More

    ಕರೊನಾ ಲಸಿಕೆ ನೀಡುವುದಾಗಿ ನಂಬಿಸಿ ಹುಡುಗಿಯನ್ನು ಕರೆದೊಯ್ದ ಯುವಕರಿಂದ ಗ್ಯಾಂಗ್​ರೇಪ್​

    ಪಟನಾ: ಕರೊನಾ ಲಸಿಕೆ ನೀಡುವುದಾಗಿ ನಂಬಿಸಿ ಹುಡುಗಿಯೊಬ್ಬಳನ್ನು ಕರೆದೊಯ್ದ ದುಷ್ಕರ್ಮಿಗಳು ಆಕೆಯನ್ನು ಹಗ್ಗದಿಂದ ಕಟ್ಟಿಹಾಕಿ ಗ್ಯಾಂಗ್​ರೇಪ್​ ಮಾಡಿರುವ ಘಟನೆ ಬಿಹಾರ ರಾಜಧಾನಿ ಪಟನಾದಲ್ಲಿ ನಡೆದಿದೆ.

    ಆರೋಪಿಗಳನ್ನು ರಾಕಿ ಮತ್ತು ಮೊಂಟು ಎಂದು ಗುರುತಿಸಲಾಗಿದೆ. ಕೋವಿಡ್​ ಹೆಚ್ಚಾಗಿರುವ ಪಟನಾದ ಆರೋಗ್ಯ ಕೇಂದ್ರದಲ್ಲಿ ಹುಡುಗಿಯನ್ನು ಭೇಟಿಯಾದ ಆರೋಪಿಗಳು ಲಸಿಕೆ ನೀಡುವುದಾಗಿ ಆಕೆಯನ್ನು ನಂಬಿಸಿ ನಿರ್ಜನ ಮನೆಯೊಂದಕ್ಕೆ ಕರೆದೊಯ್ದು ಗ್ಯಾಂಗ್​ರೇಪ್​ ಮಾಡಿದ್ದಾರೆ.

    ಹ್ಯಾಂಡ್​ ಕರ್ಚೀಫ್​ನಿಂದ ಬಾಯಿ ಮುಚ್ಚಿ, ತನ್ನ ಕೈ-ಕಾಲುಗಳನ್ನು ಕಟ್ಟಿಹಾಕಿದ್ದರು ಎಂದು ಸಂತ್ರಸ್ತೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಎಲ್ಲವೂ ಮುಗಿದ ಬಳಿಕ ಆಕೆಯನ್ನು ಮನೆಗೆ ಬಿಟ್ಟು ಕಳುಹಿಸಿದ್ದಾರೆ. ಮನೆಗ ಬಂದ ಬಳಿಕ ಆಕೆ ನಡೆದ ಘಟನೆಯನ್ನು ಪಾಲಕರ ಮುಂದೆ ವಿವರಿಸಿದ್ದಾಳೆ. ಬಳಿಕ ಸ್ಥಳೀಯ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

    ಸಂತ್ರಸ್ತೆಯ ಸಹಾಯದಿಂದಲೇ ಆರೋಪಿಗಳ ಮನೆ ಮೇಲೆ ಬುಧವಾರ ಬೆಳಗ್ಗೆ ದಾಳಿ ಮಾಡಿ ಇಬ್ಬರನ್ನು ಬಂಧಿಸಲಾಗಿದೆ. ಸಂತ್ರಸ್ತೆ 18 ವರ್ಷಕ್ಕಿಂತ ಕಿರಿಯಳು ಎನ್ನಲಾಗಿದೆ. ಸದ್ಯ ಬಂಧನವಾಗಿರುವ ಆರೋಪಿಯ ವಿಚಾರಣೆ ನಡೆಯುತ್ತಿದೆ.

    ಕೋವಿಡ್​ ಪ್ರಕರಣಗಳು ಹೆಚ್ಚಾಗಿರುವ ಭಾರತೀಯ ನಗರಗಳಲ್ಲಿ ಪಟನಾ ಕೂಡ ಒಂದು. ದಿನವೊಂದಕ್ಕೆ 2 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ. (ಏಜೆನ್ಸೀಸ್​)

    ತುರ್ತು ಕರೊನಾ ಪರಿಹಾರ ಸಾಮಗ್ರಿಗಳ ಮೊದಲನೆ ಕಂತನ್ನು ಭಾರತಕ್ಕೆ ರವಾನಿಸಿದ ಅಮೆರಿಕ

    ಇಸ್ರೇಲ್​ನಲ್ಲಿ ಕಾಲ್ತುಳಿತಕ್ಕೆ 28 ಮಂದಿ ದುರಂತ ಸಾವು: 50ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರ

    18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ನಾಳೆಯಿಂದ ಆಸ್ಪತ್ರೆಗೆ ಬರಬೇಡಿ: ಸಚಿವ ಡಾ.ಸುಧಾಕರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts