More

    ಬುಧವಾರವೂ ಮುಂದುವರಿದ ಸಂಸದರ ಅಮಾನತು ಕ್ರಮ: ಸಸ್ಪೆಂಡ್​ ಆದ ಎಂಪಿಗಳ ಸಂಖ್ಯೆ ಎಷ್ಟು ಗೊತ್ತೆ?

    ನವದೆಹಲಿ: ಸಂಸತ್ತಿನಿಂದ ವಿರೋಧ ಪಕ್ಷಗಳ ಸಂಸದರನ್ನು ಅಮಾನತುಗೊಳಿಸುವ ಕ್ರಮವು ಬುಧವಾರವೂ ಮುಂದುವರಿದಿದೆ.

    ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಇಬ್ಬರು ಪ್ರತಿಪಕ್ಷಗಳ ಸಂಸದರನ್ನು ಲೋಕಸಭೆಯಲ್ಲಿ ದುರ್ವರ್ತನೆಗಾಗಿ ಬುಧವಾರ ಅಮಾನತುಗೊಳಿಸಲಾಗಿದೆ. ಕೇರಳದ ಥಾಮಸ್ ಚಾಜಿಕಾಡನ್ ಮತ್ತು ಎ.ಎಂ. ಆರಿಫ್ ಈಗ ಸಸ್ಪೆಂಡ್​ ಆಗಿರುವ ಸಂಸದರು. ಚಾಜಿಕಾಡನ್ ಅವರು ಕೇರಳ ಕಾಂಗ್ರೆಸ್ (ಎಂ) ಪಕ್ಷದವರಾಗಿದ್ದರೆ, ಆರಿಫ್ ಅವರು ಸಿಪಿಎಂ ಸಂಸದರಾಗಿದ್ದಾರೆ.

    ಪ್ಲಕಾರ್ಡ್‌ಗಳನ್ನು (ಫಲಕಗಳನ್ನು) ಪ್ರದರ್ಶಿಸಿ, ಸದನದ ಬಾವಿಗೆ ಪ್ರವೇಶಿಸಿದ್ದಕ್ಕಾಗಿ ಇವರಿಬ್ಬರನ್ನೂ ಅಮಾನತುಗೊಳಿಸಲಾಗಿದೆ. ಇದರೊಂದಿಗೆ ಸಂಸತ್ತಿನಿಂದ ಸಸ್ಪೆಂಡ್​ ಆಗಿರುವ ವಿರೋಧ ಪಕ್ಷದ ಸಂಸದರ ಸಂಖ್ಯೆ ಒಟ್ಟು 143ಕ್ಕೆ ತಲುಪಿದೆ.

    ಡಿಸೆಂಬರ್ 13 ರಂದು ನಡೆದ ಸಂಸತ್ತಿನ ಭದ್ರತಾ ಉಲ್ಲಂಘನೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಹೇಳಿಕೆ ನೀಡುವಂತೆ ಒತ್ತಾಯಿಸಿ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಕ್ಕೆ ಅಡ್ಡಿಪಡಿಸಿದ ಮತ್ತು ಘೋಷಣೆಗಳನ್ನು ಕೂಗಿದ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಲಾಗಿದೆ. ಡಿಸೆಂಬರ್ 14 ರಂದು 14 ಸಂಸದರು, ಡಿ. 18ರಂದು 78 ಸಂಸದರು, ಡಿ. 19ರಂದು 49 ಸಂಸದರನ್ನು ಈ ಮೊದಲು ಅಮಾನತುಗೊಳಿಸಲಾಗಿದೆ. ಚಳಿಗಾಲದ ಅಧಿವೇಶನ ಡಿಸೆಂಬರ್ 4 ರಂದು ಆರಂಭವಾಗಿದ್ದು, ಡಿಸೆಂಬರ್ 22ರಂದು ಕೊನೆಗೊಳ್ಳಲಿದೆ.

    ಸಂಸದರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂದು ಪ್ರತಿಪಕ್ಷಗಳ ಸಂದರು ಆರೋಪಿಸಿದ್ದು, ಅಮಾನತು ಕ್ರಮ ವಿರೋಧಿಸಿ ಅವರು ಸಂಸತ್ತಿನ ಸಂಕೀರ್ಣದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸದನಗಳಲ್ಲಿ ಸ್ಪೀಕರ್​ ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ.

    ಖಲಿಸ್ತಾನಿ ಉಗ್ರ ಪನ್ನುನ್​ ಕೊಲೆ ಸಂಚು ಆರೋಪ: ಮೌನ ಮುರಿದ ಪ್ರಧಾನಿ ಮೋದಿ ಹೇಳಿದ್ದೇನು?

    ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್‌ವೇನಲ್ಲಿ ಟ್ರಾಫಿಕ್​ ಕಂಟ್ರೋಲ್​ಗೆ ಡ್ರೋನ್​ಗಳ ನಿಯೋಜನೆ: ಎರಡೇ ವಾರಗಳಲ್ಲಿ ಸಂಗ್ರಹವಾದ ದಂಡ ಎಷ್ಟು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts