More

    ಪಕ್ಷ ಬಿಡುವುದಾದರೆ ನಮ್ಮ ಹಣ ವಾಪಸ್​ ಕೊಡಿ: ಸಿಎಂ ಜಗನ್​ ಬೆಂಬಲಿಗರಿಂದ 60 ದಲಿತ ಕುಟುಂಬಗಳಿಗೆ ಬೆದರಿಕೆ!

    ವಿಜಯವಾಡ: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಪಕ್ಷದ ಮುಖಂಡರೊಬ್ಬರಿಂದ ಎಸ್‌ಸಿ ಮತ್ತು ಎಸ್‌ಟಿ ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ.

    ಇದನ್ನೂ ಓದಿ:‘ಡೆವಿಲ್’ ಸಿನಿಮಾ ಅಧಿಕೃತ ಮಾಹಿತಿ ಕೊಟ್ಟ ನಟ ದರ್ಶನ್​! 

    ಫೆ.11ರಂದು ಖಾಜಿಪೇಟೆ ಮಂಡಲದ ಆಂಜನೇಯಕೊಟ್ಟಾಳು ಗ್ರಾಮ ಪಂಚಾಯಿತಿ ಕೊತಪುಲ್ಲೂರಿನಲ್ಲಿ ಎಸ್‌ಸಿ ಮತ್ತು ಎಸ್‌ಟಿ ಕಾಲೋನಿಯ ಸುಮಾರು 60 ವೈಸಿಪಿ ಪಕ್ಷದ ಬೆಂಬಲಿತ ಕುಟುಂಬಗಳು ಮೈದುಕೂರು ಕ್ಷೇತ್ರದ ತೆಲುಗು ದೇಶಂ ಪಾರ್ಟಿ ಎಂಎಲ್​ಎ ಅಭ್ಯರ್ಥಿ ಪುಟ್ಟ ಸುಧಾಕರ್​ ಯಾದವ್​ ಅವರ ಸಮ್ಮುಖದಲ್ಲಿ ಟಿಡಿಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

    ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಪಕ್ಷಕ್ಕೆ ಸೇರಿದ್ದಾರೆ. ಈ ಸುದ್ದಿ ತಿಳಿದು ವೈಸಿಪಿ ಪಕ್ಷದ ಮುಖಂಡರು ಆಕ್ರೋಶಗೊಂಡಿದ್ದಾರೆ. ಈ ಹಿಂದೆ ಪಡೆದಿದ್ದ ಹಣವನ್ನು ವಾಪಸ್​ ನೀಡುವಂತೆ ಗಲಾಟೆ ಮಾಡಿದ್ದಾರೆ. ಎರಡೂ ಪಕ್ಷದ ಮುಖಂಡರ ನಡುವೆ ವಾಗ್ವಾದ ನಡೆದಿದೆ. ನನ್ನ ಹಣವನ್ನು ವಾಪಸ್​ ಕೊಡಿ ಇಲ್ಲ ಮತ್ತೆ ನಮ್ಮ ಪಕ್ಷಕ್ಕೆ ಬನ್ನಿ ಎಂದು ಬೆದರಿಕೆ ಹಾಕಿದ್ದಾರೆ. ಹಣ ಹಿಂದಿರುಗಿಸಲು ಎರಡು ದಿನ ಸಮಯಾವಕಾಶ ನೀಡಿದ್ದಾರೆ.

    ಆಂಜನೇಯಕೊಟ್ಟಾಳು ಗ್ರಾಮ ಪಂಚಾಯಿತಿಯನ್ನು ಅಭಿವೃದ್ಧಿ ಮಾಡಿದ್ದೇವೆ ಎಂದ ಅವರು, ಪಕ್ಷಾಂತರ ಮಾಡಿದರೆ ಸಾಕಾಗುವುದಿಲ್ಲ. ನಂತರದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ವೈಸಿಪಿ ಮುಖಂಡರ ಬೆದರಿಕೆ ಹಿನ್ನೆಲೆಯಲ್ಲಿ ದಲಿತರ ಕಾಲೋನಿ ನಿವಾಸಿಗಳು ಹಣ ಹಿಂತಿರುಗಿಸಲು ನಿರ್ಧರಿಸಿದ್ದಾರೆ. ಜೊತೆಗೆ ಒಂದೆರೆಡು ದಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

    ಅಲ್ಲಿವರೆಗೆ ಟ್ರ್ಯಾಕ್ಟರನ್ನು ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಸೋಮವಾರ ರಾತ್ರಿ ಹಿರಿಯ ಮುಖಂಡರ ಸಮ್ಮುಖದಲ್ಲಿ ದಲಿತ ಕಾಲೋನಿ ನಿವಾಸಿಗಳು ಹಾಗೂ ವೈಸಿಪಿ ಮುಖಂಡರ ನಡುವೆ ಸಭೆ ನಡೆಯಿತು. ದಲಿತರ ಪರ ಟಿಡಿಪಿ ಪಕ್ಷದ ಮುಖಂಡರೊಬ್ಬರು ಹಣ ನೀಡಿ ಟ್ರ್ಯಾಕ್ಟರ್ ಹಿಂಪಡೆದರು. ಇದೇ ಸಂದರ್ಭದಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಗೆಲುವು ಸಾಧಿಸಿ ಸರ್ಕಾರ ರಚನೆ ಮಾಡುತ್ತೇವೆ. ನಿಮ್ಮ ಬೆದರಿಕೆಗಳಿಗೆ ನಾವು ಎದುರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಸಿಎಂ ಜಗನ್​ಮೋಹನ್​ ರೆಡ್ಡಿ ಅವರ ವೈಸಿಪಿ ಪಕ್ಷದ ನಾಯಕರಿಂದ ಬಡಾವಣೆಗಳ ಅಭಿವೃದ್ಧಿಗೆ ಪಡೆದಿರುವ ಹಣವನ್ನು ಎಲ್ಲಿ ಮತ್ತೆ ವಾಪಸ್​ ಕೇಳುತ್ತಾರೆ ಎಂಬ ಆತಂಕದಲ್ಲಿದ್ದಾರೆ. ಹಲವರು ಟಿಡಿಪಿ ಪಕ್ಷದ ಕಡೆ ಮುಖ ಮಾಡಿದ್ದಾರೆ ಎಂದು ವರದಿಯಾಗಿದೆ.

    ಮತ್ತೆ ಚಿತ್ರಗಳಲ್ಲಿ ನಟಿಸುವ ಆಸೆ ಬಿಚ್ಚಿಟ್ಟ ನಟಿ ಸ್ಯಾಮ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts