More

    8 ದಿನಗಳವರೆಗೆ ಸಿಐಡಿ ತೆಕ್ಕೆಯಲ್ಲಿ ಗಿರೀಶ

    ಹುಬ್ಬಳ್ಳಿ: ನ್ಯಾಯಾಲಯದ ಅನುಮತಿ ಮೇರೆಗೆ ಅಂಜಲಿ ಅಂಬಿಗೇರ ಹಂತಕ ಗಿರೀಶ ಸಾವಂತನ ವಿಚಾರಣೆಗೆ ಸಿಐಡಿ ಅಧಿಕಾರಿಗಳು ಗುರುವಾರದಿಂದ 8 ದಿನಗಳ ಕಾಲ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
    ಹಂತಕ ಗಿರೀಶನನ್ನು ಇಲ್ಲಿಯ ಮೂರನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಹೆಚ್ಚಿನ ವಿಚಾರಣೆಗಾಗಿ 15 ದಿನಗಳವರೆಗೆ ತಮ್ಮ ವಶಕ್ಕೆ ನೀಡಬೇಕೆಂದು ಕೋರಿ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ ನ್ಯಾಯಾಧೀಶರು, ಎಂಟು ದಿನಗಳವರೆಗೆ ಸಿಐಡಿ ವಶಕ್ಕೆ ಅನುಮತಿ ನೀಡಿದ್ದಾರೆ. ಅನುಮತಿ ಸಿಗುತ್ತಿದ್ದಂತೆ ಹಂತಕನನ್ನು ಬೆಂಡಿಗೇರಿ ಠಾಣೆಗೆ ಕರೆದೊಯ್ಯಲಾಯಿತು.
    ಇದಕ್ಕೂ ಮೊದಲು ಸಿಐಡಿ ಅಧಿಕಾರಿಗಳು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹಂತಕ ಗಿರೀಶನನ್ನು ಬುಧವಾರ ತಮ್ಮ ವಶಕ್ಕೆ ತೆಗೆದುಕೊಂಡು ಗುರುವಾರ ಬೆಳಗಿನವರೆಗೂ ಸುದೀರ್ಘ ವಿಚಾರಣೆ ನಡೆಸಿದ್ದರು. ಅಧಿಕಾರಿಗಳ ಇನ್ನೊಂದು ತಂಡವು ಹತ್ಯೆಯಾದ ಅಂಜಲಿ ಮನೆ ಸುತ್ತಮುತ್ತಲಿನ ಜನರಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
    ಅಧಿಕಾರಿಗಳು ಅಂಜಲಿ ಮನೆ ಬಳಿ ಇರುವ ಬಿಜೆಪಿ ಯುವ ಮುಖಂಡ ಅನೂಪ ಬಿಜವಾಡ ಮನೆಗೆ ತೆರಳಿ ಅಂಜಲಿ ಮತ್ತು ಗಿರೀಶ ನಡುವಿನ ಒಡನಾಟದ ಬಗ್ಗೆ ಹಾಗೂ ಇತರ ವಿಷಯಗಳ ಕುರಿತು ಮಾಹಿತಿ ಪಡೆದಿದ್ದಾರೆ ಹಾಗೂ ಅವರ ಮನೆಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾ ಫೂಟೇಜ್‌ನ ಡಿವಿಆರ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts