More

    ಅತಿಯಾಗಿ ಫೋನ್ ಬಳಸಬೇಡ ಎಂದಿದ್ದಕ್ಕೆ ಜಲಪಾತಕ್ಕೆ ಜಿಗಿದ ಯುವತಿ!

    ಛತ್ತೀಸ್​​ಗಢ: ಅತಿಯಾಗಿ ಸ್ಮಾರ್ಟ್​ಫೋನ್​ ಬಳಸುತ್ತಿದ್ದ ಮಗಳಿಗೆ ಪೋಷಕರು ಫೋನ್​ ಬಳಕೆ ಮಾಡದಂತೆ ನಿಂದಿಸಿ, ಒತ್ತಾಯ ಹೇರಿದ್ದಕ್ಕೆ ಮನನೊಂದ ಯುವತಿ, ಆತ್ಮಹತ್ಯೆ ಮಾಡಿಕೊಳ್ಳಲು ಜಲಪಾತಕ್ಕೆ ಜಿಗಿದಿರುವ ಘಟನೆ ಛತ್ತೀಸಗಢದ ಸುಕ್ಮಾದಲ್ಲಿ ವರದಿಯಾಗಿದೆ.

    ಇದನ್ನೂ ಓದಿ: ವಿರೋಧ ಪಕ್ಷಗಳಿಂದ I.N.D.I.A. ಹೆಸರಿನ ಬಳಕೆ: ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬಿಜೆಪಿ ನಾಯಕ

    21ರ ಹರೆಯದ ಯುವತಿಯೊಬ್ಬಳು ತನ್ನ ಪೋಷಕರು ಅತಿಯಾದ ಮೊಬೈಲ್ ಫೋನ್ ಬಳಕೆಗೆ ನಿಂದಿಸಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಯುವತಿಯನ್ನು ಸರಸ್ವತಿ ಮೌರ್ಯ ಎಂದು ಗುರುತಿಸಲಾಗಿದ್ದು, ‘ಮಿನಿ ನಯಾಗರಾ’ ಎಂದೂ ಕರೆಯಲ್ಪಡುವ ಚಿತ್ರಕೋಟೆ ಜಲಪಾತಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಜಿಗಿದಿದ್ದಾಳೆ.

    ಕೂಡಲೇ ತನ್ನ ತಪ್ಪು ಅರಿವಾಗಿ, ಪ್ರಾಣವನ್ನು ಉಳಿಸಿಕೊಳ್ಳಬೇಕು ಎಂದು ನೀರಿಗೆ ಬಿದ್ದ ಬಳಿಕ ಈಜುವ ಪ್ರಯತ್ನ ಮಾಡಿದ್ದಾಳೆ. ಶೀಘ್ರವೇ ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿ ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಚಿತ್ರಕೂಟ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ತಮೇಶ್ವರ್ ಚೌಹಾಣ್ ಹೇಳಿದ್ದಾರೆ,(ಏಜೆನ್ಸೀಸ್).

    ಟಿಕೆಟ್ ದರ ಏರಿಕೆ ಕುರಿತು ಸ್ಪಷ್ಟನೆ ನೀಡಿದ ‘ಬ್ರೋ’ ಚಿತ್ರದ ನಿರ್ಮಾಪಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts