More

    ಯುಪಿ ಸಿಎಂ ಯೋಗಿ ಆದಿತ್ಯನಾಥ್​​ಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿ ಅರೆಸ್ಟ್!

    ಉತ್ತರಪ್ರದೇಶ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ಜೀವ ಬೆದರಿಕೆ ಬಂದಿದ್ದು, 112 ನಂಬರ್‌ಗೆ ಸಂದೇಶ ಕಳುಹಿಸುವ ಮೂಲಕ ಈ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಕಾನ್ಪುರ ಪೊಲೀಸರು ಬಂಧಿಸಿದ್ದಾರೆ.

    ಬಾಬು ಪೂರ್ವಾ ಪ್ರದೇಶದ ಅಮೀನ್ ಎಂಬ ಯುವಕನನ್ನು ಕಾನ್ಪುರ ಪೊಲೀಸರು ಬಂಧಿಸಿದ್ದಾರೆ. 112ಕ್ಕೆ ಸಂದೇಶ ಕಳುಹಿಸುವ ಮೂಲಕ ಆರೋಪಿಗಳು ಸಿಎಂ ಯೋಗಿಗೆ ಕೊಲೆ ಬೆದರಿಕೆ ಹಾಕಿದ್ದು, ಬಳಿಕ ಲಖನೌ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

    ಯುವಕ ತನ್ನ ಗೆಳತಿಯ ತಂದೆಯನ್ನು ಕೆಲವು ಕಾರಣಗಳಿಂದ ಆರೋಪಿಸಬೇಕೆಂದು ಬಯಸಿದ್ದನು. ಅದಕ್ಕಾಗಿ ಅವನು ಎರಡು ದಿನಗಳ ಹಿಂದೆ ಗೆಳತಿಯ ತಂದೆಯ ಮೊಬೈಲ್ ಅನ್ನು ಕದ್ದು ಅದೇ ಮೊಬೈಲ್ ಫೋನ್‌ನಿಂದ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ. ತನಿಖೆಯ ಆಧಾರದ ಮೇಲೆ ಕಾನ್ಪುರ ಪೊಲೀಸರು ಮೊಬೈಲ್ ಫೋನ್ ಮಾಲೀಕರನ್ನು ವಿಚಾರಣೆಗೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಪ್ರಕಾಶ್ ಸಿಂಗ್ ಬಾದಲ್ ನಿಧನ; ಎರಡು ದಿನ ರಾಷ್ಟ್ರೀಯ ಶೋಕಾಚರಣೆ…
    ಎರಡು ದಿನಗಳ ಹಿಂದೆ ತನ್ನ ಫೋನ್ ನಾಪತ್ತೆಯಾಗಿದೆ ಎಂದು ಮೊಬೈಲ್ ಮಾಲೀಕರು ಪೊಲೀಸರಿಗೆ ತಿಳಿಸಿದ್ದಾರೆ. ಕಾನ್ಪುರ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ, ಗೆಳತಿಯ ತಂದೆ ಇವರ ಸಂಬಂಧಕ್ಕೆ ಅಡ್ಡಿ ಎಂದು ಅಸಮಧಾನಗೊಂಡಿದ್ದರಿಂದ ಗೆಳತಿಯ ತಂದೆಯನ್ನು ಸಿಲುಕಿಸಲು ಈ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ಮಾನವೀಯತೆ ಮರೆತ ಸುಡಾನ್ ನಾಗರಿಕರು: ಮನೆ ಖಾಲಿ ಮಾಡಲು ಒತ್ತಾಯ, ಕನ್ನಡಿಗರು ಅತಂತ್ರ
    ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 506 ಮತ್ತು 507 ಮತ್ತು ಐಟಿ ಕಾಯ್ದೆ 66 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಈ ರೀತಿ ಬೆದರಿಕೆ ಬಂದಿರುವುದು ಇದೇ ಮೊದಲಲ್ಲ, ಯೋಗಿ ಸರ್ಕಾರ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಹಲವು ಬಾರಿ ಬೆದರಿಕೆ ಎದುರಿಸಿದ್ದಾರೆ.

    ಮೇ13ರಂದು ಬಿಜೆಪಿಯ ಶವಾಚರಣೆ ನಡೆಯುತ್ತದೆ: ಡಿ.ಕೆ.ಶಿವಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts