More

    ಚಿನ್ನದ ಬೆಟ್ಟ ಪತ್ತೆ! ಬಂಗಾರಕ್ಕಾಗಿ ಮುಗಿಬಿದ್ದ ಜನರು

    ಕಿನ್ಶಾಸ: ಚಿನ್ನವೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದೊಂದು ರೀತಿಯ ಆರ್ಥಿಕ ಸುರಕ್ಷತೆ ಎನ್ನುತ್ತಾರೆ ಜನರು. ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ 50 ಸಾವಿರ ಆಸು ಪಾಸಿಗೆ ಬಂದು ನಿಂತಿದೆ. ಹೀಗಿರುವಾಗ ಚಿನ್ನದ ಬೆಟ್ಟವೇ ನಿಮಗೆ ಸಿಕ್ಕಿಬಿಟ್ಟರೆ? ಹೌದು ಇದು ಕೇಳಲು ಆಶ್ಚರ್ಯವೆನಿಸಿದರೂ ಸತ್ಯ.

    ಆಫ್ರಿಕಾದ ಕಾಂಗೋ ರಾಜ್ಯದ ಲುಹಿಹಿ ಹೆಸರಿನ ಹಳ್ಳಿಯಲ್ಲಿ ಇಂತದ್ದೊಂದು ವಿಚಿತ್ರ ಬೆಟ್ಟ ಪತ್ತೆಯಾಗಿದೆ. ಮೇಲ್ನೋಟಕ್ಕೆ ಮಣ್ಣಿನ ಬೆಟ್ಟವೇ ಆಗಿದ್ದರೂ ಇದರಲ್ಲಿ ಚಿನ್ನ ಅಂಶ ಅತಿ ಹೆಚ್ಚಿದೆಯಂತೆ. ಈ ಸತ್ಯ ಹಿರಬೀಳುತ್ತಿದ್ದಂತೆ, ಬೆಟ್ಟದ ಬಳಿ ಜನ ಸಾಗರವೇ ಸೇರಿದೆ. ಹಾರೆ, ಗುದ್ದಲಿ ತಂದು ಅಲ್ಲಿದ್ದ ಮಣ್ಣನ್ನು ಜನರು ತೆಗೆದುಕೊಂಡು ಹೋಗುತ್ತಿದ್ದಾರೆ. ಅದನ್ನು ಮನೆಯಲ್ಲಿ ತೊಳೆದು ಅದರಲ್ಲಿನ ಚಿನ್ನವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

    ರಾಜ್ಯದ ವಿವಿಧ ಭಾಗಗಳಿಂದ ಜನರು ಬಂಗಾರಕ್ಕಾಗಿ ಬೆಟ್ಟದ ಬಳಿ ಬಂದಿದ್ದಾರಂತೆ. ಈ ವಿಚಾರ ಅರಿವಿಗೆ ಬರುತ್ತಿದ್ದಂತೆ ಸರ್ಕಾರ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಆ ಭಾಗದಲ್ಲಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಯಾರೊಬ್ಬರೂ ಹಾರೆ ಗುದ್ದಲಿಯಿಂದ ಮಣ್ಣು ಅಗೆಯದಿರುವಂತೆ ನೋಡಿಕೊಳ್ಳಲಾಗುತ್ತಿದೆ. ಆ ಬೆಟ್ಟದಲ್ಲಿ ಪತ್ತೆಯಾಗಿದ್ದು ನಿಜಕ್ಕೂ ಚಿನ್ನವೇ, ಚಿನ್ನವೇ ಆಗಿದ್ದರೆ ಆ ಪ್ರಮಾಣದ ಬಂಗಾರ ಅಲ್ಲಿ ಬಂದಿದ್ದು ಹೇಗೆ ಎನ್ನುವುದರ ಬಗ್ಗೆ ತನಿಖೆಯಿಂದ ತಿಳಿದುಬರಬೇಕಿದೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಬಿಜೆಪಿ ಸೇರಿದ ಬಾಲಿವುಡ್ ಹೀರೋ ಮಿಥುನ್ ಚಕ್ರವರ್ತಿ: ಬಂಗಾಳ ಬಿಜೆಪಿಗೆ ಆನೆಬಲ

    ಪಾಕಿಸ್ತಾನದಲ್ಲಿ ಒಂದೇ ಕುಟುಂಬದ ಐವರು ಹಿಂದುಗಳ ಹತ್ಯೆ: ಬೆಚ್ಚಿಬಿದ್ದ ಸ್ಥಳೀಯ ನಿವಾಸಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts