More

    ಓರಿಯಂಟ್​ ಸಿಮೆಂಟ್​ಗೆ ಜಮೀನು ನೀಡಿದವರಿಗೆ ಉದ್ಯೋಗ ಕೊಡಿ

    ಚಿತ್ತಾಪುರ: ಜಮೀನು ಕಳೆದುಕೊಂಡ ರೈತರಿಗೆ ಉದ್ಯೋಗ ನೀಡಬೇಕು. ಕಾನೂನು ಬಾಹಿರವಾಗಿ 13 ಕಾರ್ಮಿಕರನ್ನು ವಜಾ ಮಾಡಿದ್ದು, ಕೂಡಲೇ ಅವರನ್ನು ಕಂಪನಿಗೆ ಸೇರಿಸಿಕೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿ¯್ಲÁ ಕಾರ್ಯದರ್ಶಿ ಡಾ. ಸಾಯಬಣ್ಣ ಗುಡುಬಾ ಒತ್ತಾಯಿಸಿದರು.

    ಓರಿಯಂಟ್ ಸಿಮೆಂಟ್ ಕಂಪನಿ ವಿರುದ್ಧ ಇಟಗಾದ ಮುಖ್ಯರಸ್ತೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಸ್ತಾರೋಕೋದಲ್ಲಿ ಮಾತನಾಡಿ, ಜಮೀನು ಕಳೆದುಕೊಂಡ ರೈತರು ಕಳೆದ 16 ತಿಂಗಳಿAದ ಧರಣಿ ನಡೆಸುತ್ತಿದ್ದರೂ ಕಂಪನಿ ಸ್ಪಂದಿಸುತ್ತಿಲ್ಲ. ಸ್ಟೇಷನ್ ತಾಂಡಾ, ಇಟಗಾ, ಮೊಗಲಾ, ದಿಗ್ಗಾಂವ್, ಹೂಡಾ ಗ್ರಾಮಗಳ ರೈತರ ಜಮೀನಿನನ್ನು ಸಿಕ್ಕ ಬೆಲೆ ಖರೀದಿ ಮಾಡಲಾಗಿದೆ. ಭೂ ಸ್ವಾಧೀನ ಕಾಯ್ದೆ ಪ್ರಕಾರ ಬೆಲೆ ನೀಡಿಲ್ಲ. ಅಲ್ಲದೆ ಜಮೀನು ಕಳೆದುಕೊಂಡ ರೈತರ ಕುಟುಂಬಕ್ಕೂ ಉದ್ಯೋಗ ಕೊಟ್ಟಿಲ್ಲ ಎಂದು ಕಿಡಿಕಾರಿದರು.

    ಕಂಪನಿ ಸ್ಥಾಪನೆಗೆ ಜಮೀನು ನೀಡಿರುವ ರೈತರಿಗೆ ಪ್ರತಿ ಎಕರೆಗೆ 20 ಲP್ಷÀ ರೂ. ನೀಡಬೇಕು. ಜಮೀನು ನೀಡಿರುವ ಕುಟುಂಬದ ಸದಸ್ಯರಿಗೆ ಕಾಯಂ ಉದ್ಯೋಗ ಕೊಡಬೇಕು. ವೆಜ್ ಬೋರ್ಡ್ ಒಪ್ಪಂದದAತೆ ವೇತನ ಸೌಲಭ್ಯ ನೀಡಬೇಕು. ಗ್ರಾಮದ ರೈತರ ಮತ್ತು ಗ್ರಾಮಸ್ಥರ ಮೇಲೆ ಹೂಡಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

    ಪ್ರಮುಖರಾದ ಮಹಾದೇವಯ್ಯ ಡಿಗ್ಗಿ, ಸಿದ್ದಣ್ಣ ಗೌಡ, ನಾಗೇಂದ್ರಪ್ಪ ಡಿಗ್ಗಿ, ಗಿಡ್ಡಮ್ಮ ಪವಾರ್, ಸಾಬಣ್ಣ ತಳವಾರ, ಸಾಬಣ್ಣ ಕುಂಬಾರ, ಸತ್ಯಪ್ಪ ತಳವಾರ, ಹನುಮಂತ ಯಾದವ್, ಶರಣಪ್ಪ ಹೊಸಳ್ಳಿ, ನಾಗಪ್ಪ ಚಿತ್ತಾಪುರ, ಗುಳಿನಾಥ ಡಿಗ್ಗಿ, ಭಾಗಣ್ಣ ತಳವಾರ, ಶರಣಯ್ಯ ಸ್ವಾಮಿ ಮೊಗಲಾ, ನಾಗು ಸುಬೇದಾರ್, ವಿಮನ್‌ವೆಲï ಡೇವಿಡ್, ನಿಂಗಣ್ಣ ಕೊಳ್ಳಿ, ಸಲೀಂ ಪಟೇಲ್, ಅಬ್ದುಲï ಖುರೇಷಿ, ಎ.ಕಟೊಳ್ಳಿ, ಸರೋಜಮ್ಮ ಡಿಗ್ಗಿ, ದ್ರೌಪತಿ ತಳವಾರ, ಶರಣಮ್ಮ ನಾಗಚಕ್ರ, ಸಿದ್ದಮ್ಮ ಹೊಸಹಳ್ಳಿ, ತಿಪ್ಪಣ್ಣ ದಳಪತಿ, ಸಿದ್ದಪ್ಪ ಹೂಡಾ, ದೊಡ್ಡ ಹಣಮಂತ ಡಿಗ್ಗಿ, ಮಲ್ಲಪ್ಪ ಡಿಗ್ಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts