More

    Video ] ಅಷ್ಟಕ್ಕೂ ಹೆಣ್ಣು ಜಿರಾಫೆಯ ಮನಗೆಲ್ಲಲು ಇಲ್ಲಿ ನಡೆಯುತ್ತಿರುವುದಾದರೂ ಏನು ನೋಡಿ…

    ಅಂತರ್ಜಾಲ ಬಳಕೆ ಹೆಚ್ಚಾದಂತೆಲ್ಲ ವಿಡಿಯೋ ವೀಕ್ಷಣೆಗೇ ಜನ ಮುಗಿ ಬೀಳುತ್ತಿದ್ದಾರೆ.
    ಸಾಮಾಜಿಕ ಜಾಲತಾಣಗಳಲ್ಲೀಗ ಪ್ರಾಣಿ ಜಗತ್ತಿನ ಅಚ್ಚರಿಗಳ ವಿಡಿಯೋಗಳೇ ಹೆಚ್ಚು ವೈರಲ್ ಆಗುತ್ತಿವೆ.
    ಲಾಕ್​ಡೌನ್ ನ ಈ ಸಂದರ್ಭ ಜಗತ್ತಿನ ಆಗು ಹೋಗುಗಳನ್ನು, ಅಚ್ಚರಿಗಳನ್ನು ಕಣ್ತುಂಬಿಕೊಳ್ಳಲು ಹಾದಿ ಮಾಡಿಕೊಟ್ಟಂತಿದೆ.
    ಆಗಾಗ್ಗೆ ಪರಭಕ್ಷಕ ಅಥವಾ ಸರೀಸೃಪಗಳೇ ವಿಡಿಯೋಗಳಲ್ಲಿ ನಾಯಕನ ಪಾತ್ರಧಾರಿಯಾಗುತ್ತಿವೆ. ಆದಾಗ್ಯೂ, ಜಿರಾಫೆಗಳು ಜಗಳವಾಡುವ ವೀಡಿಯೊವನ್ನು ನೀವು ಎಷ್ಟು ಸಲ ನೋಡಿದ್ದೀರಿ? ಇಲ್ಲಿರುವ ಎರಡು ಜಿರಾಫೆಗಳ ಕಾದಾಟದ ದೃಶ್ಯಾವಳಿ ನಿಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುವುದರಲ್ಲಿ ಸಂದೇಹವಿಲ್ಲ.

    ಹಾಗಂತ ಈ ವಿಡಿಯೋ ಏನು ಹೊಸದಲ್ಲ. ಆದರೆ ಇತ್ತೀಚೆಗೆ ಐಎಫ್‌ಎಸ್ ಅಧಿಕಾರಿ ಸುಧಾ ರಾಮೆನ್ ಅವರು ಟ್ವೀಟ್ ಮಾಡಿದ ನಂತರ ವೀಡಿಯೊ ಮತ್ತೆ ಕಾಣಿಸಿಕೊಂಡಿದೆ. ಕೆಲವು ವರ್ಷಗಳ ಹಿಂದೆ ಇದನ್ನು ಕ್ರುಗರ್ ಸೈಟಿಂಗ್ಸ್ ’ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಅಸಾಮಾನ್ಯ ಮತ್ತು ಅಪರೂಪದ ದೃಶ್ಯವನ್ನು 48 ವರ್ಷದ ವಾಲ್ಟರ್ ಬೆಕರ್ ಸೆರೆಹಿಡಿದಿದ್ದಾರೆ ಎಂದು ಯೂಟ್ಯೂಬ್ ಪೋಸ್ಟ್​​​​ನಲ್ಲಿ ಶೀರ್ಷಿಕೆ ವಿವರಿಸುತ್ತದೆ.
    ಇವೆರಡು ಗಂಡು ಜಿರಾಫೆಗಳಾಗಿದ್ದು, ತಮ್ಮ ಪ್ರಾಬಲ್ಯ ಪ್ರದರ್ಶಿಸಲು ಅಥವಾ ಈ ಪ್ರದೇಶದಲ್ಲಿರುವ ಹೆಣ್ಣು ಜಿರಾಫೆಗಳನ್ನು ಒಲಿಸಿಕೊಳ್ಳಲು ಇವೆರಡು ಹೀಗೆ ಕಾದಾಟದಲ್ಲಿ ತೊಡಗಿರುವ ಸಾಧ್ಯತೆ ಇರುತ್ತದೆ ಎಂದು ಈ ಪೋಸ್ಟ್​​ನಲ್ಲಿ ವಿವರಿಸಲಾಗಿದೆ.
    ಜಿರಾಫೆಗಳು ಪರಸ್ಪರ ಹೋರಾಡಲು ತಮ್ಮ ಕುತ್ತಿಗೆಯನ್ನು ಬಳಸಿಕೊಂಡಿವೆ. ಅವು ಹೊಂದಿರುವ ಅತ್ಯಂತ ಶಕ್ತಿಶಾಲಿ ಮತ್ತು ಕುಶಲ ಶಸ್ತ್ರಾಸ್ತ್ರ ಇವಾಗಿವೆ.
    ಈ ವಿಡಿಯೋ ಭಾರೀ ವೈರಲ್ ಆಗಿದೆ. ಹಳೆಯದಾದರೂ ಜಿರಾಫೆಗಳ ಜೀವನದ ವಿವಿಧ ಮಗ್ಗಲುಗಳನ್ನು ಪರಿಚಯಿಸುವಂತಿದೆ. ನೆಟ್ಟಿಗರು ಇದನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 20,000 ಸಲ ವೀಕ್ಷಿಸಲಾಗಿದೆ. 

    ರಾಹುಲ್ ಗಾಂಧಿ ಜತೆಗಿನ ಸಂವಾದದಲ್ಲಿ ವಲಸೆ ಕಾರ್ಮಿಕರು ಬಿಚ್ಚಿಟ್ಟ ನೋವಿನ ಸಂಗತಿ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts