More

    ಅಂತೂ ಬೋನಿಗೆ ಬಿದ್ದ ಚಿರತೆ

    ಶಿಕಾರಿಪುರ: ಕಳೆದ ಮೂರು ತಿಂಗಳಿನಿಂದ ಮದಗ ಹಾರನಹಳ್ಳಿ ಸುತ್ತಮುತ್ತ ಜನರಲ್ಲಿ ಆತಂಕ ಮೂಡಿಸಿದ್ದ ಎರಡು ವರ್ಷದ ಹೆಣ್ಣು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೋಮವಾರ ಬಿದ್ದಿದೆ.
    ವಾರದಿಂದ ಹಗಲು ಹೊತ್ತಿನಲ್ಲಿಯೇ ಜನರಿಗೆ ಚಿರತೆ ಕಾಣಿಸಿಕೊಂಡಿತ್ತು. ಐದಾರು ನಾಯಿಗಳನ್ನು ಹೊತ್ತೊಯ್ದಿತ್ತು. ಹೀಗಾಗಿ ಸ್ಥಳೀಯರಲ್ಲಿ ಭಯದ ವಾತಾವರಣ ಉಂಟಾಗಿತ್ತು. ರೈತಾಪಿ ಜನರು ಕೊಟ್ಟಿಗೆಯಲ್ಲಿ ಹೊಲಗದ್ದೆಗಳಿಗೆ ಹೋಗಿ ಬರಲು ಹೆದರುವಂತಾಗಿ ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಮಾ.29ರಂದು ರಾತ್ರಿ ಮದಗ ಹಾರನಹಳ್ಳಿಯ ಎ.ಕೆ.ಕಾಲನಿ ಪಕ್ಕದ ತೋಟದಲ್ಲಿ ಬೋನು ಇಟ್ಟಿದ್ದರು. ಈ ತೋಟದಲ್ಲಿ ಸ್ಪ್ರಿಂಕ್ಲರ್ ಇರುವ ಕಾರಣ ನೀರು ಕುಡಿಯಲು ಮತ್ತು ಬಿಸಿಲಿನ ತಾಪ ತಣಿಸಿಕೊಳ್ಳಲು ನೀರಿಗೆ ಮೈಯೊಡ್ಡಿ ನಿಲ್ಲುತ್ತಿತ್ತು ಎನ್ನಲಾಗಿದೆ.
    ತಕ್ಷಣ ಡಿಸಿಎಫ್ ಸಂತೋಷಕುಮಾರ್, ಎಸಿಎಫ್ ಸುರೇಶ್ ಮಾರ್ಗದರ್ಶನದಲ್ಲಿ ಡಿಎಫ್‌ಒ ರೇವಣಸಿದ್ದಯ್ಯ ಹಿರೇಮಠ ಅವರು ಸಿಬ್ಬಂದಿ ಅಮರೇಶ್, ಸಂತೋಷ, ಅಮಿತ್, ಆಂಜನೇಯ ಅವರೊಂದಿಗೆ ಕಾರ್ಯಪ್ರವೃತ್ತರಾಗಿ ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಅದನ್ನು ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ನೀರು ಮತ್ತು ಕಾಡು ಸಮೃದ್ಧವಾಗಿರುವ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ. 3 ವರ್ಷದ ಹಿಂದೆಯೂ ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts