More

    ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರುವುದು ಎರಡು ಪಕ್ಷಗಳ ನಡುವೆ; ಹೊಸ ಸಂಚಲನ ಸೃಷ್ಟಿಸಿದ ದಿಗ್ವಿಜಯ್​ ಸಿಂಗ್ ಹೇಳಿಕೆ

    ಭೋಪಾಲ್: ಮುಂದಿನ ಕೆಲವು ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಹಣಾಹಣಿ ಏರ್ಪಟ್ಟಿರುವುದು ಎರಡು ಪಕ್ಷಗಳ ನಡುವೆ ಉಳಿದವರ ಬಗ್ಗೆ ಜನರು ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹಿರಿಯ ಕಾಂಗ್ರೆಸ್​ ನಾಯಕ ದಿಗ್ವಿಜಯ್​ ಸಿಂಗ್ ಹೇಳಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅವರು, ಬಿಜೆಪಿ ಹಾಗೂ ಕಾಂಗ್ರೆಸ್​ ಹೊರತುಪಡಿಸಿದರೆ ಜನರು ಬೇರೆ ಪಕ್ಷಗಳನ್ನು ನಂಬುವ ಅಗತ್ಯವಿಲ್ಲ ಎಂದು ಹೇಳಿರುವ ವಿಡಿಯೋ ಹೊಸ ಚರ್ಚೆ ಒಂದನ್ನು ಹುಟ್ಟುಹಾಕಿದೆ.

    ಸಣ್ಣಪುಟ್ಟ ಪಕ್ಷಗಳಿಗೆ ಮತ ಹಾಕಬೇಡಿ

    ಮಧ್ಯಪ್ರದೇಶದಲ್ಲಿ ಎರಡು ಪಕ್ಷಗಳಿವೆ. ಒಂದು ಬಿಜೆಪಿ ಮತ್ತೊಂದು ಕಾಂಗ್ರೆಸ್​. ಈ ಎರಡರಲ್ಲಿ ಯಾವುದಾದರು ಒಂದು ಪಕ್ಷ ಸರ್ಕಾರವನ್ನು ರಚಿಸಲಿದೆ. ಆದ್ದರಿಂದ ರಾಜ್ಯದ ಜನತೆ ಇತರರ ಬಲೆಗೆ ಬೀಳದಂತೆ ಎಚ್ಚರವಾಗಿರಬೇಕು ಎಂದು ವಿನಂತಿಸಿಕೊಳ್ಳುತ್ತೇನೆ.

    ಬಿಜೆಪಿಗೆ ಹಣದ ಬಲವಿದ್ದರೆ ಕಾಂಗ್ರೆಸ್​ಗೆ ಜನರ ಬೆಂಬಲವಿದೆ. ನಾವೆಲ್ಲರೂ ಈ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡುವ ಮೂಲಕ ಜನಬಲದ ಮುಂದೆ ಹಣ ಏನು ಮಾಡುವುದಿಲ್ಲ ಎಂದು ಬಿಜೆಪಿಗೆ ತೋರಿಸಬೇಕಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್​ ಗೆದ್ದು ಸರ್ಕಾರ ರಚಿಸುವುದು ಪಕ್ಕಾ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: VIDEO| ಹೋಟೆಲ್​ ಮೇಲೆ ಗುಂಡಿನ ದಾಳಿ ನಡೆಸಿ ಹಣಕ್ಕೆ ಬೇಡಿಕೆ; ಬಿಜೆಪಿ-ಕಾಂಗ್ರೆಸ್​ ವಾಗ್ದಾಳಿ

    ಕಳೆದ 20 ವರ್ಷಗಳಿಂದ ಬಿಜೆಪಿ ದುರಾಡಳಿತವನ್ನು ಕಂಡು ಬೇಸತ್ತಿರುವ ರಾಜ್ಯದ ಜನತೆ ಈ ಭಾರಿ ಬದಲಾವಣೆಯನ್ನು ಬಯಸಿದ್ದಾರೆ. ಸೋಲುವ ಹತಾಶೆಯಲ್ಲಿರುವ ಬಿಜೆಪಿ ತನ್ನ ಹಣಬಲದ ಮೂಲಕ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರ ದಾರಿ ತಪ್ಪಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್​ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.

    ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು

    ಇತ್ತ ಹಿರಿಯ ಕಾಂಗ್ರೆಸ್​ ನಾಯಕ ದಿಗ್ವಿಜಯ್​ ಸಿಂಗ್​ ಹೇಳಿಕೆ ವೈರಲ್​ ಆದ ಬೆನ್ನಲ್ಲೇ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆ ಒಂದನ್ನು ಹುಟ್ಟು ಹಾಕಿದ್ದು, ಇಂಡಿಯಾ ಮೈತ್ರಿಕೂಟದಲ್ಲಿ ಒಡಕು ಮೂಡಿದಂತೆ ಕಾಣುತ್ತಿದೆ. ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಹಾಗೂ ಆಮ್​ ಆದ್ಮಿ ಪಕ್ಷ ಸ್ಪರ್ಧಿಸುತ್ತಿದ್ದು, ಟಿಕೆಟ್​ ಹಂಚಿಕೆ ವಿಚಾರವಾಗಿ ಕಾಂಗ್ರೆಸ್​ ವಿರುದ್ಧ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು.

    ಇನ್ನು ಹಿರಿಯ ಕಾಂಗ್ರೆಸ್​ ನಾಯಕ ದಿಗ್ವಿಜಯ್​ ಸಿಂಗ್ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ತಲುಪಲಿದೆ ಎಂದು ಕಾದು ನೋಡಬೇಕಿದೆ. ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts