More

    VIDEO | ಬಿಕಿನಿ ಧರಿಸಿ ಚಿರತೆಯ ಜೊತೆ ಕ್ಯಾಟ್​​ ವಾಕ್​ ಮಾಡಿದ ಮಹಿಳೆ!

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ರೀಲ್ಸ್​​ ವಿಡಿಯೋಗಳತ್ತ ಇಂದಿನ ಯುವ ಪೀಳಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಖುಷಿ ಹಾಗೂ ಬೇಸರ ಎಲ್ಲಾ ಸಂಗತಿಗಳನ್ನು ವಿಡಿಯೋ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಶೇರ್​​ ಮಾಡುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ಹಂಚಿಕೊಂಡಿರುವ ವಿಡಿಯೋ ಹುಬ್ಬೇರುವಂತೆ ಮಾಡಿದೆ.

    ಯುವತಿಯೊಬ್ಬಳು ಬಿಕಿನಿ ಧರಿಸಿ ಚಿರತೆಯ ಜೊತೆ ಪಂಜರದೊಳಗೆ ಹಾಯಾಗಿ ಸಮಯ ಕಳೆಯುತ್ತಿದ್ದು, ಈ ವಿಡಿಯೋ ಎಲ್ಲೆಡೆ ಭಾರೀ ವೈರಲ್​ ಆಗಿದೆ.

    ಇದನ್ನೂ ಓದಿ:  ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವುದಕ್ಕೆ ಈ ಫೋಟೋ ಸೂಕ್ತ ಉದಾಹರಣೆ!

    ವಿಡಿಯೋದಲ್ಲಿ ಏನಿದೆ?: ವಿಡಿಯೋವನ್ನು ಶೇರ್ ಮಾಡಿರುವ ಸಿದ್ಧಿಕಾ, ಆಕೆ ಚಿರತೆಯ ಜೊತೆ ಆಟವಾಡುತ್ತಿರುವುದನ್ನು ಕಾಣಬಹುದು. ಸ್ಲಿಟ್ ಸ್ಕರ್ಟ್ ಮತ್ತು ಬಿಕಿನಿ ಟಾಪ್ ಧರಿಸಿ ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿರುವ ಯುವತಿ ಚಿರತೆ ಜೊತೆಗೆ ಆಟ ವಾಡುತ್ತಾ ಸಮಯ ಕಳೆದಿದ್ದಾಳೆ. ಕ್ಯಾಟ್​​​ ವಾಕ್​ ಕೂಡಾ ಮಾಡಿದ್ದಾಳೆ.

    ಇದನ್ನೂ ಓದಿ: ಯುಪಿ ಸಿಎಂ ಯೋಗಿ ಆದಿತ್ಯನಾಥ್​​ಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿ ಅರೆಸ್ಟ್!

    ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಾಕಷ್ಟು ಸೋಶಿಯಲ್​ ಮೀಡಿಯಾ ಬಳಕೆದಾರರು ಆಕೆಯ ಧೈರ್ಯಕ್ಕೆ ಮೆಚ್ಚಿದ್ದಾರೆ. ಈ ವಿಡಿಯೋವನ್ನು ಸ್ವತಃ ಪಂಜರದೊಳಗಿರುವ ಯುವತಿ ಸಿದ್ಧಿಕಾ ಶರ್ಮಾ ಇನ್​ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೈರಲ್​ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಆಕೆಯ ಬ್ಯೂಟಿ ನೋಡಿ ವಾವ್​​, ಸೂಪರ್​​​ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts