More

    ಛತ್ತೀಸ್​ಗಢ ಚುನಾವಣೆ; ಕಾಂಗ್ರೆಸ್​ ಅಧಿಕಾರಕ್ಕೆ ಬಂದ ದಿನವೇ ಜಾತಿ ಗಣತಿಗೆ ಆದೇಶ: ರಾಹುಲ್ ಗಾಂಧಿ

    ರಾಯ್​ಪುರ: ಮುಂದಿನ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಛತ್ತೀಸ್​ಗಢದಲ್ಲಿ ತಮ್ಮ​ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಜನತೆಗೆ 10 ಲಕ್ಷ ರೂಪಾಯಿ ವರೆಗಿನ ಉಚಿತ ಚಿಕಿತ್ಸಾ ಸೌಲಭ್ಯವನ್ನು ಸರ್ಕಾರದ ವತಿಯಿಂದ ಒದಗಿಸಲಾಗುವುದು ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಘೋಷಿಸಿದ್ದಾರೆ.

    ಛತ್ತೀಸ್​ಗಢದ ರಾಜನಂದಗಾಂವ್​ನಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕೃಷಿ ಭೂಮಿ ರಹಿತ ಕಾರ್ಮಿಕರಿಗೆ ವರ್ಷಕ್ಕೆ 10 ಸಾವಿರ ರೂಪಾಯಿ ಹಣವನ್ನು ಸರ್ಕಾರದಿಂದ ನೀಡಲಾಗುವುದು ಎಂದು ಘೋಷಿಸಿದ್ದಾರೆ.

    ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಜಅತಿ ಗಣತಿ ನಡೆಸಲಾಗುವುದು. ರಾಜ್ಯದ ಜನತೆಗೆ 10 ಲಕ್ಷ ರೂಪಾಯಿ ವರೆಗಿನ ಉಚಿತ ಚಿಕಿತ್ಸಾ ಸೌಲಭ್ಯವನ್ನು ಸರ್ಕಾರದ ವತಿಯಿಂದ ಒದಗಿಸಲಾಗುವುದು. ಕಾಂಗ್ರೆಸ್​ ಸರ್ಕಾರ ಬಡವರು, ದಲಿತರು, ರೈತರು, ಕಾರ್ಮಿಕರು, ಹಿಂದುಳಿದ ವರ್ಗಗಳು ಹಾಗೂ ಆದಿವಾಸಿ ಜನತೆಯೆ ಧ್ವನಿಯನ್ನು ಕೇಳುತ್ತದೆ.

    ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರುವುದು ಎರಡು ಪಕ್ಷಗಳ ನಡುವೆ; ಹೊಸ ಸಂಚಲನ ಸೃಷ್ಟಿಸಿದ ದಿಗ್ವಿಜಯ್​ ಸಿಂಗ್ ಹೇಳಿಕೆ

    ನೀವು ಕಾಂಗ್ರೆಸ್​ ಬಗ್ಗೆ ಮಾತನಾಡಬೇಕಿಲ್ಲ. ನಿಮ್ಮ ಹೃದಯದ ಮಾತು ನಮಗೆ ಕೇಳಿಸುತ್ತದೆ. ನಾವು ಭೇಟಿ ನೀಡಿದ ಪ್ರತಿಯೊಂದು ಸ್ಥಳದಲ್ಲೂ ಜನ ಕಾಂಗ್ರೆಸ್​ ರೈತರು ಹಾಗೂ ಬಡವರಿಗಾಗಿ ಜಾರಿ ಮಾಡಿದ ಯೋಜನೆಗಳನ್ನು ಈಗಲೂ ಸ್ಮರಿಸುತ್ತಾರೆ. ಅದೇ ರೀತಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಮೊದಲ ದಿನವೇ ಜಾತಿ ಗಣತಿಗೆ ಆದೇಶಿಸುತ್ತದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಛತ್ತೀಸ್​ಗಢದಲ್ಲಿ ಭರವಸೆ ನೀಡಿದ್ದಾರೆ.

    ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 90 ಸದಸ್ಯಬಲದ ಛತ್ತೀಸ್​ಗಢ ವಿಧಾನಸಭೆಗೆ ನವೆಂಬರ್ 07 ಹಾಗೂ 17ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts