More

    ಕಪ್ಪುವರ್ಣೀಯನ ಹತ್ಯೆ: ಹಂತಕ ಪೊಲೀಸ್​ಗೆ 22.5 ವರ್ಷ ಜೈಲು ಶಿಕ್ಷೆ

    ವಾಷಿಂಗ್ಟನ್​: ಜಾರ್ಜ್​ ಫ್ಲಾಯ್ಡ್​ ಎಂಬ ಕಪ್ಪುವರ್ಣೀಯನನ್ನು ಹಿಂಸೆ ನೀಡಿ ಹತ್ಯೆಗೈದಿದ್ದ ಮಾಜಿ ಪೊಲೀಸ್​ ಅಧಿಕಾರಿ ಡೆರೆಕ್ ಚೌವಿನ್ಗೆ 22.5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಫ್ಲಾಯ್ಡ್​ನ ಕುತ್ತಿಗೆಯ ಮೇಲೆ ಮಂಡಿಯೂರಿ ಉಸಿರುಗಟ್ಟಿಸಿದ್ದ ಶ್ವೇತವರ್ಣೀಯ ಚೌವಿನ್​ನ ವರ್ತನೆಯು ಅಮೆರಿಕದಲ್ಲಿ ಜನಾಂಗೀಯ ಶೋಷಣೆಯ ವಿರುದ್ಧ ಭಾರೀ ಜನಾಂದೋಲನವನ್ನೇ ಸೃಷ್ಟಿಸಿತ್ತು.

    2020 ರ ಮೇ 25 ರಂದು ಅಂಗಡಿಯೊಂದರಲ್ಲಿ ನಕಲಿ ನೋಟು ನೀಡಿದ್ದ ಹಿನ್ನೆಲೆಯಲ್ಲಿ ಫ್ಲಾಯ್ಡ್​ನನ್ನು ಬಂಧಿಸಲು ಬಂದಿದ್ದ ಮಿನ್ನಿಯಾಪೊಲೀಸ್​ ಪ್ರದೇಶದ ಮೂವರು ಶ್ವೇತವರ್ಣೀಯ ಪೊಲೀಸರು ಅಮಾನುಷವಾಗಿ ವರ್ತಿಸಿ, ಆತನನ್ನು ಕೊಂದೇ ಬಿಟ್ಟಿದ್ದರು. ಫ್ಲಾಯ್ಡ್​ನ ಕುತ್ತಿಗೆಯ ಮೇಲೆ ಚೌವಿನ್ ತನ್ನ ಮೊಣಕಾಲನ್ನು ಊರಿ ಸುಮಾರು 9 ನಿಮಿಷಗಳವರೆಗೆ ಆತ ಉಸಿರಾಡಲು ಆಗದೆ ನರಳಿ ಸಾಯುವಂತೆ ಮಾಡಿದ್ದು ವರದಿಯಾಗಿತ್ತು.

    ಇದನ್ನೂ ಓದಿ: ರೇಖಾ ಕದಿರೇಶ್​ ಕೊಲೆ ಪ್ರಕರಣ: ತನಿಖೆಯ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆರೋಪಿಗಳು!

    45 ವರ್ಷ ವಯಸ್ಸಿನ ಡೆರೆಕ್​ ಚೌವಿನ್​ಗೆ ಇಪ್ಪತ್ತೆರಡೂವರೆ ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದ ಮಿನ್ನಿಯಾಪೋಲಿಸ್ ಕೋರ್ಟ್, ಉತ್ತಮ ವರ್ತನೆ ತೋರಿದಲ್ಲಿ 15 ವರ್ಷಗಳ ನಂತರ ಆತನನ್ನು ಪೆರೋಲ್​ ಮೇಲೆ ಬಿಡುಗಡೆ ಮಾಡಬಹುದು ಎಂದಿದೆ. (ಏಜೆನ್ಸೀಸ್)

    ಹಳಿತಪ್ಪಿದ ರಾಜಧಾನಿ ಎಕ್ಸ್​ಪ್ರೆಸ್! ಮಹಾರಾಷ್ಟ್ರದ ಕರ್ಬುಡೆ ಟನೆಲ್ಲಲ್ಲಿ ಘಟನೆ

    4 ಕೋಟಿ ರೂ. ಸಂಗ್ರಹಿಸಿದ ಮಾಹಿತಿ; ಇಂದು ಇಡಿ ಕಛೇರಿಯಲ್ಲಿ ಮಾಜಿ ಸಚಿವ ಅನಿಲ್​ ದೇಶ್​ಮುಖ್​ ವಿಚಾರಣೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts