More

    ನಕಲಿ ಅಪಹರಣ | ಪೋಷಕರಿಗೆ ಕೋಟಿ ರೂ. ವಂಚಿಸಲು ಯತ್ನಿಸಿದ ಬಾಲಕಿ!

    ಕೋಲ್ಕತ್ತಾ: 16 ವರ್ಷದ ಹುಡುಗಿಯೊರ್ವಳು ನಕಲಿ ಅಪಹರಣದ ನಾಟಕವಾಡಿ, ತನ್ನ ತಂದೆಗೆ 1 ಕೋಟಿ ರೂ.ಬೇಡಿಕೆಯಿಟ್ಟು ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸಿರುವ ಘಟನೆ ಕೋಲ್ಕತ್ತಾದ ಬಾನ್ಸ್‌ದ್ರೋನಿ ಪ್ರದೇಶದಲ್ಲಿ ನಡೆದಿದೆ.

    ಘಟನೆ ವಿವರ:
    ಪಶ್ಚಿಮ ಬಂಗಾಳದ ಹೈಯರ್ ಸೆಕೆಂಡರಿ ಶಿಕ್ಷಣ ಮಂಡಳಿಯು ಶುಕ್ರವಾರ 10ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿತ್ತು. ದಕ್ಷಿಣ ಕೋಲ್ಕತ್ತಾದ ಬಾನ್ಸ್‌ದ್ರೋನಿ ಪ್ರದೇಶದ ನಿವಾಸಿಯಾಗಿರುವ ಬಾಲಕಿ ಕೂಡ ಪರೀಕ್ಷೆಗೆ ಹಾಜರಾಗಿದ್ದ ಹಿನ್ನೆಲೆ, ಅವಳು ತನ್ನ 6 ವರ್ಷದ ಸಹೋದರಿಯೊಂದಿಗೆ ತನ್ನ ಮಾರ್ಕ್‌ಶೀಟ್ ಅನ್ನು ಡೌನ್‌ಲೋಡ್ ಮಾಡಲು ಸೈಬರ್ ಕೆಫೆಗೆ ತೆರೆಳಿದ್ದಳು.

    ಎಷ್ಟೋ ಸಮಯದವರೆಗೆ ಆಕೆ ಹಿಂತಿರುಗದ ಕಾರಣ ಆಕೆಯ ಪೋಷಕರು ಫೋನ್ ಮೂಲಕ ಕರೆ ಮಾಡಲು ಪ್ರಯತ್ನಿಸಿದರೂ ಆಕೆ ಸಂಪರ್ಕಕ್ಕೆ ಸಿಗಲಿಲ್ಲ. ಆಗ ಪೋಷಕರು ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದಾಗ ಸ್ಥಳೀಯ ಮೆಟ್ರೋ ನಿಲ್ದಾಣದ ಬಳಿ ಬಾಲಕಿಯ ಸ್ಕೂಟಿ ಪತ್ತೆಯಾಗಿದೆ.

    ಇದನ್ನೂ ಓದಿ: ತುಮಕೂರು ನಗರಕ್ಕೆ ವಾರಕ್ಕೊಮ್ಮೆ ನೀರು

    ಈ ಮಧ್ಯೆ, ನಿಮ್ಮ ಮಕ್ಕಳನ್ನು ಬಿಡುಗಡೆ ಮಾಡಲು 1 ಕೋಟಿ ರೂ.ಹಣದೊಂದಿಗೆ ನೇಪಾಳಗಂಜ್ ಪ್ರದೇಶಕ್ಕೆ ಬರುವಂತೆ ಪೋಷಕರಿಗೆ ಎಸ್ಎಂಎಸ್ ಕೂಡ ಬಂದಿತ್ತು. ತಕ್ಷಣವೇ ಎಚ್ಚೆತ್ತ ಪೊಲೀಸರು ಸ್ಥಳೀಯ ಪೊಲೀಸರೊಂದಿಗೆ ಬಾಲಕಿಯರ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಕೃಷ್ಣನಗರ ಜಿಲ್ಲಾ ಪೊಲೀಸರು ನಾಡಿಯಾ ಜಿಲ್ಲೆಯ ಡಿವೈನ್ ನರ್ಸಿಂಗ್ ಹೋಮ್ ಮುಂದೆ ಇಬ್ಬರೂ ಹುಡುಗಿಯರನ್ನು ಗುರುತಿಸಿ ಅವರನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ.

    ಪೋಲಿಸರು ಬಾಲಕಿಯರನ್ನು ಸಮಾಧಾನಗೊಳಿಸಿ ವಿಚಾರಿಸಿದಾಗ ಬಾಲಕಿಯು ತಾನು 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವುದಾಗಿ ಪೋಷಕರಿಗೆ ಭರವಸೆ ನೀಡಿದ್ದೆ. ಆದರೆ ತನಗೆ ಕೇವಲ 31% ಅಂಕ ಬಂದಿರುವುದರಿಂದ ಹೀಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts