಳದಲ್ಲಿ ಕೋವಿಡ್​ಗೆ ಕಳೆದ 24 ಗಂಟೆಗಳಲ್ಲಿ ಮೂವರು ಬಲಿಯಾಗಿದ್ದಾರೆ. ಹೀಗಾಗಿ, 2020 ಮತ್ತು 2021ರಲ್ಲಿ ಸರಿಸುಮಾರು ಎರಡು ವರ್ಷಗಳ ಕಾಲ ಭಾರತ ಸೇರಿ ಜಗತ್ತಿನಾದ್ಯಂತ ಸಾಕಷ್ಟು ಸಾವುಗಳಿಗೆ ಕಾರಣವಾಗಿದ್ದ ಹಾಗೂ ಆರ್ಥಿಕ ಸಂಕಷ್ಟ ಸೃಷ್ಟಿಸಿದ ಕೋವಿಡ್​ ಹಾವಳಿ ಮತ್ತೆ ಹರಡುವ ಭೀತಿ ತಲೆದೋರಿದೆ.

    ಭಾರತದಲ್ಲಿ ಈಗ ಹೊಸ ಕರೋನಾವೈರಸ್ ರೂಪಾಂತರ JN.1 ಪ್ರಕರಣಗಳ ಸಂಖ್ಯೆ 21ಕ್ಕೆ ಏರಿದೆ. ಗೋವಾ ರಾಜ್ಯದಲ್ಲಿ ಜೆಎನ್.1 ರೂಪಾಂತರದ 19 ಪ್ರಕರಣಗಳು, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ.

    ಕೋವಿಡ್​ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಅನೇಕ ರೀತಿಯ ಸಲಹೆಗಳನ್ನು ನೀಡಿದ್ದರೂ JN.1 ಪ್ರಕರಣಗಳ ಸಂಖ್ಯೆ ಬುಧವಾರ ಮತ್ತಷ್ಟು ಹೆಚ್ಚಾಗಿರುವುದು ಇನ್ನಷ್ಟು ಅತಂಕಕ್ಕೆ ಕಾರಣವಾಗಿದೆ.

    ಭಾರತದಲ್ಲಿ 614 ಹೊಸ ಕೋವಿಡ್​ ಪ್ರಕರಣಗಳು ದಾಖಲಾಗಿವೆ, ಮೇ 21 ರಿಂದ ವರದಿಯಾದ ಅತಿ ಹೆಚ್ಚು ಪ್ರಕರಣಗಳ ಸಂಖ್ಯೆ ಇದಾಗಿದೆ, ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 2,311 ಕ್ಕೆ ಏರಿದೆ ಎಂದು ಬುಧವಾರ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಕೇರಳದಿಂದ ಮೂರು ಸಾವುಗಳು ವರದಿಯಾಗುವುದರೊಂದಿಗೆ ಸಾವಿನ ಸಂಖ್ಯೆ 5,33,321 ಕ್ಕೆ ದಾಖಲಾಗಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ದತ್ತಾಂಶ ತೋರಿಸಿದೆ.

    ಕೇರಳದಲ್ಲಿ 24 ಗಂಟೆಗಳಲ್ಲಿ 292 ಹೊಸ ಕೋವಿಡ್ ಪ್ರಕರಣಗಳು ಮತ್ತು ಮೂರು ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವೆಬ್‌ಸೈಟ್ ತಿಳಿಸಿದೆ. ಬುಧವಾರ ದೇಶಾದ್ಯಂತ 341 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಹೆಚ್ಚಿನವು ಕೇರಳದಿಂದ ವರದಿಯಾಗಿವೆ.

    ಬುಧವಾರವೂ ಮುಂದುವರಿದ ಸಂಸದರ ಅಮಾನತು ಕ್ರಮ: ಸಸ್ಪೆಂಡ್​ ಆದ ಎಂಪಿಗಳ ಸಂಖ್ಯೆ ಎಷ್ಟು ಗೊತ್ತೆ?

    ಖಲಿಸ್ತಾನಿ ಉಗ್ರ ಪನ್ನುನ್​ ಕೊಲೆ ಸಂಚು ಆರೋಪ: ಮೌನ ಮುರಿದ ಪ್ರಧಾನಿ ಮೋದಿ ಹೇಳಿದ್ದೇನು?

    ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್‌ವೇನಲ್ಲಿ ಟ್ರಾಫಿಕ್​ ಕಂಟ್ರೋಲ್​ಗೆ ಡ್ರೋನ್​ಗಳ ನಿಯೋಜನೆ: ಎರಡೇ ವಾರಗಳಲ್ಲಿ ಸಂಗ್ರಹವಾದ ದಂಡ ಎಷ್ಟು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts