More

    ಕೆಎಸ್‌ಆರ್‌ಟಿಸಿ ಬುಕ್ಕಿಂಗ್ ಟಿಕೆಟ್ ರದ್ದು ನೆಪದಲ್ಲಿ 53 ಸಾವಿರ ರೂ. ವಂಚನೆ


    ಬೆಂಗಳೂರು : ಕೆಎಸ್‌ಆರ್‌ಟಿಸಿ ಬುಕ್ಕಿಂಗ್ ಟಿಕೆಟ್ ರದ್ದು ಮಾಡಲು ವೆಬ್‌ಸೈಟ್‌ನಲ್ಲಿ ಸಿಕ್ಕ ಮೊಬೈಲ್ ನಂಬರ್‌ಗೆ ಕರೆ ಮಾಡಿದ ಪ್ರಯಾಣಿಕ ಬ್ಯಾಂಕ್ ಖಾತೆಗೆ ಸೈಬರ್ ವಂಚಕರು 53 ಸಾವಿರ ರೂ. ಕನ್ನ ಹಾಕಿದ್ದಾರೆ.

    ಚಿಕ್ಕಕಲ್ಲಸಂದ್ರದ ಎಂ.ಜಿ.ಶ್ಯಾಮ್‌ಸುಂದರ್, ಹಣ ಕಳೆದುಕೊಂಡವರು. ಇವರು ಕೊಟ್ಟ ದೂರಿನ ಮೇರೆಗೆ ಸುಬ್ರಮಣ್ಯಪುರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

    ಜುಲೈ 19ರಂದು ಶ್ಯಾಮ್‌ಸುಂದರ್, ಕೆಎಸ್‌ಆರ್‌ಟಿಸಿ ಬಸ್ ಬುಕ್ಕಿಂಗ್ ಟಿಕೆಟ್ ರದ್ದು ಮಾಡುವ ಉದ್ದೇಶದಿಂದ ವೆಬ್‌ಸೈಟ್‌ಗೆ ಹೋಗಿ ಅದರಲ್ಲಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದಾರೆ. ಆತ ನಿಮ್ಮ ಕ್ರೆಡಿಟ್ ಕಾರ್ಡ್ ನಂಬರ್ ಹೇಳಿ ಎಂದಾಗ ಅನುಮಾನ ಬಂದು ಶ್ಯಾಮ್‌ಸುಂದರ್, ನಂಬರ್ ಯಾಕೇ ಹೇಳ ಬೇಕೆಂದು ಪ್ರಶ್ನಿಸಿದ್ದಾರೆ.

    ಅಷ್ಟರಲ್ಲಿ ಮೊಬೈಲ್‌ಗೆ ಒಟಿಪಿ ನಂಬರ್ ಬಂದಿದ್ದು, ಕೆಲವೇ ಸೆಕೆಂಡ್‌ಗಳಲ್ಲಿ ಬ್ಯಾಂಕ್ ಖಾತೆಯಿಂದ 53 ಸಾವಿರ ರೂ. ಕಡಿತವಾಗಿದೆ. ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಶ್ಯಾಮ್‌ಸುಂದರ್, ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts