More

    ಮಗಳ ಹೆಸರೇ ಮನೆಯ ಹೆಸರು! ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ಹೊಸ ವರಸೆ!

    ಭೋಪಾಲ್​: ಹೆಣ್ಣು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು, ವಿಶೇಷ ಯೋಜನೆಗಳನ್ನು ರೂಪಿಸುವ ಸರ್ಕಾರವನ್ನು ನೋಡಿರುತ್ತೇವೆ. ಆದರೆ ಈ ಒಂದು ಜಿಲ್ಲೆ ಮಾತ್ರ ತುಂಬಾ ವಿಶೇಷ. ಇಲ್ಲಿ ಪ್ರಧಾನ ಮಂತ್ರಿ ಆವಾಸ್​ ಯೋಜನೆಯಲ್ಲಿ ಮನೆ ನಿರ್ಮಿಸಲಾಗುತ್ತದೆ. ಆ ಮನೆಗಳಿಗೆ ಅದೇ ಮನೆಯ ಹೆಣ್ಣು ಮಕ್ಕಳ ಹೆಸರನ್ನೇ ಇಡಲಾಗುತ್ತಿದೆ.

    ಇಂತದ್ದೊಂದು ಅದ್ಭುತ ಪ್ರಯತ್ನಕ್ಕೆ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಮಿಶಾ ಸಿಂಗ್​ ಕೈ ಹಾಕಿದ್ದಾರೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಆವಾಸ್​ ಯೋಜನೆಯಲ್ಲಿ ಸಾವಿರಾರು ಮನೆಗಳನ್ನು ನಿರ್ಮಿಸಲಾಗಿದೆ. ಎಲ್ಲ ಗ್ರಾಮಗಳ ಹೆಣ್ಣು ಮಕ್ಕಳ ಗುರುತಿಸಿಕೊಳ್ಳುವಿಕೆಯನ್ನು ಹೆಚ್ಚಿಸಬೇಕೆಂಬ ಕಾರಣದಿಂದ ಆ ಮನೆಗಳಿಗೆ ಅದೇ ಮನೆಯ ಹೆಣ್ಣು ಮಕ್ಕಳ ಹೆಸರಿಡುವ ಉಪಾಯ ಮಾಡಲಾಗಿದೆ. ಈ ಕುರಿತಾಗಿ ಮನೆ ಪಡೆದವರಿಗೆ ಹೇಳಲಾಗಿದೆ. ಪ್ರತಿಯೊಬ್ಬ ಫಲಾನುಭವಿಯೂ ಖುಷಿಯಿಂದ ಒಪ್ಪಿದ್ದು, ತಮ್ಮ ಮನೆಯ ಮುಂದಿನ ಗೋಡೆಯ ಮೇಲೆ ಹೆಣ್ಣು ಮಗಳ ಹೆಸರನ್ನು ಬರೆದು ಭವನ ಎಂದು ಸೇರಿಸಿದ್ದಾರೆ. ಈಗ ಕಲಾಪಿಪಾಲ್, ಮೋಹನ್ ಬರೋಡಿಯಾ ಮತ್ತು ಶುಜಲ್ಪುರ ಗ್ರಾಮ ಪಂಚಾಯಿತಿಗಳ ಹಲವಾರು ಮನೆಗಳು ರೋಷಿನಿ ಭವನ, ಆಯುಷಿ ಭವನ, ರೇಖಾ ಭವನ ಹೀಗೆ ಹಲವಾರು ಹೆಸರನ್ನು ಪಡೆದುಕೊಂಡಿವೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಚಿನ್ನದ ಬೆಟ್ಟ ಪತ್ತೆ! ಬಂಗಾರಕ್ಕಾಗಿ ಮುಗಿಬಿದ್ದ ಜನರು

    ನಟಿ ಪ್ರಿಯಾಂಕಾರ ಇತ್ತೀಚಿನ ಸಾಹಸ ಏನು ಗೊತ್ತೆ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts